ರಿಪ್ಪನ್ ಪೇಟೆಯಲ್ಲಿ ಏಪ್ರಿಲ್ 5ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಅವದೂತ ವಿನಯ್ ಗುರೂಜೀ ಮಾರ್ಗದರ್ಶನದಲ್ಲಿ ಉಡುಪಿಯ ಆದರ್ಶ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
30ಕ್ಕೂ ಅಧಿಕ ವಿವಿಧ ವಿಭಾಗಗಳ ಹಿರಿಯ ವೈದ್ಯರುಗಳು ಹಾಗೂ 60ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗಳು ಭಾಗಿ | 10 ದಿನದ ಉಚಿತ ಔಷಧಿ ವಿತರಣೆ
ರಿಪ್ಪನ್ ಪೇಟೆ: ಪಟ್ಟಣದ ಓಂ ಶ್ರೀ ಮಾತೃಶ್ರೀ ಸೇವಾ ಸಂಸ್ಥೆ ಹಾಗೂ ಉಡುಪಿ ಆದರ್ಶ ಹಾಸ್ಪಿಟಲ್ ಸಂಯುಕ್ತವಾಗಿ ಏಪ್ರಿಲ್ 5ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.
ಪಟ್ಟಣದ ಓಂ ಶ್ರೀ ಮಾತೃಶ್ರೀ ಸೇವಾ ಸಂಸ್ಥೆಯ ನೂತನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧೂತ ಶ್ರೀ ವಿನಯ್ ಗುರೂಜಿಯವರ ಮಾರ್ಗದರ್ಶನದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಿಬಿರದಲ್ಲಿ 30ಕ್ಕೂ ಅಧಿಕ ವಿವಿಧ ವಿಭಾಗಗಳ ಹಿರಿಯ ವೈದ್ಯರುಗಳು ಹಾಗೂ 60ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗಳು ಭಾಗವಹಿಸಲಿದ್ದು, ತಪಾಸಣೆಗೊಂಡ ರೋಗಿಗಳಿಗೆ 10 ದಿನಗಳ ಉಚಿತ ಔಷಧಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷೆ ಲೇಖನಾ ಜಿ ಮಾತನಾಡಿ, ಅವಧೂತ ಶ್ರೀ ವಿನಯ್ ಗುರೂಜಿಯವರ ಆಶೀರ್ವಾದದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಜನತೆಗೆ ಆರೋಗ್ಯ ಮತ್ತು ಶಿಕ್ಷಣ ಸೇವೆಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಶಿಬಿರದಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞ ವೈದ್ಯರುಗಳಿಂದ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ್ ಎಸ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಹೇಮಾಂಬಿಕ, ಸಹ ಕಾರ್ಯದರ್ಶಿ ಪಿಯುಸ್ ಡಿಸೋಜಾ, ಖಜಾಂಚಿ ಸಬಾಸ್ಟಿನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.