ತನ್ನ ಪತ್ನಿಯ ಸಹವಾಸಕ್ಕೆ ಬರಬೇಡ ಎಂದವನ ದೇಹವನ್ನು ಪೀಸ್ ಪೀಸ್ ಮಾಡಿ ನದಿಗೆ ಎಸೆದ ಹಂತಕರು |

ತನ್ನ ಪತ್ನಿಯ ಸಹವಾಸಕ್ಕೆ ಬರಬೇಡ ಎಂದವನ ದೇಹವನ್ನು ಪೀಸ್ ಪೀಸ್ ಮಾಡಿ ನದಿಗೆ ಎಸೆದ ಹಂತಕರು |

ಗಣಪತಿ ಹಬ್ಬದಂದು ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹೆಂಡತಿಯ ಸುದ್ದಿಗೆ ಬರಬೇಡ ಎಂದು  ವಾರ್ನಿಂಗ್ ನೀಡಿದ್ದಕ್ಕೆ ಆತನು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಕೊಲೆಗೈದು ದೇಹವನ್ನು ಛಿದ್ರ ಛಿದ್ರ ಮಾಡಿ ನದಿಗೆ ಬಿಸಾಕಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನಾಗೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರಕರಣದ ಸಂಬಂಧ ಶಿರಾಳಕೊಪ್ಪ ಪೊಲೀಸರು ಶಿವು ಯಾನೆ ಪ್ರತಾಪ್, ಕಿರಣ್, ಗಣೇಶ್ ಮತ್ತು ನಾಗರಾಜ್ ವಿರುದ್ಧ FIR ಮಾಡಿದ್ದು,  THE BHARATIYA NYAYA SANHITA (BNS), 2023 (U/s-103,238,61(2),3(5))  ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ, ಸಾಕ್ಷ್ಯ ನಾಶ, ಕ್ರಿಮಿನಲ್‌ ಸಂಚು ಆರೋಪಗಳನ್ನ ಹೊರಿಸಲಾಗಿದೆ. 

ನಾಗಿಹಳ್ಳಿಯ ಕೃಷ್ಣಪ್ಪ ಮೃತ ದುರ್ಧೈವಿಯಾಗಿದ್ದಾನೆ, ತನ್ನ ಪತಿ ತಡರಾತ್ರಿಯಾದರೂ ಬಾರದ ಹಿನ್ನಲೆಯಲ್ಲಿ ಕೃಷ್ಣಪ್ಪ ಪತ್ನಿ ಭಾಗ್ಯ ಶಿರಾಳಕೊಪ್ಪದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

ಕಳೆದ ಸೆಪ್ಟೆಂಬರ್‌ 7 ರಂದು ಈ ಘಟನೆ ನಡೆದಿದೆ. ಆದರೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಪತ್ತೆ ಪ್ರಕರಣ ದಾಖಲಾದ ಬಳಿಕ. ನಾಗೀಹಳ್ಳಿ ನಿವಾಸಿ 33 ವರ್ಷದ ಕೃಷ್ಣಪ್ಪ ಎಂಬವರ ಪತ್ನಿ ಶಿರಾಳಕೊಪ್ಪ ಪೊಲೀಸ್‌ ಠಾಣೆಗೆ ತಮ್ಮ ಪತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ಶಿರಾಳಕೊಪ್ಪ ಠಾಣೆ ಪೊಲೀಸರು ಕೃಷ್ಣಪ್ಪರ ಪತ್ನಿ ನೀಡಿದ ಸಂಶಯದ ಸುಳಿವನ್ನ ಆಧರಿಸಿ ನಾಗೀಹಳ್ಳಿ ಗ್ರಾಮದ ಕಿರಣ ಎಂಬವನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಕೃಷ್ಣಪ್ಪನ ಕೊಲೆಯ ರಹಸ್ಯ ಬಯಲಾಗುತ್ತದೆ. ಆತ ಹೇಳಿದ ಮಾಹಿತಿ ಆಧರಿಸಿ ಠಾಣೆಯ ಎಸ್‌ಐ ಪ್ರಶಾಂತ್‌ ಕುಮಾರ್‌ ಟಿಬಿ ಸುಮುಟೋ ಕೇಸ್‌ ದಾಖಲಿಸಿದ್ದಾರೆ.

ನಡೆದಿದ್ದು ಏನು?

ದಾಖಲಾಗಿರುವ ಸುಮುಟೋ ಕೇಸ್‌ನ ಎಫ್‌ಐಆರ್‌ ಪ್ರಕಾರ, ಕೃಷ್ಣಪ್ಪನ ಪತ್ನಿ ಜೊತೆ ಕಿರಣ್‌ ಎಂಬಾತ ಅನೈತಿಕ ಸಂಬಂಧ ಹೊಂದಿದ್ದ ಎಂದು ದೂರಲಾಗಿದೆ. ಇದೇ ವಿಚಾರದಲ್ಲಿ ಕೃಷ್ಣಪ್ಪ ಕಿರಣನನ್ನ ಕರೆದು ಬೈದು ಎಚ್ಚರಿಕೆ ನೀಡಿದ್ದನಂತೆ. ಈ ಕಾರಣಕ್ಕೆ ಕೃಷ್ಣಪ್ಪನನ್ನೆ ಕೊಲೆ ಮಾಡಲು ನಿರ್ಧರಿಸಿದ ಕಿರಣ ತನ್ನಿಬ್ಬರು ಸ್ನೇಹಿತರಾದ ಪ್ರತಾಪ್‌ ಹಾಗೂ ಗಣೇಶನ ಸಹಾಯ ಪಡೆದಿದ್ದಾನೆ. ಕೊಲೆಯ ಸ್ಕೆಚ್‌ ರೂಪಿಸಿಕೊಂಡ ಕಿರಣ, ಕಂದ್ಲಿ ಹಾಗೂ ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನ ಬೈಕ್‌ವೊಂದರ ಬ್ಯಾಗ್‌ನಲ್ಲಿ ಇರಿಸಿಕೊಂಡು ಕೊಲೆ ಮಾಡಲು ಮುಂದಾಗಿದ್ದಾನೆ.

ತನ್ನ ಸ್ನೇಹಿತರಾದ ಗಣೇಶ ಹಾಗೂ ಪ್ರತಾಪನ ಮೂಲಕ ಕೃಷ್ಣಪ್ಪನಿಗೆ ಬೇರೆ ಊರಿನಲ್ಲಿ ಚೆನ್ನಾಗಿ ಕುಡಿಸಿ ತಡರಾತ್ರಿ ಗ್ರಾಮಕ್ಕೆ ವಾಪಸ್‌ ಕರೆ ತರುವಂತೆ ಹೇಳಿದ್ದೇನೆ. ಆತನ ಸ್ನೇಹಿತರು ಸಹ ಕಿರಣನ ಪ್ಲಾನಿನಂತೆ ಕೃಷ್ಣಪ್ಪನಿಗೆ ಚೆನ್ನಾಗಿ ಎಣ್ಣೆ ಹೊಡೆಸಿ ನಾಗಿಹಳ್ಳಿ ಕ್ರಾಸ್‌ ಬಳಿಗೆ ಕರೆತಂದಿದ್ದಾರೆ. ಅಲ್ಲಿಗೆ ಬಂದ ಕಿರಣ ಕೃಷ್ಣಪ್ಪನಿಗೆ ಹೊಡೆದು, ಬೈದು ನಂತರ ಕುಡುಗೋಲಿನಿಂದ ಕುತ್ತಿಗೆಗೆ ಏಟು ಕೊಟ್ಟಿದ್ದಾನೆ. ಆ ಬಳಿಕ ಅಲ್ಲಿಯೇ ಇದ್ದ ಗುಂಡಿಯೊಂದಕ್ಕೆ ಕೃಷ್ಣಪ್ಪನನ್ನ ಶಿಫ್ಟ್‌ ಮಾಡಿ ಆತನ ಅಂಗಾಂಗಗಳನ್ನ ಕತ್ತರಿಸಿ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ತುಂಬಿಕೊಂಡಿದ್ದಾರೆ. ಬಳಿಕ ಗಣೇಶ ಹಾಗೂ ಕಿರಣ ಒಂದು, ಪ್ರತಾಪ ಇನ್ನೊಂದು ಶವದ ಚೀಲವನ್ನ ಹಿಡಿದು ಕೊರಟೆಗೆರೆ , ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿಗೆ ತೆರಳಿದ್ದಾರೆ. ಅಲ್ಲಿ ನದಿಗೆ ಎರಡು ಚೀಲದಲ್ಲಿದ್ದ ಕೃ‍ಷ್ಣಪ್ಪನ ಅಂಗಾಂಗಗಳನ್ನ ಸುರಿದು ಎಸ್ಕೇಪ್‌ ಆಗಿದ್ದಾರೆ.

ನಾಪತ್ತೆ ಪ್ರಕರಣವನ್ನು ಸೀರಿಯಸ್‌ ಆಗಿ ತೆಗೆದುಕೊಂಡಿದ್ದ ಪೊಲೀಸರು ಕಿರಣ್‌ನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಕೃತ್ಯ ಬಯಲಿಗೆ ಬಂದಿದೆ. ಸದ್ಯ ಈ ಸಂಬಂಧ ಕೇಸ್‌ ದಾಖಲಾಗಿದ್ದು, ಸ್ವತಃ ಪೊಲೀಸರೇ ಸುಮುಟೋ ಕೇಸ್‌ ದಾಖಲಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

18 hours ago

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…

18 hours ago

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !!

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…

22 hours ago

ಈಸ್ಟ್‌ವೆಸ್ಟ್‌ ಬಸ್ ಸಂಸ್ಥೆ ಮಾಲೀಕ, ಮಾಜಿ ವಕ್ಫ್‌ ಬೋರ್ಡ್ ಅಧ್ಯಕ್ಷ ತಲ್ಕೀನ್ ಅಹ್ಮದ್ ನಿಧನ

ಈಸ್ಟ್‌ವೆಸ್ಟ್‌ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…

1 day ago

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…

1 day ago

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…

1 day ago