ಪ್ಲೀಸ್..! ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ – ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟು SSLC ವಿದ್ಯಾರ್ಥಿಯ ವಿಚಿತ್ರ ಬೇಡಿಕೆ
ಚಿಕ್ಕೋಡಿ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದ್ದು, ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ವಿಚಿತ್ರ ಬೇಡಿಕೆಯಿಟ್ಟಿರುವ ಬರವಣಿಗೆಗಳು ಬೆಳಗಾವಿಯ ಚಿಕ್ಕೋಡಿ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಲ್ಲಿ ಪತ್ತೆಯಾಗಿದೆ.
ನಾನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಿದ್ದಾಳೆ. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ. ಈ 500 ರೂ. ಹಣದಲ್ಲಿ ಚಹಾ ಕುಡಿರಿ ಸರ್ ಎಂದು 500 ರೂ. ನೋಟು ಇಟ್ಟು ವಿದ್ಯಾರ್ಥಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟಿರುವ ಬರವಣಿಗೆ ಪತ್ತೆಯಾಗಿದೆ.
ಪ್ಲೀಸ್ ಮಿಸ್, ಸರ್ ನನ್ನನ್ನು ಪಾಸ್ ಮಾಡಿ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ ಎಂದು ಬರೆದಿದ್ದು, ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ ಎಂದು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾರೆ.
ಹೀಗೆ ಹಲವು ಚಿತ್ರ, ವಿಚಿತ್ರ ಉತ್ತರ ಬರೆಯುವ ಮೂಲಕ ಬೇಡಿಕೆಯಿಟ್ಟಿರುವ ವಿದ್ಯಾರ್ಥಿಗಳ ಬರವಣಿಗೆಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟಕ್ಕೆ ಹೊಸನಗರ ತಾಲ್ಲೂಕು ವಕೀಲರ ಸಂಘದ ಸಂಪೂರ್ಣ ಬೆಂಬಲ Hosanagara Taluk Advocates Association extends…
ಅಕ್ರಮ ಬಂದೂಕಿನಿಂದ ಬೀದಿ ನಾಯಿಯ ಬರ್ಬರ ಹತ್ಯೆ - ಆರೋಪಿ ಅರೆಸ್ಟ್! Sagar police arrested a man accused…
ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ: ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನ Free 31-day mobile phone repair training for…
ಹೊಸನಗರದಲ್ಲಿ ನಾಳೆ ಕಸ್ತೂರಿರಂಗನ್ ವರದಿ ವಿರೋಧಿಸಿ ಪಾದಯಾತ್ರೆ, ಬಹಿರಂಗ ಸಭೆ Farmers and agricultural workers will hold a…
ಸಾಗರ: ಕಸ್ತೂರಿ ರಂಗನ್ ವರದಿ ವಿರುದ್ಧ ರೈತರ ಆಕ್ರೋಶ; ಬ್ಯಾರಿಕೇಡ್ ಕಿತ್ತೆಸೆದು ಪ್ರತಿಭಟನೆ Farmers staged a massive protest…
ಇಂಡಿಯಾ ಪೋಸ್ಟ್‌ನಲ್ಲಿ 25,000ಕ್ಕೂ ಹೆಚ್ಚು ಹುದ್ದೆ: 10ನೇ ತರಗತಿ ಪಾಸಾದವರಿಗೆ ಅವಕಾಶ, ಪರೀಕ್ಷೆ ಇಲ್ಲದೆ ನೇಮಕಾತಿ India Post GDS…