w
Headlines
Home » ಹುಲಿಕಲ್ ಘಾಟಿ ಏಪ್ರಿಲ್ 15 ರವರೆಗೆ ಬಂದ್ – ಸಕಾಲಕ್ಕೆ ಮುಗಿಯಲಿಲ್ಲ ಕಾಮಗಾರಿ : ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ…

ಹುಲಿಕಲ್ ಘಾಟಿ ಏಪ್ರಿಲ್ 15 ರವರೆಗೆ ಬಂದ್ – ಸಕಾಲಕ್ಕೆ ಮುಗಿಯಲಿಲ್ಲ ಕಾಮಗಾರಿ : ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ…


ಏಪ್ರಿಲ್ 5 ರಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದ್ದ ಬಾಳೇಬರೆ ಘಾಟಿ ಮತ್ತೆ 15 ದಿನಗಳ ಕಾಲ ಬಂದ್ ಆಗಿರಲಿದೆ. ಇದರಿಂದಾಗಿ ಹೊಸನಗರ-ಕುಂದಾಪುರ, ಸಾಗರ-ಕುಂದಾಪುರ ಹಾಗೂ ತೀರ್ಥಹಳ್ಳಿ ಕುಂದಾಪುರ ಮಾರ್ಗಕ್ಕೆ ಪರ್ಯಾಯ ರಸ್ತೆಗಳನ್ನ ಸೂಚಿಸಲಾಗಿದೆ.



ಫೆ.5 ರಂದು ಬಾಳೇಬರೆ ಘಾಟಿಯಲ್ಲಿ 2570 ಮೀಟರ್ ಪೇವ್ ಮೆಂಟ್ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು ಏ.5 ರ ವರೆಗೆ ಬಾಳೇಬರೆ ಘಾಟಿಯನ್ನ ಬಂದ್ ಮಾಡಿ ಬದಲೀ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಕಾರಣಾಂತರದಿಂದ ಏ.15 ರವರೆಗೆ ಘಾಟಿಯಲ್ಲಿ ವಾಹನ ಸಂಚಾರವನ್ನ ಬಂದ್ ಮಾಡಿ ಕಾಮಗಾರಿ ಮುಂದುವರೆಸಲಾಗುತ್ತಿದೆ.

ತೀರ್ಥಹಳ್ಳಿ, ಆಗುಂಬೆ, ಸೋಮೇಶ್ವರ, ಹಾಲಾಡಿ ಬಸ್ರೂರು ಮಾರ್ಗವಾಗಿ ಕುಂದಾಪುರಕ್ಕೆ ಲಘುವಾಹನಗಳು ಸಂಚರಿಸಬಹುದಾಗಿದೆ. ಭಾರಿ ವಾಹನಗಳು ತೀರ್ಥಹಳ್ಳಿ, ಕಾನುಗೋಡು, ನಗರ, ಕೊಲ್ಲೂರು, ಮೂಲಕ ಕುಂದಾಪುರಕ್ಕೆ ಸಂಚರಿಸಬಹುದಾಗಿದೆ.



ಹೊಸನಗರ ಮೂಲಕ ಕುಂದಾಪುರಕ್ಕೆ ಸಂಚರಿಸುವ ಲಘು ಅಥವಾ ಭಾರಿ ವಾಹನಗಳು ಹೊಸನಗರ, ನಗರ ಹಾಗೂ ಕೊಲ್ಲೂರು ರಸ್ತೆಯ ಮೂಲಕ ಕುಂದಾಪುರಕ್ಕೆ ಸಂಚರಿಸಬಹುದಾಗಿದೆ.

ಅವಧಿ ವಿಸ್ತರಣೆಗೆ ಕಾಮಗಾರಿ ನಡೆಸುವ ಯಂತ್ರೋಪಕರಣಗಳು ಪದೇ ಪದೇ ದುರಸ್ತಿಗೆ ಬಂದ ಪರಿಣಾಮ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ. ಹಾಗಾಗಿ ಏ.15 ರ ವರೆಗೆ ಕಾಮಗಾರಿ ಅವಧಿಯನ್ನ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.