Headlines

ರಿಪ್ಪನ್ ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ – ಕುಟುಂಬಕ್ಕೆ ಸಾಂತ್ವನ|araga

ರಿಪ್ಪನ್ ಪೇಟೆಯ ಮೃತ ಯೋಧನ ಮನೆಗೆ ಗೃಹ ಸಚಿವ  ಆರಗ ಜ್ಞಾನೇಂದ್ರ ಭೇಟಿ – ಕುಟುಂಬಕ್ಕೆ ಸಾಂತ್ವನ  ರಿಪ್ಪನ್ ಪೇಟೆ :ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಇಂದು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ  ಯೋಧನ ಮನೆಗೆ ಗೃಹಸಚಿವ ಆರಗ  ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ…

Read More

ಧಾರವಾಡದ ಪತ್ರಕರ್ತ ಮೆಹಬೂಬ್ ಮುನವಳ್ಳಿಯ ಬಂಧನ ಖಂಡನಾರ್ಹ – ಗಾರಾ ಶ್ರೀನಿವಾಸ್|munavalli

ಧಾರವಾಡದ ಪತ್ರಕರ್ತ ಮೆಹಬೂಬ್ ಮುನವಳ್ಳಿಯ ಬಂಧನ ಖಂಡನಾರ್ಹ – ಪತ್ರಕರ್ತ ಗಾರಾ ಶ್ರೀನಿವಾಸ್ ರಿಂದ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ  ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ, ಹಾಗೂ ಮಾನವ ಹಕ್ಕುಗಳ ಕುರಿತಾಗಿ ಪೊಲೀಸ್ ವಲಯದಿಂದ ತಾತ್ವಿಕ ಸಲಹೆಗಳನ್ನು ಸ್ವೀಕರಿಸುವ ಹೊತ್ತು ಪತ್ರಿಕಾಂಗದ ಮುಂದಡಿ ಇದಿಯಾ..? ಎನ್ನುವ ಪ್ರಶ್ನೆಯೊಂದು ಇತ್ತೀಚಿನ ಒಂದಿಷ್ಟು ಪ್ರಕರಣಗಳಲ್ಲಿ ಕಂಡು ಬಂದಿದೆ. ೧೫-೦೩-೨೦೨೩ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಚೀಲೂರು ಬಳಿಯಿರುವ ಗೋವಿನಕೋವಿ ಬಳಿ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆಯ ಪ್ರತಿಕಾರವಾಗಿ ರೌಡಿ ಶೀಟರ್‌ಗಳಾದ…

Read More

ಪುನೀತ್ ನೆನಪಿನೋತ್ಸವ ಎಂಬ ನೆನಪಿನ ಕಾರ್ಯಕ್ರಮ|kuppalli

ಪುನೀತ್ ನೆನಪಿನೋತ್ಸವ ಎಂಬ ನೆನಪಿನ ಕಾರ್ಯಕ್ರಮ! – 30 ಮಂದಿ ನೇತ್ರದಾನ: ಕಲೆ, ಕಲಾವಿದರ ಸಮಾಗಮ – 35 ಮಂದಿಗೂ ಹೆಚ್ಚು ಸಾಧಕರು, ಸೇವಕರಿಗೆ ಸನ್ಮಾನ – ಕುಪ್ಪಳಿ ಸಮೀಪದ ಸಣ್ಣ ಹಳ್ಳಿಯಲ್ಲಿ ಮಾದರಿ ಕೆಲಸ  ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್, ಕಲ್ಲುಕೊಡಿಗೆ ಕುಪ್ಪಳಿ ಹಾಗೂ ಬೆಕ್ಕನೂರು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಮಾ.17ರಂದು ದಿನವಿಡಿ ಪುನೀತ್ ನೆನಪಿನೋತ್ಸವ-2023 ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮ ಹತ್ತಾರು ಸಾಮಾಜಿಕ ಕೆಲಸಗಳ ಮೂಲಕ ಮಾದರಿಯಾಯಿತು. ಸಮುದಾಯ ಭವನ,ಮುಸ್ಸಿನಕೊಪ್ಪ,…

Read More

ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹೊಸನಗರದ ರಾಮಚಂದ್ರಪ್ಪ|eyedonate

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಠದಜಡ್ಡು ಗ್ರಾಮದ ವ್ಯಕ್ತಿಯೊಬ್ಬರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಠದಜಡ್ಡು ನಿವಾಸಿ ಈ ರಾಮಚಂದ್ರಪ್ಪನವರು (76) ಅನಾರೋಗ್ಯದ ಕಾರಣ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಮಾಜಿ ಮುಖ್ಯಮಂತ್ರಿ ದಿ|| ಎಸ್ ಬಂಗಾರಪ್ಪನವರಿಗೆ ನಿಕಟವರ್ತಿಯಾಗಿದ್ದ ಇವರು ಅನೇಕ ಸಮಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಮೃತರು ಚಾಲುಕ್ಯ ಬಸವರಾಜ್‌ರವರು ಸೇರಿ ಓರ್ವ ಪುತ್ರ, ಓರ್ವ ಪುತ್ರಿ, ಪತ್ನಿ, ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಇವರು ನಿಧನದ ನಂತರ ತಮ್ಮ ಕಣ್ಣು ಇನ್ನೊಬ್ಬರಿಗೆ ಬೆಳಕಾಗಬೇಕು…

Read More

ಬುಲೆಟ್ ಬೈಕ್‌ ನಲ್ಲಿ ಅವಿತು ಕುಳಿತ ಬುಸ್ ಬುಸ್ ನಾಗಪ್ಪ|snake

ಶಿವಮೊಗ್ಗದ ದುರ್ಗಿಗುಡಿ ಸಮೀಪ ಇರುವ ವೈಭವಲಕ್ಷ್ಮೀ ವೈನ್ ಸ್ಟೋರ್ ಬಳಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು ಇಲ್ಲಿನ , ದಿ  ಫ್ಯಾಕ್ಟರಿ ಔಟ್​ ಲೆಟ್ ಬಳಿ ನಿಲ್ಲಿಸಲಾಗಿದ್ದ ಬುಲೆಟ್​ವೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡಿತ್ತು. ನೋಡನೋಡುತ್ತಿದ್ದಂತೆ ಬುಲೆಟ್​ನ ಹೆಡ್​ಲೈಟ್​ವೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನ ನೋಡಿದ ಜನರು ಸ್ನೇಕ್ ಕಿರಣ್ ಗೆ ಫೋನಾಯಿಸಿದ್ದಾರೆ. ತಕ್ಷಣ ಅವರು ಸಹ ಸ್ಥಳಕ್ಕೆ ಬಂದಿದ್ಧಾರೆ. ಹೆಡ್​ಲೈಟ್​ ಬಿಚ್ಚಿ ಹಾವನ್ನ ಹಿಡಿಯಬೇಕು ಎನ್ನುವಷ್ಟರಲ್ಲಿ ಹೆಡ್​ಲೈಟ್ ಮೇಲೆ ಬಂದು, ಹೆಡೆಯೆತ್ತಿದ ನಾಗರಾಜ ಸುತ್ತಮುತ್ತ ನೋಡುತ್ತಾ ಬುಸುಗುಡಲು ಆರಂಭಿಸಿದ್ದ.  ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ…

Read More

ರಿಪ್ಪನ್‌ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ಸಾಂತ್ವಾನ|sandeep

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಅಸ್ಸಾಂನ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ವಿಚಾರ ತಿಳಿಯುತಿದ್ದಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮೃತ ಯೋಧನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಒಬ್ಬ ಯುವ ಯೋಧ ಅಕಾಲಿಕವಾಗಿ ಮೃತಪಟ್ಟಿರುವುದು ರಾಷ್ಟ್ರಕ್ಕಾದ ನಷ್ಟವಾಗಿದೆ. ನಗುಮೊಗದ ಯುವಕ ಸಂದೀಪ್…

Read More

ರಿಪ್ಪನ್‌ಪೇಟೆಯ ಯೋಧ ಸಂದೀಪ್ ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗ ಸಾವು|Rpet

ರಿಪ್ಪನ್‌ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮಣಿಪುರದ ಅಸ್ಸಾಂ ರೈಫಲ್ಸ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ ಸಂದೀಪ್ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ರವರ ಪುತ್ರರಾಗಿದ್ದು ಕಳೆದ 2 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಸಂದೀಪ್ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ ಆದರೆ ಬಲ್ಲ ಮೂಲಗಳ ಪ್ರಕಾರ  ಇಂದು ಮುಂಜಾನೆ  ತಾನು ಕರ್ತವ್ಯ ನಿರ್ವಹಿಸುತಿದ್ದ ಪ್ರದೇಶದಲ್ಲಿ…

Read More

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ|pranati

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ ರಿಪ್ಪನ್‌ಪೇಟೆ : ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಹಿಂದೂಸ್ತಾನಿ ಸಂಗೀತ ಜೂನಿಯರ್‌ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ಗಾನ ಕೋಗಿಲೆ ಎಂದೆ ಖ್ಯಾತಿಯಾಗಿರುವ ಯುವ ಪ್ರತಿಭೆ ಪ್ರಣತಿ ಅಣ್ಣಪ್ಪ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾಲೂಕ್ ,ಜಿಲ್ಲಾ ,ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹಾಗೂ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರಣತಿ ಅಣ್ಣಪ್ಪ…

Read More

ಸಹಕಾರಿ ಸಂಸ್ಥೆಗಳಿಂದ ರೈತರ ಬದುಕು ಹಸನಾಗಿದೆ – ಹರತಾಳು ಹಾಲಪ್ಪ|inauguration

ಸಹಕಾರಿ ಸಂಸ್ಥೆಗಳಿಂದ ರೈತರ ಬದುಕು ಹಸನಾಗಿದೆ : ಹಾಲಪ್ಪ ರಿಪ್ಪನ್‌ಪೇಟೆ : ಸಹಕಾರಿ ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದ ರೈತ ಕುಟುಂಬದ ಬದುಕು ಹಸನಾಗಿದೆ ಎಂದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.  ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಹಾಗೂ ೮೫ ಲಕ್ಷದ ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿರುವ ಬಹುಸೇವಾ ವಾಣಿಜ್ಯ ಗೋದಾಮು ಹಾಗೂ ೪ನೇ ವರ್ಷದ ಜಿಲ್ಲಾ ಮಟ್ಟದ…

Read More

ಮತಾಂತರ ಆರೋಪ – ಪಾದ್ರಿ ಮನೆಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು|protest

ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದ ಮನೆಗೆ ಬಜರಂಗ ದಳ ಮುತ್ತಿಗೆ ಹಾಕಿದ ಘಟನೆ ಶಿವಮೊಗ್ಗ ತಾಲೂಕಿನ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಪ್ರಾರ್ಥನೆ ನಡೆಸುತ್ತಿದ್ದ ಮನೆಯಲ್ಲಿ ಬಜರಂಗ ದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಪಿಶೆಟ್ಟಿಕೊಪ್ಪದಲ್ಲಿರುವ ಮನೆಯೊಂದರಲ್ಲಿ ಪ್ರತಿ ಭಾನುವಾರ ಹಿಂದೂಗಳನ್ನು ಕರೆಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪಾದ್ರಿ ಮಣಿಕಂಠ ಮತ್ತವರ ತಂಡದವರು ಪ್ರತಿ ಭಾನುವಾರ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜನೆ ಮಾಡುತ್ತಿದ್ದರು. ಪ್ರಾರ್ಥನೆ ಆಯೋಜಿಸುತ್ತಿದ್ದವರ ವಿರುದ್ಧ…

Read More