Headlines

ಇಬ್ಬರು ಮಕ್ಕಳಿಗೆ ನೇಣು ಬಿಗಿದು ತಾಯಿ ಆತ್ಮಹತ್ಯೆ : ಆಯನೂರು ಸಮೀಪದ ಚೋರಡಿಯಲ್ಲೊಂದು ಹೃದಯ ವಿದ್ರಾವಕ ಘಟನೆ

ಆಯನೂರು ಸಮೀಪದ ಚೋರಡಿಯಲ್ಲಿ ಇಬ್ಬರು ಮಕ್ಕಳಿಗೆ ನೇಣುಬಿಗಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ತಾಯಿ‌ ಜ್ಯೋತಿ (25) ಮಕ್ಕಳಾದ ಎರಡುವರೆ ವರ್ಷದ ಸಾನ್ವಿ ಹಾಗೂ ಒಂದು ವರ್ಷದ ಕುಶಾಲ್‌ನೊಂದಿಗೆ ನೇಣು ಬಿಗಿದುಕೊಂಡಿದ್ದಾರೆ.

ನೇಣಿಗೆ  ಕೌಟುಂಬಿಕ ಸಮಸ್ಯೆ ಕಾರಣವೆಂದು ಹೇಳಲಾಗುತ್ತಿದೆ. ಇನ್ನು ಕೆಲವರು ವರದಕ್ಷಿಣೆ ಕಿರುಕುಳದಿಂದ ನವ ವಿವಾಹಿತೆ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ.

ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿದ್ದ ಶಿವಕುಮಾರ್ ಪತ್ನಿ ಜ್ಯೋತಿ(25) ಎರಡು ವರೆ ವರ್ಷದ ಸಾನ್ವಿ, ಒಂದು ವರ್ಷದ ಕುಶಾಲ್ ನೊಂದಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಶಿವಕುಮಾರ್ ಕೆಲಸದಿಂದ ವಾಪಾಸ್ ಆಗುತ್ತಿದ್ದಂತೆ ಈ ದೃಶ್ಯ ಕಂಡು ಬಂದಿದೆ. ಜ್ಯೋತಿ ಸಾಸಿವೆಹಳ್ಳಿಯವರಾಗಿದ್ದು ಶಿವಕುಮಾರ್ ನೊಂದಿಗೆ ವಿವಾವಹವಾಗಿ 5 ವರ್ಷ ಕಳೆದಿತ್ತು.ಕುಂಸಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ.

ಜ್ಯೋತಿ ಸಾಸಿವೆಹಳ್ಳಿ ಗ್ರಾಮದವರಾಗಿದ್ದು, ಮದುವೆಯಾಗಿ ಐದು ವರ್ಷವಾಗಿತ್ತು.

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Exit mobile version