ರಿಪ್ಪನ್ ಪೇಟೆಯ ಪ್ರಗತಿಪರ ಕೃಷಿಕ ಕೆರೆಹಳ್ಳಿ ಟೀಕಪ್ಪಗೌಡರಿಗೆ ಒಲಿದ “ಅನ್ನದಾತ” ರಾಜ್ಯಪ್ರಶಸ್ತಿ
ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಮೇಲಿನ ಕೆರೆಹಳ್ಳಿಯ ಪ್ರಗತಿಪರ ಕೃಷಿಕ ಟೀಕಪ್ಪ ಗೌಡರಿಗೆ ರಾಜ್ಯಮಟ್ಟದ “ಅನ್ನದಾತ” ಎಂಬ ಪ್ರಶಸ್ತಿಯು ಒಲಿದು ಬಂದಿದೆ. ಭಾನುವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ “ಕನ್ನಡ ನುಡಿ ವೈಭವ”-೨೦೨೨ ಎಂಬ ರಾಜ್ಯ ಮಟ್ಟದ ಸಾಹಿತ್ಯ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಆಗಾಧ ಸಾಧನೆಗೈದಿರುವ ಮಲೆನಾಡಿನ ಹೆಮ್ಮೆಯ ಪ್ರಗತಿಪರ ಕೃಷಿಕ ಕೆ ವಿ ಟೀಕಪ್ಪಗೌಡರಿಗೆ “ಅನ್ನದಾತ” ಎಂಬ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ…