Headlines

ತೀರ್ಥಹಳ್ಳಿಯ ನೂತನ ಸಿಪಿಐ ಆಗಿ ಅಶ್ವಥ್ ಗೌಡ ನೇಮಕ :

ತೀರ್ಥಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ  ಅಶ್ವಥ್ ಗೌಡ.ಜೆ ರವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಈಗಿನ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ  ಸಂತೋಷ್ ಕುಮಾರ್ ರವರ ಸ್ಥಾನಕ್ಕೆ ನೂತನ ಸಿಪಿಐ‌ ಆಗಿ ಅಶ್ವಥ್ ಗೌಡ ರವರು ವರ್ಗಾವಣೆಗೊಂಡಿದ್ದಾರೆ. ಸಂತೋಷ್ ಕುಮಾರ್‌ ನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯಲ್ಲಿದ್ದ ಅಶ್ವಥ್ ಗೌಡ ತೀರ್ಥಹಳ್ಳಿ ಸಿಪಿಐ ಆಗಿ ವರ್ಗಾವಣೆಗೊಂಡಿದ್ದಾರೆ. ಸಂತೋಷ್ ಕುಮಾರ್ ಕಳೆದೆರಡು ವರ್ಷಗಳಿಂದ ತೀರ್ಥಹಳ್ಳಿ ಸಿಪಿಐ…

Read More

ರಿಪ್ಪನ್‌ಪೇಟೆಯ ಗಾನ ಪ್ರತಿಭೆಗೆ ಗೃಹ ಸಚಿವರಿಂದ ಸನ್ಮಾನ :

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆಯ ಯುವ ಗಾನ ಪ್ರತಿಭೆ ಪ್ರಣತಿ ಅಣ್ಣಪ್ಪನವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸನ್ಮಾನಿಸಿ ಗೌರವಿಸಿದರು. ತೀರ್ಥಹಳ್ಳಿಯಲ್ಲಿ ನಡೆದ ಶಬ್ದ ಟ್ರಸ್ಟ್ ನ ಹಾಗೂ ವಿದ್ಯಾ ಸಿರಿ ಸಂಸ್ಥೆ ಅವರ  ಸಹ ಯೋಗದೊಂದಿಗೆ ನಡೆದ 50 ಶಾಲೆಗಳಿಗೆ ನೋಟ್ ಬುಕ್ ವಿತರಣೆ ,ನುಡಿನಮನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಕ್ಕವಯಸ್ಸಿನಲ್ಲೇ ಅದ್ಭುತ ಸಾಧನೆ ತೋರಿದ ತನ್ನ ಕಂಠಸಿರಿಯಿಂದ ಗಾಯನ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿ ಸಂಗೀತ…

Read More

ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ‌ಜೆ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿ

ಶಿವಮೊಗ್ಗದ ಜೆಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಸಂದೀಪ್ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದನು.  ಈತನ ಜೊತೆ ಹಾಸ್ಟೆಲ್ ನಲ್ಲಿದ್ದ ಸಹಪಾಠಿಗಳು ರಜೆಯ ಕಾರಣ ತಮ್ಮ ಊರಿಗೆ ಹೋಗಿದ್ದರು. ಎರಡು ದಿನಗಳಿಂದ ಕೊಠಡಿಯಿಂದ‌ಹೊರಗೆ ಬಾರದ ವಿದ್ಯಾರ್ಥಿ ಸಂದೀಪ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಎನ್ನಲಾಗಿದೆ. ಸಂದೀಪ್ ಮೂಲತ ಕಲಬುರ್ಗಿ ವಾಸಿಯಾಗಿದ್ದು ಶಿವಮೊಗ್ಗದ ಜೆ ಎನ್ ಸಿಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.  ಕೊಠಡಿಯಲ್ಲಿ ಫ್ಯಾನ್ ಗೆ ಸಂದೀಪ್…

Read More

ತೀರ್ಥಹಳ್ಳಿಯಲ್ಲಿ ಅಕ್ರಮ ಮರಳು ಸಾಗಾಟ : ಲಾರಿಗಳು ಸೀಜ಼್ !!!!!!

ತೀರ್ಥಹಳ್ಳಿ ತಾಲೂಕಿನ ಹಲವು ಮರಳು ಕ್ವಾರೆಗಳಲ್ಲಿ ನಿರಂತರವಾಗಿ ಮರಳು ಅಕ್ರಮ ಸಾಗಾಣಿಕೆ ಆಗುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು  ಕಣ್ಣುಮುಚ್ಚಿ ಮೌನವಸ್ಥೆಯಲ್ಲಿ ಇರುವುದಕ್ಕೆ   ಗೃಹಸಚಿವರ ತವರೂರಿನ ಅಕ್ರಮ ಮರಳು ಸಾಗಾಟ ಪ್ರಕರಣವೇ ಸಾಕ್ಷಿಯಾಗಿದೆ. ಭಾನುವಾರ ಸಂಜೆಯ ವೇಳೆ ಮರಳನ್ನ ಡಬ್ಲಿಂಗ್ ಮಾಡಿಕೊಂಡು ಬರುತ್ತಿದ್ದ ಲಾರಿಯನ್ನ ಯಾರೋ ಒಬ್ಬರು ಪೊಲೀಸ್ ಇಲಾಖೆ ಮಾಹಿತಿ ನೀಡಿ ಅದನ್ನು ಕುಶಾವತಿ ಬಳಿ  ಹಿಡಿಸುವ ಸ್ಥಿತಿ ಬಂದಿದೆ ಎಂದರೆ ಗೃಹಸಚಿವರ ತವರಿನಲ್ಲಿ ಎಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅರ್ಥವಾಗುತ್ತದೆ.  ತಾಲೂಕಿನ…

Read More

ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಲ್ಲರಿಗೂ ಭಾವ..!!!: ಬೇಳೂರು ಗೋಪಾಲ ಕೃಷ್ಣ ವ್ಯಂಗ್ಯ…

ರಿಪ್ಪನ್ ಪೇಟೆ: ರಾಜ್ಯದ ಬಿಜೆಪಿ ಸರಕಾರದ ಆಡಳಿತ ಕಳಪೆಯಾಗಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲರಿಗೂ ಭಾವ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಉತ್ತಮ ಆಡಳಿತವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.  ಪಟ್ಟಣದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು  ಬೆಲೆ ಏರಿಕೆಯಿಂದ  ರಾಜ್ಯದಲ್ಲಿ ಜನಸಾಮಾನ್ಯರ ಬದುಕುವುದು ದುಸ್ತರವಾಗಿದೆ. ಕೂಲಿ ಕಾರ್ಮಿಕರು ಬಡವರು ಹಾಗೂ ಮಧ್ಯಮವರ್ಗದವರು  ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಕೇಂದ್ರ ಹಾಗೂ ರಾಜ್ಯದ…

Read More

ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಆಯನೂರು ಸಮೀಪದ ಚೋರಡಿಯಲ್ಲೊಂದು ಹೃದಯ ವಿದ್ರಾವಕ ಘಟನೆ

ಆಯನೂರು ಸಮೀಪದ ಚೋರಡಿಯಲ್ಲಿ ಇಬ್ಬರು ಮಕ್ಕಳಿಗೆ ನೇಣುಬಿಗಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ತಾಯಿ‌ ಜ್ಯೋತಿ (25) ಮಕ್ಕಳಾದ ಎರಡುವರೆ ವರ್ಷದ ಸಾನ್ವಿ ಹಾಗೂ ಒಂದು ವರ್ಷದ ಕುಶಾಲ್‌ನೊಂದಿಗೆ ನೇಣು ಬಿಗಿದುಕೊಂಡಿದ್ದಾರೆ. ನೇಣಿಗೆ  ಕೌಟುಂಬಿಕ ಸಮಸ್ಯೆ ಕಾರಣವೆಂದು ಹೇಳಲಾಗುತ್ತಿದೆ. ಇನ್ನು ಕೆಲವರು ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ. ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿದ್ದ ಶಿವಕುಮಾರ್ ಪತ್ನಿ ಜ್ಯೋತಿ(25) ಎರಡು ವರೆ ವರ್ಷದ ಸಾನ್ವಿ,…

Read More

ಡಿ ಕೆ ಶಿವಕುಮಾರ್ ಜನ್ಮದಿನದ ಪ್ರಯುಕ್ತ ಸಾಗರದ ತಾಯಿ ಮಗು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ :

ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಿ ಕೆ ಶಿವಕುಮಾರ್ ಜನ್ಮದಿನ ಆಚರಣೆ ಪ್ರಯುಕ್ತ ಸಾಗರದ ತಾಯಿ ಮಗು ಆಸ್ಪತ್ರೆಯಲ್ಲಿ ದಾಖಲಾದವರಿಗೆ ಹಣ್ಣು ಬ್ರೆಡ್ ನ್ನು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ವಿತರಿಸಿದರು. ನಂತರ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ವಿರುದ್ಧ ಟ್ವೀಟ್ ಮಾಡಿರುವ ಮಾಜಿ ಸಂಸದೆ ರಮ್ಯ ಅವರ ಕ್ರಮ ಖಂಡನೀಯ. ಪಕ್ಷದ ವರಿಷ್ಠರು ರಮ್ಯಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಡಿಕೆಶಿ ಅವರ…

Read More

ವರ್ಕ್ ಫ್ರಂ ಹೋಮ್ ಕೆಲಸದ ಆಮಿಷಕ್ಕೆ ಬಿದ್ದು ಲಕ್ಷಾಂತರ ಹಣ ಕಳೆದುಕೊಂಡ ಯುವಕ :

ವರ್ಕ್ ಫ್ರಂ ಹೋಮ್ ಕೆಲಸದ ಆಮಿಷಕ್ಕೆ ಬಿದ್ದ ಯುವಕನೊಬ್ಬ ಸುಮಾರು 5 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಬದನೆಹಾಳ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಆದಾಯ ಗಳಿಸಲು ಮುಂದಾದ ಯುವಕನೊಬ್ಬ ಬೋನಸ್ ಮತ್ತು ಕಮೀಷನ್ ಆಸೆಗೆ ಬರೋಬ್ಬರಿ 4.92 ಲಕ್ಷ ರೂ. ಕಳೆದುಕೊಂಡಿದ್ದಾನೆ. ವಂಚನೆಗೆ ಒಳಗಾಗಿದ್ದು ಹೇಗೆ ??? 32 ವರ್ಷದ ಯುವಕ ಮನೆಯಲ್ಲೇ ಕುಳಿತು ಕೆಲಸ ಮಾಡಲು ನಿರ್ಧರಿಸಿ ಅಂತಹ ಅವಕಾಶಗಳನ್ನು ಕಂಡುಕೊಳ್ಳಲು ಗೂಗಲ್ ಮೊರೆ ಹೋಗಿದ್ದ. ಹೀಗೆ ಗೂಗಲ್…

Read More

ಆರಗ ಜ್ಞಾನೇಂದ್ರ ಉಡಾಫೆ ಮಾತನಾಡಲು ಹೆಸರುವಾಸಿ : ಪುಷ್ಪಾ ಅಮರನಾಥ್

 ಆರಗದಲ್ಲಿ ನೆಡೆದ ಅತ್ಯಾಚಾರ ಪ್ರಕರಣಕ್ಕೆ ನ್ಯಾಯ ಸಿಗದೇ ಇದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರ ನಾಥ್ ತಿಳಿಸಿದರು. ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಆರಗದಲ್ಲಿ ನೆಡೆದ ದಲಿತ ಸಮಾಜದ ಮೇಲಿನ ಅತ್ಯಾಚಾರ  ಬೇರೆ ಯಾವುದಾದರು ಸಮಾಜದ ಮೇಲೆ ಇಂತಹ ಘಟನೆ ನೆಡೆದಿದ್ದರೆ ಇಸ್ಟೊತ್ತಿಗಾಗಲೇ  ನ್ಯಾಯ ಸಿಗುತ್ತಿತ್ತು. ಗ್ರಾಮಪಂಚಾಯಿತಿಯಲ್ಲಿ ಏನೇ ನೆಡೆದರು ಅಲ್ಲಿನ ಸದಸ್ಯರಿಗೆ ಗೊತ್ತಾಗುತ್ತದೆ ಆದರೆ ಒಬ್ಬ ಗೃಹಸಚಿವರಿಗೆ ಗೊತ್ತಿಲ್ಲ ಎಂದರೆ ಏನು ಅರ್ಥ. ಆರಗ…

Read More

ಸಿಗಂದೂರು ಸಮೀಪ ರಸ್ತೆ ಅಪಘಾತ : ಓರ್ವನ ಸ್ಥಿತಿ ಗಂಭೀರ

ಸಿಗಂದೂರು ದೇವಸ್ಥಾನದ ಸಮೀಪದ ಕಳಸವಳ್ಳಿ ಗ್ರಾಮದಲ್ಲಿ ಟೆಂಪೋ ಟ್ರಾವಲರ್ ಗಾಡಿಯ ಚಾಲಕನು ವಾಹನ ಚಲಿಸುತ್ತಿದ್ದಾಗ ಫೀಡ್ಸ್ ಬಂದಿರುವ  ಹಿನ್ನಲೆ ನಿಯಂತ್ರಣ ತಪ್ಪಿ ವಾಹನ ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. 11ಈ ವಾಹನದಲ್ಲಿ 10 ಜನ ಪ್ರಯಾಣಿಕರಿದ್ದರು,ನಾಲ್ವರಿಗೆ ಪೆಟ್ಟಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಸಿಗಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥ0ಮ ಚಿಕಿತ್ಸೆ ನೀಡಿ,ಸಾಗರದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಬೆಂಗಳೂರು ಸಮೀಪದ ಬಿಡದಿ ಮೂಲದ ಯಾತ್ರಾರ್ಥಿಗಳು ಈ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Read More
Exit mobile version