Headlines

ಕೆಲಸಕ್ಕೆಂದು ಬಂದವ ಬೈಕ್ ಪಡೆದು ಪರಾರಿ; ಪ್ರಕರಣ ದಾಖಲು

ಕೆಲಸಕ್ಕೆಂದು ಬಂದವ ಬೈಕ್ ಪಡೆದು ಪರಾರಿ; ಶಿವಮೊಗ್ಗದಲ್ಲಿ ಪ್ರಕರಣ ದಾಖಲು

A man who came seeking work allegedly fled with a Hero HF Deluxe motorcycle after gaining the owner’s trust in Shivamogga. A case has been registered at Kote Police Station.

ಶಿವಮೊಗ್ಗ: ಕೆಲಸಕ್ಕೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ನಂಬಿಕೆ ಗಳಿಸಿ ಬೈಕ್ ಪಡೆದುಕೊಂಡು ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ನಡೆದಿದೆ.

ದುರ್ಗಮ್ಮ ಬೀದಿ ನಿವಾಸಿ ರಾಘವೇಂದ್ರ ಅವರ ಹೀರೋ ಹೆಚ್.ಎಫ್ ಡಿಲಕ್ಸ್ ಬೈಕ್ ಕಳುವಾಗಿದ್ದು, ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಜುಲೈ 10ರಂದು ಬೆಳಿಗ್ಗೆ ರಾಘವೇಂದ್ರ ಅವರು ಗಾರೆ ಕೆಲಸಕ್ಕೆ ತೆರಳಲು ತಮ್ಮ ಬೈಕ್‌ನಲ್ಲಿ ವಿದ್ಯಾನಗರದ ದುರ್ಗಾಂಬ ಬೀದಿಗೆ ಬಂದಿದ್ದರು. ಈ ವೇಳೆ ಮೇಸ್ತ್ರಿ ಶಿವಣ್ಣ ಅವರೊಂದಿಗೆ ಕೆಲಸಕ್ಕೆಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬನಿದ್ದ.ಮೇಸ್ತ್ರಿ ಶಿವಣ್ಣ ಅವರ ಸೂಚನೆಯಂತೆ, ಸಹ ಕೆಲಸಗಾರ ನಾಗರಾಜ್ ಅವರನ್ನು ನವುಲೆಯಲ್ಲಿರುವ ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರಲು ರಾಘವೇಂದ್ರ ಅವರು ತಮ್ಮ ಬೈಕ್ ಅನ್ನು ಆ ಅಪರಿಚಿತ ವ್ಯಕ್ತಿಗೆ ನೀಡಿದ್ದರು.

ಆದರೆ, ನವುಲೆಗೆ ನಾಗರಾಜ್ ಮಾತ್ರ ಆಗಮಿಸಿದ್ದು, ಬೈಕ್ ತೆಗೆದುಕೊಂಡು ಹೋದ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾನೆ.ಬಳಿಕ ಮೇಸ್ತ್ರಿ ಶಿವಣ್ಣ ಅವರನ್ನು ವಿಚಾರಿಸಿದಾಗ, ಆ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಕಳವುಗೈದ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Exit mobile version