Headlines

ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ ಶಾಕ್ | Traffic fine

ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ ಶಾಕ್


ಬೈಕ್ ಆಲ್ಟ್ರೇಷನ್ ಮಾಡಿಸಿ ಕರ್ಕಶ ಶಬ್ಧದೊಂದಿಗೆ ಚಲಾಯಿಸುತ್ತಿದ್ದ ಸವಾರನಿಗೆ 8200 ರೂ. ದಂಡ ವಿಧಿಸಲಾಗಿದೆ.

ಶಿವಮೊಗ್ಗ ನಗರದ ವಿವಿಧ ಸರ್ಕಲ್ ಗಳಲ್ಲಿ ಡಿಸ್ಕವರಿ ಬೈಕ್ ನ್ನು Altration ಮಾಡಿಕೊಂಡು ಮತ್ತು ಬೀಟ್/ಡಿಫೆಕ್ಟಿವ್ ಸೈಲೆನ್ಸರ್ ಅಳವಡಿಸಿಕೊಂಡು ಕರ್ಕಶ ಶಬ್ದ ಉಂಟಾಗುವ ರೀತಿಯಲ್ಲಿ ತನ್ನ ವಾಹನವನ್ನು ಚಲಾಯಿಸುತ್ತಿದ್ದಾನೆಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೂರ್ವ ಸಂಚಾರ ಪೊಲಸ್ ಠಾಣೆಯ ಪಿಎಸ್‌ಐ ನವೀನಕುಮಾರ್ ಮಠಪತಿ ಮತ್ತು ಸಿಬ್ಬಂದಿಗಳಾದ ಸಂತೋಷ ಕೆ,ಹೆಚ್ ಅವರು ಪತ್ತೆ ಮಾಡಿದ್ದಾರೆ.

ವಾಹನದ ಸವಾರ ರಿಯಾನ್ ಡಾಮಿವಿಕ್ ಬಿನ್ ಆನಂದ ಡಾಮಿವಿಕ್(22) ರಾಗಿಗುಡ್ಡ ಶಿವಮೊಗ್ಗ ಈತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ನ್ಯಾಯಾಲಯ ಇಂದು ಒಟ್ಟು 8200 ರೂ. ದಂಡ ವಿಧಿಸಿದೆ.

Leave a Reply

Your email address will not be published. Required fields are marked *

Exit mobile version