ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದ ಕಾರು.!!
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ತೋಟಕ್ಕೆ ಬಿದ್ದು ಮೂವರಿಗೆ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸೋಮವಾರ ನೆಡೆದಿದೆ.
ತಾಲೂಕಿನ ಆಗುಂಬೆ ಸಮೀಪದ ಕಲ್ಮನೆ ಬಳಿ ಕಾರ್ಕಳದಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರಿನ ಗ್ಲಾಸ್ ಒಡೆದು ಮೂವರನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಮೂವರಿಗೂ ಪೆಟ್ಟಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತರೀಕೆರೆ ಮೂಲದ ಕುಟುಂಬ ತಮ್ಮ ಮಗನನ್ನು ಕಾರ್ಕಳಕ್ಕೆ ಬಿಟ್ಟು ಹಿಂದಿರುಗುತ್ತಿರುವಾಗ ಈ ಅವಘಡ ಸಂಭವಿಸಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.