Headlines

ಪದವಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಇಚ್ಚೆಯ ಉಡುಪು ಧರಿಸಿ ಕಾಲೇಜಿಗೆ ಬರಬಹುದು : ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ

ನಾಳೆಯಿಂದ ಪದವಿ ಕಾಲೇಜು ಆರಂಭಿಸಲು ಸರಕಾರ ಬದ್ದವಾಗಿದೆ ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಇಷ್ಟದ ಉಡುಪನ್ನು ಧರಿಸಿಕೊಂಡು ಹೋಗಬಹುದು. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯವಿದೆ. ಆದರೆ, ಇದನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‍.ಅಶ್ವತ್ಥನಾರಾಯಣ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಚಿವರು ಮಾಧ್ಯಮದವರೊಂದಿಗೆ ಮಾತನಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಾಗಾಗಿ, ನಿಯಮಕ್ಕೆ ಅನುಸಾರವಾಗಿಯೇ ಬರಬೇಕು. ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದೂ ಸಚಿವರು…

Read More

ರಿಪ್ಪನ್ ಪೇಟೆ ಪಿಯು ಕಾಲೇಜಿನಲ್ಲಿ ಶಾಂತಿ ಸಭೆ : ಸರ್ಕಾರದ ಆದೇಶ ಪಾಲನೆಗೆ ಮನವಿ

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಸ್ಲಿಂ ಸಮುದಾಯದ ಪೋಷಕರ ಸಭೆ ಇಂದು ಕಾಲೇಜಿನಲ್ಲಿನಡೆಯಿತು. ಈ ಸಂಧರ್ಭದಲ್ಲಿ ಪಿ.ಎಸ್.ಐ ಶಿವಾನಂದಕೋಳಿ ಅವರು ಮಾತನಾಡಿ ಸರ್ಕಾರ ಹಾಗೂ ನ್ಯಾಯಾಲಯದ ಆದೇಶ ಪರಿಪಾಲನೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ.  ಆ ನಿಟ್ಟಿನಲ್ಲಿ ಈಚೆಗೆ ವಿವಾದಕ್ಕೆ ಒಳಗಾಗಿರುವ ವಸ್ತ್ರಸಂಹಿತೆಯನ್ನು ಹೊರತುಪಡಿಸಿ ಶಾಲಾ-ಕಾಲೇಜಿನ ನಿಗದಿತ ಸಮವಸ್ತ್ರವನ್ನು ಧರಿಸಿ ಬರುವಂತೆ ಸೂಚಿಸಿದರು. ಶಿಕ್ಷಣದಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗದೇ ತಮ್ಮ ಮುಂದಿನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಪೋಷಕರೂ ಸಹ…

Read More

ರಿಪ್ಪನ್ ಪೇಟೆಯಲ್ಲಿ ನಾಳೆ ಕಾಂಗ್ರೆಸ್ ಪಕ್ಷದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ಅಭಿಯಾನ :

ರಿಪ್ಪನ್ ಪೇಟೆ : ದಿನಾಂಕ 16 ರ ಬುಧವಾರ,ಸಮಯ ಸಂಜೆ 3:00 ಗಂಟೆಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ನ ಕುವೆಂಪು ಸಭಾಭವನ ದಲ್ಲಿ ಕಾಂಗ್ರೆಸ್ ಪಕ್ಷದ ಕೆರೆಹಳ್ಳಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯನ್ನು ಹಾಗೂ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷಾಸಾಬ್ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆರೆಹಳ್ಳಿ ಹೋಬಳಿಯ ರಿಪ್ಪನ್ ಪೇಟೆ ,ಬಾಳೂರು ,ಹರತಾಳು,ಬೆಳ್ಳೂರು , ಕೆಂಚನಾಲ , ಅರಸಾಳು ಗ್ರಾಪಂ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರ ಸಭೆ…

Read More

ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರ್ಗವಿ ನಾರಾಯಣ್ ನಿಧನ :

ಅನಾರೋಗ್ಯದಿಂದ ಬಳಲುತ್ತಿದ್ದ ಚಂದನವನದ ಹಿರಿಯ ನಟಿ ಭಾರ್ಗವಿ ನಾರಾಯಣ್ ವಿಧಿವಶರಾಗಿದ್ದಾರೆ. ಭಾರ್ಗವಿ ನಾರಾಯಣ್ ಅವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರದ ನಟಿ ಮತ್ತು ಕರ್ನಾಟಕದ, ರಂಗಭೂಮಿಯ ಕಲಾವಿದೆ. ಭಾರ್ಗವಿ ನಾರಾಯಣ್ ಅವರ ಕೆಲವು ಪ್ರಸಿದ್ಧ ಚಿತ್ರಗಳು ನಟಿಸಿದ್ದಾರೆ. ಎರಡು ಕನಸು, ಪಲ್ಲವಿ ಅನುಪಲ್ಲವಿ, ಹಾಗೂ ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ನಾರಾಯಣ್ ಅವರು ಇಪ್ಪತ್ತು ಚಿತ್ರಗಳು ಹಾಗೂ ದೂರದರ್ಶನ ಸರಣಿಯ ಮಂಥನಾ ಮತ್ತು ಮುಕ್ತಾ (ಟಿವಿ ಸರಣಿಗಳು) ಸೇರಿದಂತೆ ಕನ್ನಡದಲ್ಲಿ ಅನೇಕ…

Read More

ಹೊಸನಗರದಲ್ಲಿ ಯಶಸ್ವಿಯಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹೊಸನಗರ ಪಟ್ಟಣದ ಮಾವಿನಕೊಪ್ಪ ಬಳಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯುತ್ತಿದ್ದು, ಈ ಶಿಬಿರದಲ್ಲಿ ಹಲವಾರು ಜನರು ಸ್ವ ಪ್ರೇರಣೆಯಿಂದ ರಕ್ತದಾನ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಾಲ ಗಣಪತಿ ಸೇವಾ ಸಮಿತಿ ಹೊಸನಗರ, ಜೆಸಿಐ ಡೈಮೆಂಡ್ ಸಂಸ್ಥೆ ಹೊಸನಗರ  ಸ್ಪಂದನ ಹೆಲ್ತ್ ಫೌಂಡೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದಾರೆ ಎನ್ನಲಾಗಿದೆ. ಮೊಬೈಲ್ ಬ್ಲಡ್ ಡೊನೇಷನ್ ವ್ಯಾನ್ ಮೂಲಕ…

Read More

ಮಾನವೀಯತೆ ಮೆರೆದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

ಬೈಕ್ ಸವಾರನೊಬ್ಬ ಆನಂದಪುರ ಸಮೀಪದ ಹೊಸೂರು ಬಳಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು, ಅದೇ ದಾರಿಯಲ್ಲಿ ಸಾಗುತ್ತಿದ್ದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ ಅವರು ಅಪಘಾತಕ್ಕೀಡಾದ ವ್ಯಕ್ತಿಯನ್ನು ಉಪಚರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂದು ಮಾಜಿ ಶಾಸಕರು ಸಾಗರದಿಂದ ಆನಂದಪುರ ಬರುವಾಗ ಹೊಸೂರು ಬಳಿ ರಸ್ತೆಯಲ್ಲಿ ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದನು.ತಕ್ಷಣ ಕಾರಿನಿಂದ ಇಳಿದು ಸ್ಥಳಕ್ಕೆ ಧಾವಿಸಿದ ಮಾಜಿ ಶಾಸಕರು ಸಹಾಯಕರ ಸಹಾಯಕ್ಕೂ ಕಾಯದೇ ತಾವೇ ಬೈಕ್ ಎತ್ತಿ ನಿಲ್ಲಿಸಿ,…

Read More

ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಶ್ರೀನಿವಾಸಚಾರಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಹೊರಗುತ್ತಿಗೆ ನೌಕರರಿಂದ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಮುಷ್ಕರ

ಹೊಸನಗರ : ಸರ್ಕಾರವೇ ರಚಿಸಿದ ಶ್ರೀನಿವಾಸಾಚಾರಿ ಸಮಿತಿ ವರದಿ ಅನುಷ್ಠಾನ ಹಾಗೂ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ಹೊಸನಗರ ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವುದರ ಮೂಲಕ ಹೊರಗುತ್ತಿಗೆದಾರರು ಸಾಂಕೇತಿಕವಾಗಿ ಮುಷ್ಕರಕ್ಕೆ ಕರೆ ನೀಡಿದ ಘಟನೆ ಇಂದಿನಿಂದ ನಡೆಯುತ್ತಿದೆ. 2019 -20, 2020-21ರ ಸಮಯದಲ್ಲಿ ಕೋವೀಡ್-19 ವಿರುದ್ಧ ಹೋರಾಟಕ್ಕಾಗಿ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ನಿಯೋಜನೆ ಮಾಡಿಸಿಕೊಂಡ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ…

Read More

ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದಕ್ಕೆ ಪರೀಕ್ಷೆಯನ್ನೆ ಬಹಿಷ್ಕರಿಸಿದ ವಿದ್ಯಾರ್ಥಿಗಳು :

ಶಿವಮೊಗ್ಗದಲ್ಲಿ ತಾರಕಕ್ಕರೇರಿದ ಹಿಜಾಬ್ ವಿವಾದ.ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಹೊರನಡೆದಿದ್ದಾರೆ. ಇಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ  ಎಸ್ ಎಸ್ ಎಲ್ ಸಿ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು  ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಬಿಡಲಿಲ್ಲ ಎಂಬ ಕಾರಣಕ್ಕೆ 13 ವಿದ್ಯಾರ್ಥಿ ನಿಯರಿಂದ ಪರೀಕ್ಷೆ ಬಹಿಷ್ಕಾರಿಸಿದ್ದಾರೆ. ಅದರಂತೆ ತುಂಗನಗರ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬಳು ಹಿಜಬ್ ತೆಗೆದು ತರಗತಿಯಲ್ಲಿ ಕೂರಲು ಸಾಧ್ಯವಿಲ್ಲವೆಂದು ತರಗತಿ ಬಹಿಷ್ಕರಿಸಿ ಹೊರನಡೆದಿದ್ದಾಳೆ, ಶಿಕಾರಿಪುರ ಮತ್ತು ಸಾಗರದಲ್ಲಿಯೂ ಇದೇ…

Read More

ಕರ್ತವ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ ಸಾವು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ

ಶಿವಮೊಗ್ಗ : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಸ್ಟಾಫ್‌ ನರ್ಸ್‌ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊ್ರೕ ಎಂಟರಾಲಜಿ ಸೈನ್ಸಸ್‌ ಆ್ಯಂಡ್‌ ಆರ್ಗನ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗೆ ಕರೆತರಲಾಯಿತು. ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ…

Read More

ಪ್ರತಾಪ್ ಸಿಂಹ ಬೇಕಾದರೆ ಪಾಕಿಸ್ತಾನಕ್ಕೆ ಹೋಗಲಿ : ಕಿಮ್ಮನೆ ರತ್ನಾಕರ್ ವಾಗ್ದಾಳಿ

ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ನೀವೇ ಯಾಕೆ ಪಾಕಿಸ್ತಾನಕ್ಕೆ ಹೋಗಬಾರದು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು. ಅವರು ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ಹಿನ್ನಲೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ವಿರುದ್ಧ ಕಿಡಿಕಾರಿದರು. ಹಿಜಬ್ ಮತ್ತು ಕೇಸರಿ ಶಾಲಿನ ವಿಚಾರದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ವಿಚಾರ ಈಗ ಅಂತರಾಷ್ಟ್ರದ ಮಟ್ಟಕ್ಕೆ ಹೋಗಿ ತಲುಪಿದೆ. ಜನರಿಗೆ ಕಾರ್ಯಕ್ರಮ ಕೊಟ್ಟು ಆ ಆಧಾರದ ಮೇಲೆ…

Read More
Exit mobile version