Headlines

ವಾರಾಹಿ ನದಿಯಲ್ಲಿ ಮುಳುಗಿ ಮಹಿಳೆ ಸಾವು

A 53-year-old woman from Kundapura drowned in the Varahi River near Bhagamane, close to Hosangadi, while on a trekking trip with friends. Police have registered a case and are investigating the incident.

ಹೊಸಂಗಡಿ ಸಮೀಪದ ಭಾಗಿಮನೆ ಬಳಿ ವಾರಾಹಿ ನದಿಯ ನೀರಿನಲ್ಲಿ ಮುಳುಗಿ ಕುಂದಾಪುರ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ವರದಿಯಾಗಿದೆ.

ದುರಂತದಲ್ಲಿ ಮೃತಪಟ್ಟವರನ್ನು ಕುಂದಾಪುರ ನಗರದ ಮಯೂರ ಮೆಡಿಕಲ್ ಮಾಲೀಕೆಯಾಗಿರುವ ಶುಭಶ್ರೀ (53) ಎಂದು ಗುರುತಿಸಲಾಗಿದೆ.

ಅವರು ತಮ್ಮ ಜಿಮ್ ಕ್ಲಬ್‌ನ ಗೆಳತಿಯರೊಂದಿಗೆ ಭಾನುವಾರ ಬೆಳಿಗ್ಗೆ ತಾಲ್ಲೂಕಿನ ಹೊಸಂಗಡಿ ಸಮೀಪದ ಮೆಟ್ಕಲ್‌ಗುಡ್ಡಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದರು ಎನ್ನಲಾಗಿದೆ.

ಟ್ರೆಕ್ಕಿಂಗ್ ಮುಗಿಸಿ ಭಾಗಿಮನೆ ಎಂಬಲ್ಲಿ ವಾರಾಹಿ ನದಿ ಅಂಚಿನ ಕಲ್ಲುಬಂಡೆಯ ಮೇಲೆ ಕುಳಿತಿದ್ದ ವೇಳೆ, ಆಕಸ್ಮಿಕವಾಗಿ ಹೆಚ್ಚಿದ ನೀರಿನ ಹರಿವಿನಿಂದ ಆಯತಪ್ಪಿ ನದಿಗೆ ಬಿದ್ದಿದ್ದಾರೆ. ಪರಿಣಾಮವಾಗಿ ಅವರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತ ಶುಭಶ್ರೀ ಅವರು ನಗರದ ಚಿಕನ್‌ ಸಾಲ್ ರಸ್ತೆಯ ನಿವಾಸಿಯಾಗಿದ್ದು, ಓರ್ವ ಪುತ್ರನನ್ನು ಅಗಲಿದ್ದಾರೆ.

ಘಟನೆ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರೆದಿದೆ.

About The Author

Exit mobile version