w
Headlines
Home » ಹೆದ್ದಾರಿಪುರ : ಗ್ರಾಪಂ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಕೆ|election

ಹೆದ್ದಾರಿಪುರ : ಗ್ರಾಪಂ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಕೆ|election

ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಮ ಪಂಚಾಯತ್ ನ ತಳಲೆ ವಾರ್ಡ್ ನ ಉಪ ಚುನಾವಣೆಗೆ ಬೇಕರಿ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಫೆ.25 ರ ಶನಿವಾರ ಚುನಾವಣೆ ನಡೆಯಲಿದೆ.




ಹೆದ್ದಾರಿಪುರ ಗ್ರಾಮ ಪಂಚಾಯತ್ ನ ತಳಲೆ ವಾರ್ಡ್ ನ ಸದಸ್ಯರಾಗಿದ್ದ ಚೂಡಾಮಣಿ ರವರು ಇತ್ತೀಚಿಗೆ ನಿಧನರಾದ ಹಿನ್ನಲೆಯಲ್ಲಿ ಉಪ ಚುನಾವಣೆ ನಡೆಯುತಿದ್ದು ಈ ಸ್ಥಾನಕ್ಕೆ ಕ್ರೀಯಾಶೀಲ ಯುವಕ ಬೇಕರಿ ಸುರೇಶ್ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.




ಇಂದು ಹೆದ್ದಾರಿಪುರ ಗ್ರಾಮ ಪಂಚಾಯತಿಯಲ್ಲಿ ಚುನಾವಣಾಧಿಕಾರಿ ಸತೀಶ್ ರವರಲ್ಲಿ ಬೇಕರಿ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.

ತಳಲೆ ವಾರ್ಡ್ ನ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಆಕಾಂಕ್ಷಿಗಳು ಭರ್ಜರಿಯಾಗಿ ಚುನಾವಣೆಗೆ ಸಜ್ಜಾಗಿದ್ದು ಅವರಿಗೆ ಸೆಡ್ಡು ಹೊಡೆಯಲು ಯುವ ಶಕ್ತಿಯನ್ನೆ ಅಸ್ತ್ರವನ್ನಾಗಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸಿರುವ ಬೇಕರಿ ಸುರೇಶ್ ಗೆಲುವಿಗೆ ಮತದಾರರು ಕೈ ಹಿಡಿಯುತ್ತಾರೋ ಕಾದು ನೋಡಬೇಕಾಗಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.