Headlines

ಈದ್ ಮಿಲಾದ್ ಹಬ್ಬದ ವಿಚಾರದಲ್ಲಿ ಮಾರಾಮಾರಿ – ಓರ್ವನ ಕೊಲೆಯಲ್ಲಿ ಅಂತ್ಯ|crime news

ಈದ್ ಮಿಲಾದ್ ಹಬ್ಬದ ವಿಚಾರದಲ್ಲಿ ಮಾರಾಮಾರಿ – ಓರ್ವನ ಕೊಲೆ
ಶಿಕಾರಿಪುರ : ಇಲ್ಲಿನ ಕೆಎಚ್‌ಪಿ ಕಾಲೋನಿಯಲ್ಲಿ ಈದ್ ಮಿಲಾದ್ ಆಚರಣೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಹಾಡು ಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ‌.

ಈದ್ ಮಿಲಾದ್ ಹಬ್ಬದ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದವರು ಸಭೆ ನಡೆದಿತ್ತು ಈ ವಿಚಾರವಾಗಿ ಅವರವರಲ್ಲಿಯೇ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಸೋಸೈಟಿ ಕೇರಿಯ ಮುಸ್ಲಿಂ ಯುವಕ ಜಾಫರ್ ಬಿನ್ ಸಬ್ಜನ್ ಸಾಬ್ 32 ವರ್ಷ ಕೊಲೆಯಾಗಿದ್ದಾನೆ ಎನ್ನಲಾಗಿದೆ.

ಏಕಾಏಕಿ ಎದೆಗೆ ಚಾಕುವಿಂದ ಇರಿದ ಪರಿಣಾಮ ಜಾಫರ್ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ

ಈ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Exit mobile version