January 11, 2026

ತೀರ್ಥಹಳ್ಳಿ – ಯುವ ನಾಯಕ ಶ್ರೇಯಸ್‌ರ ಆರೋಗ್ಯ ವಿಚಾರಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್

ತೀರ್ಥಹಳ್ಳಿ – ಯುವ ನಾಯಕ ಶ್ರೇಯಸ್‌ರ ಆರೋಗ್ಯ ವಿಚಾರಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್

ತೀರ್ಥಹಳ್ಳಿ – ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ತಾಲೂಕು ಯುವ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಶ್ರೇಯಸ್ ರಾವ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸ್ವತಃ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಸಾಧಾರಣ ಶಿಷ್ಟಾಚಾರದ ಭೇಟಿ ಅಷ್ಟೇ ಅಲ್ಲದೆ, ಸ್ನೇಹಪರ ಮಾತುಗಳಿಂದ ಹಾಗೂ ಪ್ರೋತ್ಸಾಹದ ಹೃದಯಸ್ಪರ್ಶಿ ಸಂದೇಶಗಳಿಂದ ಶ್ರೇಯಸ್ ಹಾಗೂ ಅವರ ಕುಟುಂಬಕ್ಕೆ ಭರವಸೆಯ ಒಡನಾಟ ನೀಡಿದ ಶ್ರೀನಿವಾಸ್ ಅವರ ನಡೆ ಸ್ಥಳೀಯರಲ್ಲಿ ಮೆಚ್ಚುಗೆ ಗಳಿಸಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಆದರ್ಶ್ ಹುಂಚದಕಟ್ಟೆ, ತಾಲೂಕು ಕಾಂಗ್ರೆಸ್ ನಗರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಶ್ವಲ್ ಗೌಡ, ತೀರ್ಥಹಳ್ಳಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಪೂರ್ಣೇಶ್ ಕೆಳಕೆರೆ, ಗ್ರಾಮೀಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರವೀಶ್ ಹೊಸಕೆರೆ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ, ಯುವ ಕಾಂಗ್ರೆಸ್ ಪ್ರಮುಖರಾದ ಫಣಿರಾಜ್ ಕಟ್ಟೇಹಕ್ಕಲು, ಜಯಕರ ಶೆಟ್ಟಿ, ಆಸೀಫ್ ಸೀಬಿನಕೆರೆ, ಸುಭಾಷ್ ಕುಲಾಲ್, ಶೋಬಿತ್ ಬಾಳಗಾರು, ನದೀಮ್ ಬೆಟ್ಟಮಕ್ಕಿ, ರಾಘವೇಂದ್ರ ಸೀಬಿನಕೆರೆ, ಪ್ರಸನ್ನ, ಧ್ರುವಕುಮಾರ್, ಮಂಜು(ಗೂಗ್ಲಿ), ನಂದ ಹಾರೇಕೊಪ್ಪ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

About The Author

Exit mobile version