11 ಲಕ್ಷ ಹಣದೊಂದಿಗೆ ಪರಾರಿಯಾದ ಅಂಗಡಿಯಲ್ಲಿ ಕೆಲಸಕ್ಕಿದ್ದ ರಾಜಸ್ಥಾನದ ಯುವಕ
ಶಿಕಾರಿಪುರ: ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಮಾಲೀಕರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದು, ಆತನ ಸುಳಿವು ಸಿಗದ ಹಿನ್ನೆಲೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ.
ಮೇ 2ರಂದು ಮಧ್ಯಾಹ್ನದ ಅಡುಗೆ ಮಾಡುವಂತೆ ಸೂಚಿಸಿ ಸೆಯನ್ ಸಿಂಗ್ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಎಂಬಾತನಿಗೆ ಮನೆ ಬೀಗ ಕೊಟ್ಟು ಕಳುಹಿಸಿದ್ದರು.
ಸಂಜೆ 4 ಗಂಟೆಯಾದರು ಮಹೇಂದ್ರ ಅಂಗಡಿಗೆ ಹಿಂತಿರುಗಿರಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಸೆಯನ್ ಸಿಂಗ್ ಮನೆ ಬಳಿ ಪರಿಶೀಲಿಸಿದಾಗ ಬೀಗ ಹಾಕಲಾಗಿತ್ತು.
ಮನೆ ಬೀಗ ಒಡೆದು ಸೆಯನ್ ಸಿಂಗ್ ಒಳಗೆ ಹೋಗಿ ಪರಿಶೀಲಿಸಿದಾಗ ಕೊಠಡಿಯೊಳಗೆ ಡಬ್ಬಿಯಲ್ಲಿ ಇಟ್ಟಿದ್ದ 11 ಲಕ್ಷ ರೂ. ಹಣ ನಾಪತ್ತೆಯಾಗಿತ್ತು. ಹಣದೊಂದಿಗೆ ಮಹೇಂದ್ರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಜಸ್ಥಾನಕ್ಕೆ ಕರೆ ಮಾಡಿದಾಗಲು ಆತನ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈದ್ ಮಿಲಾದ್ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ, ಡಿಜೆ, ಸಿಡಿಮದ್ದು ನಿಷೇಧ - ಡಿಸಿ ಆದೇಶ Shivamogga district…
ದೀರ್ಘಕಾಲದಿಂದ ಗೈರುಹಾಜರಾಗಿದ್ದ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಜಾಗೃತಿ ಅಭಿಯಾನ Awareness campaign conducted by Government High School,…
ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು Gold mangalsutra…
ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ , ಗರ್ಭಿಣಿ! ಆರೋಪಿಯ ಬಂಧನ A 16-year-old minor…
ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…
ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…