Ripponpete | ಲಂಚಕ್ಕೆ ಬೇಡಿಕೆ – ತೂಕ ಮತ್ತು ಅಳತೆ ಮಾಪನ ನವೀಕರಣಗೊಳಿಸದೇ ಹಿಂದಿರುಗಿದ ಅಧಿಕಾರಿಗಳು..!!!
ರಿಪ್ಪನ್‌ಪೇಟೆ;-ವರ್ಷಕ್ಕೂಮ್ಮೆ ಸರ್ಕಾರ ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಿ 250 ರೂ ಫೀ ಯನ್ನು ಗಣಕೀಕೃತ ರಶೀಧಿಯನ್ನು ನೀಡುತ್ತಾರೆ.ಇದರೊಂದಿಗೆ ಹೆಚ್ಚುವರಿಯಾಗಿ ಲಂಚದ ಹಣವನ್ನು ತೂಕ ಮತ್ತು ಅಳತೆ ಮಾಪನಗಳನ್ನು ನವೀಕರಿಸಲು ಕೊಡಬೇಕು ಇಲ್ಲವಾದರೆ ತಕಡಿಗೆ ಮೊಹರು ಮಾಡುವುದಿಲ್ಲ ಎಂದು ಕಾನೂನು ಮಾಪನಶಾಸ್ತ ಇಲಾಖೆಯ ಅಧಿಕಾರಿಗಳು ಹೇಳಿ ತಿರಸ್ಕರಿಸಿ ವಾಪಾಸ್ಸು ಹೋದ ಘಟನೆಯೊಂದು ನಡೆದಿದೆ.
ಶಿವಮೊಗ್ಗ ರಸ್ತೆಯ ಜಯಪ್ರಕಾಶ ಹೋಟಲ್ ಮತ್ತು ಜನರಲ್ ಸ್ಟೊರ‍್ಸ್ನಲ್ಲಿ ತೂಕ ಮತ್ತು ಅಳತೆ ಇತ್ಯಾದಿಗಳನ್ನು ಸತ್ಯಾಪನೆ ಮಾಡಿದ್ದೇನೆ ಮತ್ತು ಮೊಹರು ಮಾಡಿದ್ದೇನೆ ಎಂಬ ಬಗ್ಗೆ ಸರ್ಕಾರದ ಗಣಕೀಕೃತ ರಶೀಧಿಯನ್ನು ನೀಡಿ ಉಳಿದಂತೆ ಹೆಚ್ಚುವರಿ ಲಂಚ ಹಣ ನೀಡಬೇಕು ಇಲ್ಲವಾದರೆ ನಿಮ್ಮ ತೂಕ ಮತ್ತು ಅಳತೆ ಮಾಪನವನ್ನು ನವೀಕರಣ ಮಾಡಲಾಗುವುದಿಲ್ಲ ಎಂದು ಹೇಳಿದರು. ನಾನು ಕೊಡುವುದಿಲ್ಲ ಎಂದು ಹೇಳಿದಾಗ ನಾವು ನವೀಕರಿಸುವುದಿಲ್ಲ ಎಂದು ಹೇಳಿ ವಾಪಾಸ್ಸು ಹೋದರು ಎಂದು ಜಯಪ್ರಕಾಶ ಹೋಟಲ್‌ನ ಡಿ.ಎಸ್.ಷಣ್ಮುಖಪ್ಪ ಆರೋಪಿಸಿದರು.
ಮಳೆ ಇಲ್ಲದೆ ಬೆಳೆಯು ಸರಿಯಾಗಿ ಕೈಗೆ ಸಿಗದೆ ರೈತರು ಪೇಟೆ ಪಟ್ಟಣಕ್ಕೆ ಬರದೇ ಇರುವುದರಿಂದ ವ್ಯಾಪಾರ ಸಹ ಕುಂಠಿತಗೊಂಡು ನಿತ್ಯ ಕುಟುಂಬದ ನಿರ್ವಹಣೆಯು ಕಷ್ಟಕರವಾಗಿರುವಾಗ ತೂಕ ಮತ್ತು ಅಳತೆ ಮಾಪನದವರು ತಕ್ಕಡಿ ನವೀಕರಣಕ್ಕಾಗಿ ಹೆಚ್ಚು ಹಣ ಕೇಳಿದರೆ ಕೂಡುವುದು ಹೇಗೆ ಸ್ವಾಮಿ ಎಂದು ಪರಿಪರಿಯಾಗಿ ಬೇಡಿದರೂ ಕೂಡಾ ಅಧಿಕಾರಿಗಳು ಹೆಚ್ಚುವರಿ ಲಂಚ ಹಣ ಕೊಡದಿದ್ದರೆ ತೂಕ ಮತ್ತು ಅಳತೆ ಸ್ಕೇಲ್‌ಗೆ ಮೊಹರು ಮಾಡುವುದಿಲ್ಲ ಎಂದು ಹೇಳಿ ವಾಪಾಸ್ಸು ಹೋದರೆಂದು ಜಯಪ್ರಕಾಶ ಹೋಟಲ್ ಮಾಲೀಕ ಷಣ್ಮುಖಪ್ಪ ಮಾಧ್ಯಮದವರ ಬಳಿ ತಮ್ಮ ನೋವು ತೊಡಿಕೊಂಡರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್