Headlines

RIPPONPETE | ಬೈಕ್ ಕಳ್ಳತನವೆಸಗಿದ್ದ ಆರೋಪಿಯ ಬಂಧನ

RIPPONPETE | ಬೈಕ್ ಕಳ್ಳತನವೆಸಗಿದ್ದ ಆರೋಪಿಯ ಬಂಧನ

ರಿಪ್ಪನ್‌ಪೇಟೆ: ಪಟ್ಟಣದಲ್ಲಿ ನಡೆದ ಬೈಕ್‌ ಕಳ್ಳತನ ಪ್ರಕರಣವನ್ನು ಪೊಲೀಸರು ಕೆಲವೇ ದಿನಗಳಲ್ಲಿ ಭೇದಿಸಿ ಆರೋಪಿಯನ್ನು ವಶಕ್ಕೆ ಪಡೆದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 19ರ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಕಣಬಂದೂರಿನ ವ್ಯಕ್ತಿಯೊಬ್ಬರು ಸತ್ಕಾರ ಲಾಡ್ಜ್‌ ಮುಂಭಾಗ, ರಾಧಾಕೃಷ್ಣ ಜ್ಯೂವೆಲರಿ ಪಕ್ಕದಲ್ಲಿ ಕೆಎ 14 ಇಎ 9708 ನೊಂದಣೆಯ ಹಿರೋ ಹೋಂಡಾ ಬೈಕ್ ನಿಲ್ಲಿಸಿದ್ದರು.ಸ್ವಲ್ಪ ಹೊತ್ತಿನ ನಂತರ ಮರಳಿ ಬಂದು ನೋಡಿದಾಗ ಬೈಕ್ ಕಾಣೆಯಾಗಿದ್ದು, ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದೆ ತಡವಾಗಿ ಠಾಣೆಗೆ ದೂರು ನೀಡಲಾಗಿತ್ತು.

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಖಚಿತ ಮಾಹಿತಿಯ ಆಧಾರದ ಮೇಲೆ ಹೊಸನಗರ ಸಮೀಪದ ಮಾವಿನಕಟ್ಟೆ ಗ್ರಾಮದ ಹೂವಪ್ಪ ಎಂಬಾತನನ್ನು ಪಿಎಸ್ಐ ರಾಜುರೆಡ್ಡಿ ಅವರ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಆರೋಪಿ ಬೈಕ್ ಕಳ್ಳತನ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿ ಹಾಗೂ ಕಳ್ಳತನವಾದ ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ರಾಮಚಂದ್ರ , ಪರಮೇಶ್ವರಪ್ಪ ಹಾಗೂ ಅವಿನಾಶ್ ಇದ್ದರು.

Exit mobile version