Headlines

ಹೊಸನಗರದಲ್ಲಿ ಶ್ರೀ ರಾಮ್ ಫೈನಾನ್ಸ್ ನೂತನ ಶಾಖೆ ಕಾರ್ಯಾರಂಭ | ಗ್ರಾಹಕರ ಸೇವೆಯೇ ಸಂಸ್ಥೆಗೆ ಶ್ರೀರಕ್ಷೆ ; ಶರಶ್ಚಂದ್ರ ಭಟ್

ಹೊಸನಗರದಲ್ಲಿ ಶ್ರೀ ರಾಮ್ ಫೈನಾನ್ಸ್ ನೂತನ ಶಾಖೆ ಕಾರ್ಯಾರಂಭ | ಗ್ರಾಹಕರ ಸೇವೆಯೇ ಸಂಸ್ಥೆಗೆ ಶ್ರೀರಕ್ಷೆ ; ಶರಶ್ಚಂದ್ರ ಭಟ್

ಹೊಸನಗರ ತಾಲೂಕಿನ ವ್ಯಾಪಾರ ವಲಯಕ್ಕೆ ಮತ್ತೊಂದು ಬಲ ತುಂಬುವಂತೆ, ಶ್ರೀರಾಮ್ ಫೈನಾನ್ಸ್ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಬುಧವಾರ ವಿಜೃಂಭಣೆಯಿಂದ ನೆರವೇರಿತು. ಪಟ್ಟಣದ ಕೇಂದ್ರಭಾಗದಲ್ಲಿ ಸ್ಥಾಪಿತವಾದ ಈ ನೂತನ ಕಚೇರಿಯನ್ನು ಸಂಸ್ಥೆಯ ಮಂಗಳೂರು ವಿಭಾಗದ ವಲಯ ವ್ಯವಹಾರಗಳ ಮುಖ್ಯಸ್ಥರಾದ ಶರತ್ಚಂದ್ರ ಭಟ್ ಅವರು ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಶರತ್ಚಂದ್ರ ಭಟ್, ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಹಾಗೂ ವಿಶ್ವಾಸಾರ್ಹ ಹಣಕಾಸು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸುಮಾರು 15 ವರ್ಷಗಳ ಹಿಂದೆ ಸಣ್ಣ ಕಚೇರಿಯಾಗಿ ಆರಂಭವಾದ ಶ್ರೀರಾಮ್ ಫೈನಾನ್ಸ್ ಇಂದು ಗ್ರಾಹಕರ ನಂಬಿಕೆಯನ್ನು ಸಂಪಾದಿಸಿಕೊಂಡು ತನ್ನ ವ್ಯವಹಾರ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ ಎಂದು ಹೇಳಿದರು. ಶೀಘ್ರ ಸೇವೆ, ಪಾರದರ್ಶಕ ವ್ಯವಹಾರ ಮತ್ತು ಗ್ರಾಹಕ ಸ್ನೇಹಿ ನೀತಿಗಳ ಮೂಲಕ ಸಂಸ್ಥೆ ಇಂದು ಅನೇಕ ಕುಟುಂಬಗಳ ಆರ್ಥಿಕ ಸಹಭಾಗಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

ಸಂಸ್ಥೆ ಕೇವಲ ಹಣಕಾಸು ಸೇವೆಗಳಲ್ಲಿಯೇ ಸೀಮಿತವಾಗದೆ, ಸಂಸ್ಥಾಪಕ ತ್ಯಾಗರಾಜರ ಆಶಯದಂತೆ ಸಮಾಜಮುಖಿ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅದರ ಭಾಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ನಿರಂತರವಾಗಿ ಅನುಷ್ಠಾನಗೊಳಿಸುತ್ತಿದ್ದು, ಜಿಲ್ಲೆಯಲ್ಲಿ ಈ ವರ್ಷ ಒಟ್ಟು 750 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆ. ಈ ಪೈಕಿ ಹೊಸನಗರ ತಾಲೂಕಿನ 35 ಪ್ರತಿಭಾನ್ವಿತ ವಿದ್ಯಾರ್ಥಿಗಳು ಸೇರಿರುವುದು ಸ್ಥಳೀಯರಿಗೆ ವಿಶೇಷ ಸಂತಸದ ವಿಷಯವಾಗಿದೆ ಎಂದರು.

ನೂತನ ಕಚೇರಿಯ ಆರಂಭದಿಂದಾಗಿ ಹೊಸನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಜನರಿಗೆ ಇನ್ನಷ್ಟು ಸುಲಭವಾಗಿ ಮತ್ತು ವೇಗವಾಗಿ ಸೇವೆಗಳು ಲಭ್ಯವಾಗಲಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

Exit mobile version