Headlines

ರಿಪ್ಪನ್ ಪೇಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಸಿದ್ದತೆ :

ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ನಾಳೆ ಎಲ್ಲೆಡೆ ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲು ಅದ್ದೂರಿಯಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಈ ಹಿನ್ನೆಲೆ ಇಂದಿನಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸಿದ್ದತೆ ಮಾಡಿಕೊಂಡಿದ್ದು, ನಾಳೆ ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ   ಹಬ್ಬದ ಪ್ರಯುಕ್ತ ಬೆಳಿಗ್ಗೆ 10 ಗಂಟೆಯಿಂದ 11:30ರ ತನಕ ಮುತ್ತೈದೆಯರಿಗೆ ಅರಿಶಿನ – ಕುಂಕುಮ ನೀಡಲಾಗುವುದು.

ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಲಕ್ಷ್ಮೀ ಪೂಜೆ ಮಾಡಿ ಮನೆಗೆ ಲಕ್ಷ್ಮೀಯನ್ನು ಕೂರಿಸಿ ಆರಾಧನೆ ಮಾಡಲಾಗುತ್ತೆ. ಈ ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಬ. ಅದೇ ರೀತಿ ನಾಳೆ ಎಲ್ಲೆಡೆ ವರ ಮಹಾಲಕ್ಷ್ಮಿ ಹಬ್ಬವನ್ನು ತಮ್ಮ ಮನೆಗಳಲ್ಲಿ ಆಚರಣೆ ಮಾಡುತ್ತಾರೆ. 

ಈ ಹಿನ್ನೆಲೆ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ  ಮುಂಜಾನೆಯಿಂದಲೇ ಹಬ್ಬದ ಖರೀದಿಯಲ್ಲಿ ಜನರು ತೊಡಗಿದ್ರು. ಹೂವು ಹಣ್ಣಿನ ಬೆಲೆ ದುಬಾರಿಯಾದ್ರೂ ಹಬ್ಬ ಮಾಡ್ಬೇಕು ಅಂತ ಜನರು ಸಾಮಾಗ್ರಿಗಳನ್ನು ಖರೀದಿ ಮಾಡಿ ಹಬ್ಬಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡರು.

Leave a Reply

Your email address will not be published. Required fields are marked *