POSTMAN NEWS

ನೈಜ ಸುದ್ದಿ ನೇರ ಬಿತ್ತರ..

Shivamogga | ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಮೆಗ್ಗಾನ್ ಗೆ ದಾಖಲು

Shivamogga | ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ – ಮೆಗ್ಗಾನ್ ಗೆ ದಾಖಲು


ಶಿವಮೊಗ್ಗದಲ್ಲಿ ಫ್ರೀಡಂ ಪಾರ್ಕನಲ್ಲಿ ಶಶಿ ಎಂಬಾತನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. 

ದಾಳಿಗೊಳಗಾದ ವ್ಯಕ್ತಿ ಶಶಿ ಎಂಬಾತನ ಮೈ ರಕ್ತಸಿಕ್ತವಾಗಿದೆ.

ಫ್ರೀಡಂ ಪಾರ್ಕ್ ನಲ್ಲಿರುವ ವಾಕಿಂಗ್ ಪಾತ್ ನ ಮೇಲೆ ಶಶಿ ಎಂಬ ಯುವಕ ನಡೆದುಕೊಂಡು ಹೋಗುತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಸಧ್ಯಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಬಜಾವ್ ಆಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಶಿವಮೊಗ್ಗದ ಜಟ್ ಪಟ್ ನಗರದಲ್ಲಿ ನಿನ್ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾದ ಹಾಡಿನ ವಿಚಾರದಲ್ಲಿ ಶಶಿ ಮತ್ತು ಇತರರ ನಡುವೆ ಮನಸ್ತಾಪವಾಗಿದೆ. ಮನಸ್ತಾಪವಾದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 12 ಗಂಟೆಗೆ ಹಲ್ಲೆ ನಡೆದಿದೆ.

ಈ ಕುರಿತು ಮಾದ್ಯಮದವರೊಂದಿಗೆ ಎಸ್ಪಿ ಮಿಥುನ್ ಕುಮಾರ್ ಗಾಯಾಳು ಶಶಿ ಹಲ್ಲೆ ನಡೆಸಿದವರ ಗ್ಯಾಂಗ್ ನ ಹೆಸರನ್ನು ಹೇಳಿದ್ದಾನೆ. ಮೂವರ ಹೆಸರನ್ನ ತಹಶೀಲ್ದಾರ್ ಮುಂದೆ ರೆಕಾರ್ಡ್ ಮಾಡಲಾಗುವುದು. ಸಧ್ಯದಲ್ಲಿಯೇ ಮಾಧ್ಯಮಗಳಿಗೆ ಹೆಸರನ್ನ‌ ಬಹಿರಂಗಗೊಳಿಸಲಾಗುವುದು ಎಂದಿದ್ದಾರೆ.

ಶಶಿಯ ವಿರುದ್ಧವೂ ಹಲವು ಪ್ರಕರಣಗಳಿವೆ ಎಂಬ ಮಾಹಿತಿ ಇದೆ. ವಿನೋಬನಗರದ ಆರ್ ಒಬಿ ಗ್ಯಾಂಗ್ ವೊಂದು ದಾಳಿ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ತಣ್ಣಗಾಗಿದ್ದ ಶಿವಮೊಗ್ಗದ ರೌಡಿಸಂ  ತಲೆ ಎತ್ತಿದಂತಾಗಿದೆ. ಶಶಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

 ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.