w
Headlines
Home » ತೀರ್ಥಹಳ್ಳಿ : ಪೊಲೀಸ್ ಪೇದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ‌ ಕೊಲೆ ಪ್ರಕರಣ – ಓರ್ವನ ಬಂಧನ|arrested

ತೀರ್ಥಹಳ್ಳಿ : ಪೊಲೀಸ್ ಪೇದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ‌ ಕೊಲೆ ಪ್ರಕರಣ – ಓರ್ವನ ಬಂಧನ|arrested

ತೀರ್ಥಹಳ್ಳಿ : ತರಕಾರಿ ಮಾರ್ಕೆಟ್​ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.  




ಮಾರ್ಚ್​ 25 ರಂದು ಪಟ್ಟಣದ ಸಮೀಪವಿರುವ ತರಕಾರಿ ಮಾರ್ಕೆಟ್  ಬಳಿಯಲ್ಲಿ  ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದ ಪೂರ್ಣೇಶ್​ ಎಂಬಾತನನ್ನ ಹತ್ಯೆ ಮಾಡಲಾಗಿತ್ತು.

ಭಾರೀ ಗಾತ್ರದ ಕಲ್ಲನ್ನು ತಲೆಮೇಲೆ ಎತ್ತಿಹಾಕಿ ಪೂರ್ಣೇಶ್​ನನ್ನ ಕೊಲೆ ಮಾಡಲಾಗಿತ್ತು.ವಿಪರೀತ ಮದ್ಯವ್ಯಸನಿಯಾಗಿದ್ದ ಪೂರ್ಣೇಶ್​, ಇದೇ ಕಾರಣಕ್ಕೆ ಪೊಲೀಸ್ ಕೆಲಸದಿಂದ ವಜಾಗೊಂಡಿದ್ದ. ಆನಂತರವೂ ಆತ ಬದಲಾಗಿರಲಿಲ್ಲ. ಘಟನೆ ನಡೆದ ದಿನ ಪೊಲೀಸರು ಸಹ ಮದ್ಯದ ವಿಚಾರವಾಗಿಯೇ ಆತನ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ.




ಇದೀಗ ಘಟನೆಯ ಸಂಬಂಧ ಪ್ರಕಾಶ್ ಎಂಬ ಆರೋಪಿಯನ್ನ  ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಪೊಲೀಸ್ ಮೂಲಗಳ ಪ್ರಕಾರ, ಘಟನೆಯು ನಡೆದ ದಿನ ಪ್ರಕಾಶ್ ಹಾಗೂ ಪೂರ್ಣೇಶ್ ನಡುವೆ ಕುಡಿತದ ವಿಚಾರಕ್ಕೆ ಗಲಾಟೆ ನೆಡೆದಿದೆ. ಇದೇ ಕಾರಣಕ್ಕಾಗಿ ಪ್ರಕಾಶ್ ಪೂರ್ಣೇಶ್​ನ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. 




ಈ ಸಂಬಂಧ ಆರೋಪಿಯನ್ನು ಪೊಲೀಸರು ಇನ್ನಷ್ಟು ತನಿಖೆಗೆ ಒಳಪಡಿಸಿದ್ದು, ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.