“ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ” ಎಂದು ವಾಟ್ಸಾಪ್ ಸ್ಟೇಟಸ್‌ ನಲ್ಲಿ ಬರೆದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

“ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ” ಎಂದು ವಾಟ್ಸಾಪ್ ಸ್ಟೇಟಸ್‌ ನಲ್ಲಿ ಬರೆದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಪ್ರೀತಿಸಲು ಹುಡುಗಿ ಸಿಗುತ್ತಿಲ್ಲ ಎಂದು ವಾಟ್ಸಾಪ್ ಸ್ಟೇಟಸ್‌ ನಲ್ಲಿ ಬರೆದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆಯಾಗಿದೆ.

ಹೌದು ಪ್ರೀತಿಸಲು ಹುಡುಗಿ ಸಿಗುತಿಲ್ಲ, ನನಗಿಂತ ಸಣ್ಣವರಿಗೆ ಪ್ರೀತಿಸಲು ಹುಡುಗಿಯರಿದ್ದಾರೆ.ಆದರೆ ನನಗೆ ಹುಡುಗಿಯೇ ಇಲ್ಲ ಎಂದು ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದಿಟ್ಟು 24 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ವಿಚಿತ್ರ ಪ್ರಕರಣ ತೀರ್ಥಹಳ್ಳಿಯಲ್ಲಿ ನಡೆದಿತ್ತು.

ತೀರ್ಥಹಳ್ಳಿಯ ಜಯದೀಪ್ (24) ಎಂಬ ಯುವಕ ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಈ ಮಧ್ಯೆ ಯುವಕ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು , ತುಂಗಾ ನದಿ ಸಮೀಪ ಯುವಕನ ಬೈಕ್ ಪತ್ತೆಯಾಗಿದೆ. ಯುವಕನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದರು.ಇಂದು ಮಧ್ಯಾಹ್ನ ಸಮೀಪದ ಸ್ಮಶಾನಕಟ್ಟೆ ಎಂಬಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

ಯುವಕನ ಸ್ಟೇಟಸ್ ನಲ್ಲಿ ಏನಿತ್ತು ..!?

ಮೂರು ವರ್ಷಗಳಿಂದ ಬದುಕು ಉಪ್ಪಿಲ್ಲದ ಊಟದಂತೆ ಆಗಿದೆ, ಎಂದು ಯುವಕ ಸ್ಟೇಟಸ್ ನಲ್ಲಿ ಉಲ್ಲೇಖ ಮಾಡಿದ್ದಾನೆ. ಏಕಮುಖ ಪ್ರೀತಿ ಮಾಡಿ ಹುಡುಗಿಗೆ ತಿಳಿಸಿದಾಗ, ಆ ಹುಡುಗಿ ಪ್ರೀತಿ ನಿರಾಕರಿಸಿದಳು. ಇದರಿಂದ ನನಗೆ ಪ್ರೀತಿ ಮಾಡಲು ಹುಡುಗಿ ಸಿಗುತ್ತಿಲ್ಲ ಎಂದು ಬೇಸರ ಹೊರಹಾಕಿರುವ ಜಯದೀಪ್, ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ. ಜೊತೆಗೆ ಮನಿ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿ 90000 ರೂ. ಹಣ ಕಳೆದುಕೊಂಡಿದ್ದೇನೆ. ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೇಳಿರುವ ಯುವಕ, ತಂದೆ ತಾಯಿ ಬಳಿ ಕ್ಷಮೆ ಕೋರಿರುವ ಬಗ್ಗೆ ಸ್ಟೇಟಸ್ನಲ್ಲಿ ಉಲ್ಲೇಖಿಸಿ ನಾಪತ್ತೆಯಾಗಿದ್ದನು

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ

ರಿಪ್ಪನ್‌ಪೇಟೆ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಅನಾಹುತ; ಡಿಸ್ಕಸ್ ತಲೆಗೆ ಬಿದ್ದು ಶಿಕ್ಷಕ ಗಂಭೀರ ಗಾಯ A physical education teacher…

1 hour ago

ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು

ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು A tragic tipper-bike…

4 hours ago

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್

ಬಾಲಕ ಓಡಿಸಿದ ಬೊಲೆರೊ, ದಂಡ ಕಟ್ಟಿದ ತಂದೆ! ₹26,500 ಫೈನ್ A Shivamogga court fined a father ₹26,500…

4 hours ago

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ

ಸಾಗರ ಗ್ರಾಮಾಂತರ ಠಾಣೆಯ ನೂತನ ಪಿಎಸ್‌ಐ ಆಗಿ ಶಂಕರ್ ಗೌಡ ಪಾಟೀಲ್ ನೇಮಕ PSI Shankar Gowda Patil has…

22 hours ago

ಶತಮಾನದ ಸಂಭ್ರಮದಲ್ಲಿ ರಿಪ್ಪನ್‌ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಶತಮಾನದ ಸಂಭ್ರಮದಲ್ಲಿ ರಿಪ್ಪನ್‌ಪೇಟೆ ಬಾಲಕರ ಶಾಲೆ: ಸೆ. 3ಕ್ಕೆ ಹಳೆಯ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ Ripponpete Government Model Boys…

23 hours ago

ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ

ಪ್ಲಾಸ್ಟಿಕ್ ಚೀಲಗಳ ನಡುವೆ ಅಡಗಿದ್ದ 7.5 ಅಡಿ ಬೃಹತ್ ಹೆಬ್ಬಾವು ಸೆರೆ A 7.5-foot-long, 10 kg giant python…

1 day ago