ಚಕ್ರಾ , ಸಾವೇಹಕ್ಲು ಜಲಾಶಯಗಳಿಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ರವರಿಂದ ಬಾಗಿನ ಸಮರ್ಪಣೆ | Hosanagara
ಹೊಸನಗರ ತಾಲೂಕಿನ ಚಕ್ರಾ , ಸಾವೇಹಕ್ಲು ಜಲಾಶಯ ಭರ್ತಿಯಾಗಿದ್ದು ಗಮನ ಸೆಳೆಯುತ್ತಿದ್ದು ಜನರ ಮನಸೂರೆಗೊಂಡಿದೆ.
ಶುಕ್ರವಾರ ಅವಳಿ ಜಲಾಶಯಗಳಿಗೆ ತಾಲೂಕು ಆಡಳಿತ ಮತ್ತು ಕರಿಮನೆ ಗ್ರಾಪಂ ವತಿಯಿಂದ ತಹಶೀಲ್ದಾರ್ ರಶ್ಮೀ ಹಾಲೇಶ್, ಶುಕ್ರವಾರ ಎರಡು ಜಲಾಶಯಗಳಿಗೆ ಗಂಗಾರತಿ ಬೆಳಗಿ ಬಾಗಿನ ತೇಲಿ ಬಿಡುವ ಮೂಲಕ ಗೌರವ ಅರ್ಪಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ರಶ್ಮಿ ಹಾಲೇಶ್ ನಾಡಿನ ಬೆಳಕಿಗಾಗಿ ಸುಧೀರ್ಘ ಸೇವೆ ಗೈದಿರುವ ಎರಡು ಜಲಾಶಯಗಳಿಗೆ ಬಾಗಿನ ಸಲ್ಲಿಸುವ ಅವಕಾಶ ಓರ್ವ ಹೆಣ್ಣಾಗಿ ಸಿಕ್ಕಿರುವುದಕ್ಕೆ ಧನ್ಯತೆ ಸಿಕ್ಕಿದೆ. ಇದೊಂದು ಅಪೂರ್ಣ ತಾಣ. ಬಹುತೇಕ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದು ಬಾಗಿನ ಸಂಭ್ರಮಕ್ಕೆ ನೀಡಿತು ಎಂದರು.
ಈ ಸಂದರ್ಭದಲ್ಲಿ ಕೊಡಚಾದ್ರಿ ಪದವಿ ಕಾಲೇಜು ಸಮಿತಿ ಉಪಾಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾತನಾಡಿ ಅವಳಿ ಜಲಾಶಯ ವೀಕ್ಷಣೆಗೆ ಸ್ಥಳೀಯ ಮಟ್ಟದಲ್ಲೇ ಪಾಸ್ ನೀಡಬೇಕು ಮತ್ತು ಪ್ರವಾಸೋಧ್ಯಮ ಅಭಿವೃದ್ಧಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮನವಿ ಮಾಡಿದರು.
ಕೆಪಿಸಿ ಸಹಾಯಕ ಎಂಜನಿಯರ್ (ಗೇಟ್) ವಿನಯಕುಮಾರ ಕೆ, ಅವಳಿ ಡ್ಯಾಂ ವೀಕ್ಷಣೆಗೆ ಸಂಬಂಧಿಸಿ ಸ್ಥಳೀಯವಾಗಿ ಪಾಸ್ ನೀಡುವ ವಿಚಾರವನ್ನು ಶಾಸಕರು ಕೂಡ ಪ್ರಸ್ತಾಪಿಸಿದ್ದಾರೆ. ತಹಶೀಲ್ದಾರ್ ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಈ ಸಂಧರ್ಭದಲ್ಲಿ ಕರಿಮನೆ ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಕರವಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಕೆಪಿಸಿ ಅಧಿಕಾರಿಗಳಾದ ಓಂಕಾರಪ್ಪ, ಹೊಂಬೇಗೌಡ್ರು, ಬಿಇಒ ಕೃಷ್ಣಮೂರ್ತಿ, ರತ್ನಾಕರಗೌಡ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ್ ಪಟೇಲ್, ಶಾಸಕ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ದೇವೇಂದ್ರ ನಾಯ್ಕ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ವಿಶೇಷವಾಗಿ ಮಹಿಳಾ ಸಿಬ್ಬಂದಿಗಳು, ಗ್ರಾಪಂ ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು.
ಸಾವೇಹಕ್ಲು ಜಲಾಶಯ ಭರ್ತಿಯಾಗಿದ್ದು ಗಮನ ಸೆಳೆಯುತ್ತಿದ್ದು ಜನರ ಮನಸೂರೆಗೊಂಡಿದೆ.ಕೆಲವು ದಿನಗಳ ಹಿಂದೆ ತಾಲೂಕಿನ ಹಿರಿಯ ಪತ್ರಕರ್ತ ರವಿ ಬಿದನೂರು ರವರು ಅವಳಿ ಜಲಾಶಯಗಳಿಗೆ ಬಾಗಿನ ಭಾಗ್ಯವಿಲ್ಲ ಎಂಬ ಲೇಖನ ಪ್ರಕಟಿಸಿದ್ದರು.
ಹಿರಿಯ ಪತ್ರಕರ್ತರ ವರದಿಯಿಂದ ಎಚ್ಚೆತ್ತ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ , ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಅನೇಕ ಮುಖಂಡರು ಬಾಗಿನ ಅರ್ಪಿಸಿದ್ದರು.