Headlines

ಹೊಸನಗರದಲ್ಲಿ ಯಶಸ್ವಿಯಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹೊಸನಗರ ಪಟ್ಟಣದ ಮಾವಿನಕೊಪ್ಪ ಬಳಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯುತ್ತಿದ್ದು, ಈ ಶಿಬಿರದಲ್ಲಿ ಹಲವಾರು ಜನರು ಸ್ವ ಪ್ರೇರಣೆಯಿಂದ ರಕ್ತದಾನ ಮಾಡಿದರು.


ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಾಲ ಗಣಪತಿ ಸೇವಾ ಸಮಿತಿ ಹೊಸನಗರ, ಜೆಸಿಐ ಡೈಮೆಂಡ್ ಸಂಸ್ಥೆ ಹೊಸನಗರ  ಸ್ಪಂದನ ಹೆಲ್ತ್ ಫೌಂಡೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಅಧಿಕ ಜನರು ರಕ್ತದಾನ ಮಾಡಿದ್ದಾರೆ ಎನ್ನಲಾಗಿದೆ.

ಮೊಬೈಲ್ ಬ್ಲಡ್ ಡೊನೇಷನ್ ವ್ಯಾನ್ ಮೂಲಕ ಆಗಮಿಸಿದ ದಾನಿಗಳಿಂದ ನಡೆದ ಈ ರಕ್ತದಾನ ಶಿಬಿರದಲ್ಲಿ ಪುರಸಭಾ ಸದಸ್ಯ ಅಶ್ವಿನ್ ಕುಮಾರ್, 48 ನೇ ಬಾರಿ ರಕ್ತದಾನ ಮಾಡುತ್ತಿರುವ ತಾಲ್ಲೂಕು ಕಾಂಗ್ರೆಸ್ ಪಕ್ಷದ ಮುಖಂಡರಾದ ಸದಾಶಿವ ಶ್ರೇಷ್ಠಿ ಸೇರಿದಂತೆ ಅನೇಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಈ ಶಿಬಿರದಲ್ಲಿ ಡಾ ನಿರ್ಮಲಾ, ದಿನಕರ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



ವರದಿ:- ಪುಷ್ಪಾ ಜಾಧವ್ ಹೊಸನಗರ

Leave a Reply

Your email address will not be published. Required fields are marked *

Exit mobile version