ಉದ್ಯೋಗ ಕೊಡಿಸುವುದಾಗಿ ನಂಬಿಸಿ 89 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಪ್ರತಿಷ್ಠಿತ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಹರಿಗೆಯ ಯುವಕ ಮತ್ತು ಆತನ ಸ್ನೇಹಿತರಿಗೆ 89 ಲಕ್ಷ ರೂ. ಹಣ ವಂಚಿಸಿರುವ ಘಟನೆ ನಡೆದಿದೆ.
ಹರಿಗೆಯ ಯುವಕನೊಬ್ಬನಿಗೆ ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮೂಲಕ ಒರಿಸ್ಸಾ ಮೂಲದ ಸೂರ್ಯಂಶ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು.
ಆತ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ರಾಕೇಶ್ ಶಿವಮೊಗ್ಗದಲ್ಲಿರುವ ತನ್ನ ಸ್ನೇಹಿತರಿಗೆ ಈ ವಿಚಾರ ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹರಿಗೆಯ ಯುವಕ ತನ್ನ ಹಲವು ಸ್ನೇಹಿತರ ರೆಸ್ಯೂಂಗಳನ್ನು ಸೂರ್ಯಂಶ್‌ಗೆ ಕಳುಹಿಸಿದ್ದ. ಆದರೆ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಕೊಡಿಸಲು ತಲಾ 1.60 ಲಕ್ಷ ರೂ. ಹಣ ನೀಡಬೇಕು. ಇದಕ್ಕೆ ಪ್ರತಿಯಾಗಿ ಪ್ರತಿಷ್ಠಿತ ಕಂಪನಿಯಿಂದ ಲ್ಯಾಪ್‌ಟಾಪ್ ಒದಗಿಸಲಾಗುತ್ತದೆ ಎಂದು ಸೂರ್ಯಂಶ್ ನಂಬಿಸಿದ್ದ. ಇದರಿಂದ ಹರಿಗೆಯ ಯುವಕ ವಿವಿಧ ಬ್ಯಾಂಕ್ ಖಾತೆಗಳಿಂದ ಸೂರ್ಯಂಶ್ ಸೂಚಿಸಿದ ಬ್ಯಾಂಕ್ ಖಾತೆಗೆ ಒಟ್ಟು 89 ಲಕ್ಷ ರೂ. ಹಣ ಕಳುಹಿಸಿದ್ದ ಎನ್ನಲಾಗಿದೆ.
ಈತನಕ ಸೂರ್ಯಂಶ್ ಕಡೆಯಿಂದ ಉದ್ಯೋಗವು ಸಿಕ್ಕಿಲ್ಲ, ಲ್ಯಾಪ್‌ಟಾಪ್ ಕೂಡ ಕೊಡಿಸಿಲ್ಲ. ಕರೆ ಮಾಡಿದರೆ ಮೊಬೈಲ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿ ಹರಿಗೆಯ ಯುವಕ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈದ್ ಮಿಲಾದ್ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯಲ್ಲಿ ಬೈಕ್ ರ್ಯಾಲಿ, ಡಿಜೆ, ಸಿಡಿಮದ್ದು ನಿಷೇಧ - ಡಿಸಿ ಆದೇಶ Shivamogga district…
ದೀರ್ಘಕಾಲದಿಂದ ಗೈರುಹಾಜರಾಗಿದ್ದ ಮಕ್ಕಳನ್ನು ಶಾಲೆಗೆ ಮರಳಿ ಕರೆತರಲು ಜಾಗೃತಿ ಅಭಿಯಾನ Awareness campaign conducted by Government High School,…
ದುರಾಸೆ ಗೆಲ್ಲಲಿಲ್ಲ, ಪ್ರಾಮಾಣಿಕತೆ ಸೋಲಲಿಲ್ಲ! ಚಿನ್ನದ ಸರ ಮರಳಿಸಿ ಎಲ್ಲರ ಹೃದಯ ಗೆದ್ದ ಗುರುಶಕ್ತಿ ಬಸ್ ಸಿಬ್ಬಂದಿಗಳು Gold mangalsutra…
ರಿಪ್ಪನ್ ಪೇಟೆ : ಕೂಲಿ ಕೆಲಸಕ್ಕೆಂದು ಬಂದಿದ್ದ ಬಾಲಕಿಗೆ ಕಂಟಕವಾದ ಕಾಮುಕನಿಂದ , ಗರ್ಭಿಣಿ! ಆರೋಪಿಯ ಬಂಧನ A 16-year-old minor…
ರಿಪ್ಪನ್‌ಪೇಟೆ ಪೊಲೀಸ್ ಜೀಪ್‌ಗೆ ಅಪರಿಚಿತ ವಾಹನ ಡಿಕ್ಕಿ: ಮರಕ್ಕೆ ಅಪ್ಪಳಿಸಿದ ಜೀಪ್, ತಪ್ಪಿದ ಭಾರಿ ಅನಾಹುತ A major disaster…
ತುಂಗಾ ನದಿಗೆ ಮೂವರು ಮಕ್ಕಳೊಂದಿಗೆ ಹಾರಿದ ತಾಯಿ : ಇಬ್ಬರು ಹೆಣ್ಣು ಮಕ್ಕಳಿಗಾಗಿ ಶೋಧ ಮುಂದುವರಿಕೆ Mother and three…