w
Headlines
Home » ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ್ದ ತೀರ್ಥಹಳ್ಳಿಯ ರೌಡಿ ಶೀಟರ್ ಕೋಬ್ರಾ ಸುಹೈಲ್ ಸಾವು|cobra suhail

ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ್ದ ತೀರ್ಥಹಳ್ಳಿಯ ರೌಡಿ ಶೀಟರ್ ಕೋಬ್ರಾ ಸುಹೈಲ್ ಸಾವು|cobra suhail

ತೀರ್ಥಹಳ್ಳಿ : ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್‌ ಇಲಾಖೆಯಿಂದ ಗಡಿಪಾರು ಆದೇಶ ಪಡೆದಿದ್ದ ತೀರ್ಥಹಳ್ಳಿಯ ಸುಹೇಲ್ ಕೋಬ್ರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.




ಸುಹೇಲ್ ವಿರುದ್ದ ತೀರ್ಥಹಳ್ಳಿ ಹಾಗು ಮಾಳೂರು ಠಾಣೆಯಲ್ಲಿ ಹಲವು ಕ್ರಿಮಿನಲ್ ‌ಪ್ರಕರಣ ದಾಖಲಾಗಿದ್ದವು. ಈತನ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಇಲಾಖೆ ಎರಡು ವರ್ಷಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಿತ್ತು. ನವೆಂಬರ್‌ 25 ರಂದು ಗಡಿಪಾರು ಆದೇಶವನ್ನು ಜಾರಿ ಮಾಡಿ ಆತನ ಮನೆಗೆ ನೋಟಿಸ್‌ ಕಳುಹಿಸಲಾಗಿತ್ತು.




ಈ ಗಡಿಪಾರು ಆದೇಶಕ್ಕೆ ಬೆದರಿದ್ದ ಸುಹೇಲ್‌ ಅಂದೇ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ. ಮನೆಯವರು ವಿಷಯ ತಿಳಿದು ಆತನನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಹೇಲ್‌ಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅಲ್ಲೂ ಕಷ್ಟ ಎಂದ ಕಾರಣ ಮಂಗಳೂರಿನ ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಒಯ್ಯಲಾಗಿತ್ತು.




ಹಲವು ದಿನಗಳ ಕಾಲ ಜೀವನ್ಮರಣದ ನಡುವೆ ಒದ್ದಾಡಿದ ಸುಹೇಲ್ ತಡರಾತ್ರಿ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.