ಕಾಡಾನೆ ದಾಳಿ – ನಿರ್ಲಕ್ಷ್ಯ ವಹಿಸಿದ ಅರಣ್ಯಾಧಿಕಾರಿಗಳಿಗೆ ಘೆರಾವ್ ಹಾಕಿದ ಗ್ರಾಮಸ್ಥರು
ಶಿವಮೊಗ್ಗ : ಕಾಡಾನೆಗಳು ದಾಳಿ ನಡೆಸಿದರು ಸ್ಥಳಕ್ಕೆ ಮಧ್ಯರಾತ್ರಿ ತಡವಾಗಿ ಬಂದ ಅರಣ್ಯಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದ ಘಟನೆ ಉಂಬ್ಳೆಬೈಲಿನಲ್ಲಿ ನಡೆದಿದೆ.
ಕಳೆದ ರಾತ್ರಿ ಉಂಬ್ಳೆಬೈಲಿನ ಗ್ರಾಮದ ಒಳಗೆ ನುಗ್ಗಿ ದಾಳಿ ನಡೆಸಿದ್ದ ಕಾಡಾನೆ ಗ್ರಾಮದ ಮನೆಗಳಿಗೆ, ಕೊಟ್ಟಿಗೆ ಹಾಗೂ ತೋಟಗಳಿಗೆ ಹಾನಿ ಮಾಡಿದೆ ಹಲವು ಬಾರಿ ಈ ರೀತಿ ಕಾಡಾನೆ ದಾಳಿ ನಡೆಸಿದ್ದರು ಅರಣ್ಯಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಕಳೆದರಾತ್ರಿ ಆನೆ ದಾಳಿಯಿಂದ ಭಯಭೀತರಾದ ಗ್ರಾಮಸ್ಥರು
ಅರಣ್ಯ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆಗಳು ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ದಾಳಿಬಗ್ಗೆ ವಿಷಯ ತಿಳಿಸಿದರು ಹತ್ತಿರದ ಕ್ಯಾಂಪ್ ನಲ್ಲಿದ್ದರೂ ತಡವಾಗಿ ಸ್ಥಳಕ್ಕೆ ಆಗಮಿಸಿದ ಅರಣ್ಯಧಿಕಾರಿಗಳು.ಅರಣ್ಯಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು.
ಕೆಲಕಾಲ ಗ್ರಾಮಸ್ಥರು ಹಾಗೂ ಅರಣ್ಯಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.ನಿಮ್ಮ ಪರಿಹಾರ ನೀವೇ ಇಟ್ಟುಕೊಳ್ಳಿ ನಮಗೆ ಆನೆಯಿಂದ ಮುಕ್ತಿ ನೀಡಿ.ನಿಮಗೆ ಬೇಕಿದ್ದರೆ ಪರಿಹಾರ ನಾವೇ ನೀಡುತ್ತವೆ, ನಿಮ್ಮ ಗಾಡಿಗೆ ಪೆಟ್ರೋಲ್ ಹಾಕಿಕೊಳ್ಳಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ