ಆರೋಗ್ಯ ಭಾಗ್ಯದ ಮುಂದೆ ಎಲ್ಲಾ ಭಾಗ್ಯಗಳು ನಶ್ವರ – ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ
ಹೊಸನಗರ :  ಕಲುಷಿತ ವಾತಾವರಣ ಅಸಂಬದ್ಧ ಜೀವನ ಶೈಲಿ ದೇಹಕ್ಕೆ ಒಗ್ಗದ ಆಹಾರ ಕೆಟ್ಟ ಹವ್ಯಾಸಗಳಿಂದ ಮನುಷ್ಯನ ಆರೋಗ್ಯ ಕ್ಷಿ ಣಿಸುತ್ತಿದೆ ಇದರಿಂದ  ಹೃದಯ ದುರ್ಬಲವಾಗುತ್ತಿದೆ ಎಂದು ತಾಲೂಕು ತಹಸಿಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ವಿಶಾಲ ವ್ಯಕ್ತಪಡಿಸಿದರು.
ಅವರು ಇಂದು ಪಟ್ಟಣದ ಸಂತ ಅಂತೋನಿ ದೇವಾಲಯದ ಸ್ನೇಹಭವನದಲ್ಲಿ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಮತ್ತು ಐದೃಷ್ಟಿ ಕಣ್ಣಿನ ಆಸ್ಪತ್ರೆ ಸ್ತ್ರಿ ಬಂಧು ವಿವಿದೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ ಸಂಯುಕ್ತ ಆಶಯದಲ್ಲಿ ಏರ್ಪಡಿಸಿದ ಆರೋಗ್ಯ ಜಾಗೃತಿ ಮತ್ತು ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ ಆರೋಗ್ಯ ಭಾಗ್ಯ ಎಂಬುದು ನಾಣ್ಣುಡಿ ಆದರೆ ಬದಲಾದ ಕಾಲಘಟ್ಟದಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದೆ, ದಿನೇ ದಿನ ಹೆಚ್ಚುತಿರುವ ರೋಗರುಜಿನಗಳು ಮನುಷ್ಯನನ್ನು ಹೈರಾಣಗಿಸಿದೆ ಎಂದರು.
ಸಂತ ಅಂತೋನಿ ದೇವಾಲಯದ ಧರ್ಮ ಗುರುಗಳಾದ ಫಾ ಸೈಮನ್ ಹೊರಟ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಎಸ್ಎಂಎಸ್ಎಸ್ಎಸ್ ಸಂಸ್ಥೆಯ ನಿರ್ದೇಶಕ ಫಾ ಡಾ ಕ್ಲಿಫೆರ್ಡ್ ರೋಷನ್ ಪಿಂಟೋ ಪ್ರಸ್ತಾವಿಕ ನುಡಿ ನುಡಿದು ಆರೋಗ್ಯದ ಕಡೆ ನಿರ್ಲಕ್ಷ ಸಲ್ಲದು ಎಂದರು.
ಈ ಸಮಾರಂಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರು ದಸರಾ ಆಚರಣೆ ಸಮಿತಿ ಅಧ್ಯಕ್ಷರಾದ ಹಾ ಲಗದ್ದೆ ಉಮೇಶ್ ಸದಸ್ಯ ಬಜಾಜ್ ಗುರುರಾಜ್ ಸ್ತ್ರೀ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶಶಿಕಲಾ ಹರೀಶ್ ಶಿವಮೊಗ್ಗದ ಐ ದೃಷ್ಟಿ ಕಣ್ಣಿನ ಆಸ್ಪತ್ರೆಯ ಡಾ. ಮುರುಳಿಧರ್ ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗುರುಮೂರ್ತಿ ಕ್ಷೇತ್ರ ಆರೋಗ್ಯ ಶಿಕ್ಷಕಿ ಕರಿಬಸಮ್ಮ ಮೊದಲಾದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು
ಸುಮತಿ ಪ್ರಾರ್ಥಿಸಿದರು ಮಧುಸೂದನ್, ಸ್ವಾಗತಿಸಿದರು ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.
 
                         
                         
                         
                         
                         
                         
                         
                         
                         
                        
