Headlines

ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಇಂಪ್ಯಾಕ್ಟ್ – ಮಾಲು ಸಮೇತ ಮರಗಳ್ಳತನ ಆರೋಪಿಯ ಬಂಧನ|arrested

ಪೋಸ್ಟ್ ಮ್ಯಾನ್ ನ್ಯೂಸ್ ವರದಿಯ ಇಂಪ್ಯಾಕ್ಟ್ – ಮಾಲು ಸಮೇತ ಮರಗಳ್ಳತನ ಆರೋಪಿಯ ಬಂಧನ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದ ವನ್ಯಜೀವಿ ವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ‌ ಮರಗಳ್ಳತನ ಮಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.


ಇತ್ತೀಚೆಗೆ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ “ಸದ್ದಿಲ್ಲದೇ ಮಾಯವಾಗುತ್ತಿದೆ ವನ್ಯಜೀವಿ ಅಭಯಾರಣ್ಯದ ಕೋಟ್ಯಾಂತರ ರೂ ಬೆಲೆಬಾಳುವ ಮರಗಳು” ಎಂಬ ಅಡಿಬರಹದಲ್ಲಿ ವಿಸ್ಕೃತವಾದ ವರದಿ ಮಾಡಿತ್ತು.

ಈ ವರದಿಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕೂಡಲೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಕೇವಲ 48 ಗಂಟೆಗಳಲ್ಲಿ ಆರೋಪಿಯ ಜಾಡು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಶಿವಮೊಗ್ಗ ನಗರದ ನಿವಾಸಿ ವಾಸುದೇವ ಎಂಬಾತನನ್ನು ಬಂಧಿಸಿ ಲಕ್ಷಾಂತರ ರೂ ಮೌಲ್ಯದ ಮರಗಳನ್ನು ವಶಕ್ಕೆ ಪಡೆದಿದ್ದಾರೆ ಪ್ರಕರಣದ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಅರಣ್ಯ ಇಲಾಖೆಯ ಪ್ರಕಟಣೆ :

ಶಿವಮೊಗ್ಗ ವನ್ಯಜೀವಿ ವಿಭಾಗದ ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಹಾರೋಹಿತ್ಲು ಗ್ರಾಮದ ಸ.ನಂ 23 ರ ಹಾರೋಹಿತ್ಲು ಮೀಸಲು ಅರಣ್ಯ ಪ್ರದೇಶಲ್ಲಿ ದಿನಾಂಕ 18.08.2023 ರಂದು ಅಕ್ರಮವಾಗಿ ಬೀಟೆ ಜಾತಿಯ ಒಂದು ಮರ ಮತ್ತು ಸಾಗುವಾನಿ ಜಾತಿಯ ಎರಡು ಮರಗಳು ಕಡಿತಲೆಗೆ ಸಂಬಂಧಿಸಿದಂತೆ ಅರಣ್ಯ ಮೊಕದ್ದಮೆ ಸಂಖ್ಯೆ:10/2023-24 ದಿನಾಂಕ: 18.08.2023 ರಂತೆ ಪ್ರಕರಣವನ್ನು ದಾಖಲಿಸಲಾಗಿತ್ತು.

ಸದರಿ ಪ್ರಕರಣದ ಜಾಡುಹಿಡಿದು ಹೊರಟ ಸಿರಿಗೆರೆ ವಲಯದ ಅರಣ್ಯಾಧಿಕಾರಿಗಳ ತಂಡ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನಕೃಷ್ಣ ಪಟಗಾರ್‌ IFS, ಹಾಗು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ  ಬಿ.ಸುರೇಶ SFS, ರವರ ಸೂಕ್ತ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದ ಗೋಲ್ಡನ್‌ಸಿಟಿ ಕಾಲೋನಿಯ ವಾಸುದೇವ ಎಂಬಾತನನ್ನು ಬಂಧಿಸಲಾಗಿದೆ

ಆರೋಪಿಯ ಮಗಳ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಮನೆಯಲ್ಲಿ ಅಕ್ರಮ ದಾಸ್ತಾನು ಇರುವುದನ್ನು ಪತ್ತೆಹಚ್ಚಿ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ, ಬೀಟೆ ಮತ್ತು ಸಾಗುವಾನಿ ಜಾತಿಯ ಸೈಜುಗಳು 263=0.520 ಘಮೀ,  ಒಂದು ಮಾರುತಿ ಓಮ್ನಿ ಕಾರು, ಒಂದು ಪ್ಲೇನಿಂಗ್‌ ಮಷಿನ್, ಬೀಟೆ ಮತ್ತು ಸಾಗುವಾನಿ ಜಾತಿಯ ತುಂಡುಗಳು 08=0.457 ಘಮೀ ನಾಟಾವನ್ನು ಇಲಾಖಾವಶಕ್ಕೆ ಪಡೆದಿರುತ್ತದೆ.  ಬೀಟೆ ಮತ್ತು ಸಾಗುವಾನಿ ಜಾತಿಯ ಒಟ್ಟು ನಾಟಾ 271=0.977 ಘಮೀ ಇದ್ದು ಅಂದಾಜು ಮೌಲ್ಯ 1.5 ಲಕ್ಷ  ಇರುತ್ತದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

ಪ್ರಕರಣವನ್ನು ಭೇದಿಸುವಲ್ಲಿ ಗಿರೀಶ್  ನಾಯ್ಕ ವಲಯ ಅರಣ್ಯಾಧಿಕಾರಿಗಳು ಹಣಗೆರೆ ವನ್ಯಜೀವಿ ವಲಯ, ಸಿರಿಗೆರೆ, ನಾಗರಾಜು ಬಿ.ಕೆ, ಉಪ ವಲಯ ಅರಣ್ಯಾಧಿಕಾರಿ, ಚಿಕ್ಕಪ್ಪ ಗಸ್ತು ಅರಣ್ಯ ಪಾಲಕ, ಔರಂಗಜೇಬ ಗಸ್ತು ಅರಣ್ಯ ಪಾಲಕ ಮತ್ತು ಯೋಗೇಶ್ವರಪ್ಪ ಗಸ್ತು ಅರಣ್ಯ ಪಾಲಕ ಇವರ ತಂಡ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

Exit mobile version