POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಪತಿರಾಯ : ಆರೋಪಿ ಬಂಧನ

ಪತ್ನಿಯನ್ನು ಚಾಕುವಿನಿಂದ ಇರಿದು ಪತಿಯೇ ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ಇಂದು ನಡೆದಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ.

ಕರುಣಾಕರ ಎಂಬ 33 ವರ್ಷದ ಎಂಬಿಎ ಪದವೀಧರ ಎರಡು ವರೆ ವರ್ಷದ ಹಿಂದೆ ಬುಳ್ಳಾಪುರದ ಯುವತಿ ಅಮಿತಾ(26) ಎಂಬಾಕೆಯೊಂದಿಗೆ ಮದುವೆಯಾಗಿದ್ದ. ಮದುವೆಯಾಗಿ ಎರಡೂವರೆ ವರ್ಷ ಕಳೆದಿದ್ದರು ಮಕ್ಕಳಾಗಿರಲಿಲ್ಲ. ಆದರೆ ಮಕ್ಕಳ ವಿಚಾರದಲ್ಲಿ ಗಲಾಟೆಯಾಗಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.


ಪದೇ ಪದೇ ಜಗಳವಾಡುತ್ತಿದ್ದ ಪತಿಪತ್ನಿ ಕಳೆದ ವರ್ಷ ಗಂಡನ ಮನೆ ತೊರೆದು ಪತ್ನಿ ಅಮಿತಾ ತವರು ಮನೆ ಸೇರಿದ್ದಳು. ಮೂರು ತಿಂಗಳ ಹಿಂದಷ್ಟೆ ಗಂಡನ ಮನೆಗೆ ಬಂದಿದ್ದಳು. ಶ್ರಾವಣಕ್ಕೆ ಬಂದಿದ್ದ ಆಕೆ ಬಾದ್ರಪದ ಕಳೆಯುವಷ್ಟರಲ್ಲಿ ಹೆಣವಾಗಿದ್ದಾಳೆ.

ಆರೋಗ್ಯ ಸರಿಯಲ್ಲದ ತನ್ನ ತಾಯಿಯನ್ನು ಆಸ್ಪತ್ರೆಗೆ ಹೋಗು ಎಂದು ದುಮ್ಮಳ್ಳಿ ಚಾನೆಲ್ ವರೆಗೆ ಬಿಟ್ಟು ಬಂದಿದ್ದ ಕರಣಾಕರ ಪತ್ನಿಯ ಕುತ್ತಿಗೆಯ ಕೆಳಭಾಗವನ್ನ ಬಗೆದುಬಿಟ್ಟಿದ್ದಾನೆ. ಪತಿಪತ್ನಿಯರ ಜಗಳ ಕೊಲೆ ಹಂತಕ್ಕೆ ಬಂದು ತಲುಪಿರುವುದು ಏಕೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.


ತುಂಗಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ದುಮ್ಮಳ್ಳಿ ಗ್ರಾಮದ ವಾಸಿಯಾದ ಕರುಣಾಕರ (36) ಈತನಿಗೆ 02 ವರ್ಷದ ಹಿಂದೆ ಅಮಿತಾ (27) ಇವರನ್ನು ಮದುವೆ ಮಾಡಿಕೊಟ್ಟಿದ್ದು, ಮದುವೆಯ ಸಮಯದಲ್ಲಿ ಬಂಗಾರ ಮತ್ತು ಹಣವನ್ನು ಕೊಟ್ಟಿದ್ದರೂ ಕೂಡ, ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರವನ್ನು ತರುವಂತೆ ಹೆಂಡತಿಗೆ ಪೀಡಿಸುತ್ತಿದ್ದು, ಕೊಡಲು ಸಾಧ್ಯವಾಗದೇ ಇದ್ದುದರ ದ್ವೇಶದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಆರೋಪಿ ಕರುಣಾಕರನು ದುಮ್ಮಳ್ಳಿಯ ವಾಸದ ಮನೆಯಲ್ಲಿ ಆತನ ಹೆಂಡತಿಯಾದ ಅಮಿತಾಳ ಕುತ್ತಿಗೆ, ಭುಜ, ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾನೆಂದು ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಕಲಂ 498A,304B,302 ಐಪಿಸಿ ಮತ್ತು ಕಲಂ 3 ಮತ್ತು 4 DOWRY PROHIBITION ACT, 1961 ರೀತ್ಯಾ ಪ್ರಕರಣ ದಾಖಲಿಸಿ ಆರೋಪಿ ಕರುಣಾಕರನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.