ದೆಹಲಿಗೆ ತೆರಳಿದ್ದು ವೈಯಕ್ತಿಕ ಕೆಲಸಕ್ಕಾಗಿ : ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಸಚಿವ ಸಂಪುಟ ವಿಚಾರವಾಗಿ ಸಿಎಂ ದೆಹಲಿಗೆ ಹೋದ ಬೆನ್ನಲ್ಲೆ , ಗೃಹಸಚಿವ ಆರಗ ಜ್ಞಾನೇಂದ್ರರವರು ಸಹ ದೆಹಲಿ ವಿಮಾನ ಹತ್ತಿದ್ದರು. ಇದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅಲ್ಲದೆ, ಆಪ್ತ , ಸಂಘ ಪರಿವಾರ, ಬಿಜೆಪಿ ಮತ್ತು ದೆಹಲಿಯ ಮೂಲಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿದ್ದವು. ಹಂಗಾಮಿ ಸಿಎಂ ಅಥವಾ ನಾಲ್ಕು ಡಿಸಿಎಂ ಸ್ಥಾನದಲ್ಲಿ ಒಂದು ಇವರಿಗೆ ಸಿಗಲಿದೆ ಎಂಬ ಮಾತು ಒಂದು ಕಡೆಯಾಗಿದ್ದರೇ, ಗೃಹಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ತೆರಳಿದ್ದರು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಇದರ ನಡುವೆ, ತಮ್ಮ ಖಾಸಗಿ…