ಅಕ್ರಮ ಮರಳು ಸಾಗಾಟ: 10 ಟ್ರ್ಯಾಕ್ಟರ್, ಜೆಸಿಬಿ, ಲಾರಿ ವಶಕ್ಕೆ!
ಶಿವಮೊಗ್ಗ : ಅಕ್ರಮ ಮರಳು ಸಾಗಾಟ ನಡೆಸುತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 10 ಟ್ರ್ಯಾಕ್ಟರ್ ಜೆಸಿಬಿ ಹಾಗೂ ಲಾರಿಯನ್ನು ವಶಕ್ಕೆ ಪಡೆದ ಘಟನೆ ಹಾಡೊನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಮುಂಜಾನೆ ಎಸಿ ಸತ್ಯನಾರಾಯಣ ನೇತೃತ್ವದಲ್ಲಿ ಹಾಡೋನಹಳ್ಳಿ ಆಕ್ರಮ ಮರಳು ದಂಧೆಯ ಮೇಲೆ ದಾಳಿ ಮಾಡಿದ್ದು ಈ ದಾಳಿಯ ವೇಳೆ ಸುಮಾರು 10 ಜೆಸಿಬಿ ಲಾರಿ, ಹತ್ತಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಸ್ಥಳದಲ್ಲಿದ್ದವು.
ಆದರೆ ಸಿಬ್ಬಂದಿಗಳು ಕಡಿಮೆ ಇದ್ದರಿಂದ ದಾಳಿಯ ವೇಳೆ ಕೆಲವು ಜೆಸಿಬಿ , ಟ್ರ್ಯಾಕ್ಟರ್, ಲಾರಿಗಳು ತಪ್ಪಿಸಿಕೊಂಡಿದ್ದು ಹಲವು ವೆಹಿಕಲ್ ಗಳಿಗೆ ನಂಬರ್ ಗಳಿಲ್ಲದಿರುವುದೇ ದುರಂತ.
ಈ ದಾಳಿಯ ವೇಳೆ ಎಸಿ ನೇತೃತ್ವದ ತಂಡ ನಾಲ್ಕು ಜೆಸಿಬಿ, ಎಂಟು ಟ್ಯಾಕ್ಟರ್ ಗಳನ್ನು ಪಶಪಡಿಸಿಕೊಂಡು ಮೂರು ಲಕ್ಷದ ಅರವತ್ತು ಸಾವಿರ ದಂಡವನ್ನು ಸ್ಥಳದಲ್ಲೇ ವಿಧಿಸಿದ್ದಾರೆ.
ಈ ದಾಳಿಯಲ್ಲಿ ಎಸಿ ಸತ್ಯನಾರಾಯಣ, ತಹಸೀಲ್ದಾರ್ ರಾಜೀವ್, ಆರ್ ಐ ಮಹಾರುದ್ರಪ್ಪ, ಹಾಗೂ ಅಧಿಕಾರಿಗಳು ಇದ್ದರು.
ಕರ್ನಾಟಕ SIR ಅವಧಿ ಮತ್ತೆ ವಿಸ್ತರಣೆ: ಆಗಸ್ಟ್ 17ರವರೆಗೆ ಮನೆ ಮನೆಗೆ BLO ಭೇಟಿ ; ಅಕ್ಟೋಬರ್ 27ಕ್ಕೆ ಅಂತಿಮ…
RIPPONPETE | ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧೀರ್ ಪಿ , ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಆಯ್ಕೆ –…
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಮನನೊಂದು ವಿಷ ಸೇವಿಸಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವು A NEET aspirant…
ಆಗುಂಬೆಯಿಂದ ರಿಪ್ಪನ್‌ಪೇಟೆವರೆಗೆ ಪೊಲೀಸರ ಚೇಸಿಂಗ್ ಪ್ರಕರಣ : ಕಾರು ಬಿಟ್ಟು ಕಾಡಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ Agumbe Police arrested…
ಎಂಟು ಕಾಲು, ಮೂರು ಕಿವಿ, ಎರಡು ಬಾಲ, ಎರಡು ನಾಲಿಗೆ ಇರುವ ಕುರಿ ಜನನ - ಗ್ರಾಮಸ್ಥರಲ್ಲಿ ಅಚ್ಚರಿ A…
ಆನಂದಪುರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ : ಬಂಗಾರದ ನಾಣ್ಯಗಳ ನೀಡಿ ₹9.60 ಲಕ್ಷ ವಂಚನೆ - ನಗದು ಸಹಿತ ಆರೋಪಿ…