Headlines

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮನೆ ಮೇಲೆ ಈಡಿ ದಾಳಿ ರಾಜಕೀಯ ಪ್ರೇರಿತ|ED

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ


ರಿಪ್ಪನ್‌ಪೇಟೆ : ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ಅವರ ಮನೆ ಮೇಲೆ ನಡೆದ ಈಡಿ ದಾಳಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯವಾಗಿ ಅವರನ್ನು ಎದುರಿಸಲು ಸಾಧ್ಯವಾಗದೆ ಇಂತಹ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎಂ ಪರಮೇಶ್ ಜಂಟಿ ಪತ್ರೀಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರದ ಈಡಿ ದಾಳಿ ರಾಜಕೀಯ ಪ್ರೇರಿತವಾಗಿದ್ದು,ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ರವರ ಜನಪ್ರಿಯತೆಯನ್ನು ಕುಗ್ಗಿಸುವ ಪ್ರಯತ್ನವಾಗಿದೆ. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗುವ ಸಂದರ್ಭದಲ್ಲಿ ಸಾವಿರಾರು ಜನ ಇವರ ಬೆಂಬಲಕ್ಕೆ ನಿಲ್ಲುವುದರ ಜೊತೆಗೆ ಕೆಲವು ತಾಲ್ಲೂಕುಗಳಲ್ಲಿ ಇವರಿಗೆ ಅಭಿನಂದನೆಗಳ ಮಹಾಪೂರ ಒದಗಿರುವುದನ್ನು ನೋಡಿ ವಿರೋಧ ಪಕ್ಷದವರು ಆರ್ ಎಂಎಂ ರನ್ನು ಮಟ್ಟ ಹಾಕಲು ಇಡಿ ದಾಳಿ ನಡೆಸಿದ್ದಾರೆ ಎಂದರು.

ಇಂತಹ ಯಾವುದೇ ದಾಳಿಗೂ ಆರ್ ಎಂ ಮಂಜುನಾಥ್ ಗೌಡ ಬಗ್ಗುವುದು ಇಲ್ಲ ಕುಗ್ಗುವುದು ಇಲ್ಲ.ಕೆಲ ವರ್ಷಗಳ ಹಿಂದೆ ಸುಳ್ಳು ಆರೋಪಗಳನ್ನು ಹೊರಿಸಿ ಅವರ ಮೇಲೆ ಗೂಬೆ ಕೂರಿಸುವ ಯತ್ನ ನಡೆದಿತ್ತು ಅದನ್ನು ಸಮರ್ಥವಾಗಿ ಎದುರಿಸಿ ನ್ಯಾಯಲಯದಲ್ಲಿ‌ಕ್ಲೀನ್ ಚಿಟ್ ಪಡೆದು ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದಿರುವ ಗೌಡರ ಅಭೂತಪೂರ್ವ ಜನಬೆಂಬಲಕ್ಕೆ ಬೆದರಿರುವ ವಿರೋಧಿಗಳು ಇಂತಹ ದಾಳಿಯ ಮೂಲಕ ಮಟ್ಟ ಹಾಕಲು ಯತ್ನಿಸುತಿದ್ದಾರೆ ಎಂದರು.

Leave a Reply

Your email address will not be published. Required fields are marked *