Headlines

ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ – ಧರ್ಮಗುರು ಮುನೀರ್ ಸಖಾಫಿ

ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ – ಧರ್ಮಗುರು ಮುನೀರ್ ಸಖಾಫಿ

ರಿಪ್ಪನ್ ಪೇಟೆ : ಮಾನವೀಯ ಧರ್ಮಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ,ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ,ಎಂದು ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ ಹೇಳಿದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ  ಪಟ್ಟಣದ ವಿನಾಯಕ ವೃತದಲ್ಲಿ ಆಯೋಜಿಸಲಾಗಿದ್ದ ಭಾವೈಕ್ಯತ ರ್ಯಾಲಿಯ ಸಭೆಯಲ್ಲಿ ಮಾತನಾಡಿದ ಅವರು ನಾವು ಭಾರತೀಯರು ನಾವೆಲ್ಲರೂ ಸೋದರಂತೆ ಇದ್ದು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆತು ರಾಷ್ಟ್ರದ ಸೇವೆಯನ್ನು ಮಾಡುವುದು ನಮ್ಮೆಲ್ಲರ  ಮೂಲಭೂತ ಕರ್ತವ್ಯ ಮತ್ತು ಉದ್ದೇಶವಾಗಿರಬೇಕು. ಈ ಜಗತ್ತಿನ ಮಾನವ ಜೀವಿಗಳೆಲ್ಲರೂ  ಸಹೋದರ ಸಹೋದರಿ ಎನ್ನುವ ಭ್ರಾತೃತ್ವ  ಭಾವನೆಯಿಂದ ಇದ್ದಾಗ ಮಾತ್ರ ನಾವು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು,ಜಗತ್ತಿಗೆ ಶಾಂತಿ ನೆಮ್ಮದಿಯ ಕುರಿತು ಸಂದೇಶವನ್ನು ನೀಡಿದ ಮೊಹಮ್ಮದ್ ಪೈಗಂಬರ್ ಅವರು ಭಾವೈಕ್ಯತೆಯ ಬಗ್ಗೆ  ಅರಿವು ಮೂಡಿಸಿದ್ದಾರೆ
ಎಂದು ಹೇಳಿದರು.

ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ಮೆಕ್ಕಾ ಜುಮ್ಮಾ ಮಸೀದಿ, ತಝೀಝುಲ್ ಇಸ್ಲಾಂ ಮದ್ರಸ.ಮೀಲಾದ್ ಸ್ವಾಗತ ಸಮಿತಿ, ಬದ್ರಿಯಾ ಮದ್ರಸ ಸಮಿತಿ ಎಸ್.ಎಸ್.ಎಫ್,ಮತ್ತು ಎಸ್.ವೈ.ಎಸ್. ಇವರ ಸಹಯೋಗದಲ್ಲಿ ಅಯೋಜಿಸಲಾದ “ ಮೀಲಾದ್’ ಸಮಾರಂಭದ ಅಂಗವಾಗಿ ಈದ್ ಮಿಲಾದ್ ಮೆರವಣಿಗೆ ನಡೆಯಿತು.

ಹೊಸನಗರ ರಸ್ತೆಯಿಂದ ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿನ ಖಬರ್ ಸ್ಥಾನ್ ವರೆಗೆ ಮುಸಲ್ಮಾನ ಭಾಂಧವರು ಯುವಕರ “ದಫ಼್’’ ಅಕರ್ಷಣೆಯೊಂದಿಗೆ  ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಮೆರವಣಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ವಿನಾಯಕ ವೃತ್ತದಲ್ಲಿ ಪುಟಾಣಿ ಮಕ್ಕಳು ಭಾರತ ದೇಶ ವೈವಿಧ್ಯಮಯ ರಾಷ್ಟವೆಂಬುವುದನ್ನು ಪುಷ್ಪ ನೃತ್ಯ ರೂಪಕದ ಮೂಲಕ ಪ್ರಚುರಪಡಿಸಿದ್ದು ನಾಗರೀಕರ ಪ್ರಶಂಸೆಗೆ ಪಾತ್ರವಾಗಿತ್ತು.

ಈ ಸಂಧರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ, ಈದ್‌ ಮೀಲಾದ್ ಸಮಿತಿಯ ಅಧ್ಯಕ್ಷ  ಅಫ಼್ಜಲ್ ಬ್ಯಾರಿ ,ಮುಖಂಡರಾದ ಆರ್.ಎ.ಚಾಬುಸಾಬ್,ಅಮೀರ್ ಹಂಜಾ , ಆಸೀಫ಼್ ಭಾಷಾ, ಕೆ.ಹೆಚ್.ಆರ್.ಮೋಣು,ನಾಸೀರ್ ಹಮೀದ್ ಸಾಬ್ , ರೆಹಮಾನ್ ಚಾಲಿ, ಇಂತಿಯಾಜ್ ಕೆಹೆಚ್ ಆರ್, ಮನ್ಸೂರ್, ನೂರುಲ್ಲಾ, ಆರ್.ಎಸ್.ಇಲಿಯಾಸ್, ಹನೀಫ್,ಹಸೈನಾರ್, ಮೂಹಿಯುದ್ದೀನ್ ಜೀರಿಗೆ ಮನೆ,ನಾಸೀರ್,ಅದಂಸಾಬ್, ಅಬೂಬಕರ್ ಸಾಬ್,ಹಂಜಾ, ಅಬ್ದುಲ್ಲಾ, ಚಾಬುಸಾಬ್, ಫಯಾಝ್, ಬಾನುಸಾಬ್,ಬಾಬು,ಇಬ್ರಾಹಿಂ,ಅಬ್ದುಲ್ ಸಿದ್ದೀಕ್, ಮುಖ್ತಿಯಾರ್‌ ಅಹಮದ್ ಸಾಬ್,ಆರ್.ಹೆಚ್ ಮೋಹಿದ್ದೀನ್,ನದೀಮ್ ಹಾಗೂ ಇನ್ನಿತರರಿದ್ದರು.

Exit mobile version