ಹೊಸನಗರ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಧಂಧೆಕೋರರಿಗೆ ಬಿಸಿ ಮುಟ್ಟಿಸಿದ ಪೊಲೀಸ್ – 14 ವಾಹನ ವಶಕ್ಕೆ
ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯ 14 ಕಡೆಗಳಲ್ಲಿ ದಾಳಿ ಅಕ್ರಮ ಮರಳು ಸಾಗಾಟ ಮತ್ತು ಸಂಗ್ರಹಣೆ ಸ್ಥಳಗಳ ಮೇಲೆ ದಾಳಿ ನಡೆಸಿದ್ದು 14 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ. ಅನಿಲ್ ಕುಮಾರ್ ಭೂಮರಡ್ಡಿ, ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಹೊಸನಗರ ವೃತ್ತದ ಪಿಐ ಗಿರೀಶ್, ಪಿಎಸ್ಐ ನೀರಜ್ ನರಲಾರ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಹೊಸನಗರ ಠಾಣಾ ವ್ಯಾಪ್ತಿಯ 4 ಕಡೆಗಳಲ್ಲಿ ದಾಳಿ…