w
Headlines
Home » ಹಳೇ ದ್ವೇಷದ ಹಿನ್ನಲೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ !!!???

ಹಳೇ ದ್ವೇಷದ ಹಿನ್ನಲೆ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ !!!???

 ಮೂತ್ರ ವಿಸರ್ಜನೆಗೆಂದು ಹೊರ ಹೋದ ಯುವಕನ ಮೇಲೆ ಕೆಲ ಯುವಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಸೋಮವಾರ ರಾತ್ರಿ 10 ಗಂಟೆಯ ಆಸುಪಾಸಿನ ಸಮಯದಲ್ಲಿ ನೆಡೆದಿದೆ.

ಶಿವಮೊಗ್ಗ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿರುವ  ತಮ್ಮ ಮನೆಯ ಬಳಿ ಕಾಂತರಾಜು (27) ಮನೆಯಿಂದ ಹೊರ ಬಂದು ಮೂತ್ರ ವಿಸರ್ಜನೆ ಮಾಡುವಾಗ ಹಿಂಬದಿಯಿಂದ ಬಂದ ನಾಲ್ಕೈದು ಜನ ಮಚ್ಚು ಮತ್ತು ಬ್ಯಾಟ್ ನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಯುವಕ ಅವರ ಬಳಿ ಇದ್ದ ಆಯುಧಗಳನ್ನು  ಕಸಿದುಕೊಂಡು ತಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಸ್ಥಳಕ್ಕೆ ಕರೆಯಿಸಿಕೊಂಡ ಹಿನ್ನಲೆಯಲ್ಲಿ ಯುವಕ ಬಚಾವ್ ಆಗಿದ್ದಾನೆ. ದಾಳಿ ನಡೆಸಿದವರನ್ನು ಅನ್ಯಕೋಮಿನ ಹುಡುಗರು ಎಂದು ಹೇಳಲಾಗುತ್ತಿದೆ.

ಹೊಡೆಯುವಾಗ ಇನ್ನೂ ಇಬ್ಬರ ಯುವಕರ ಹೆಸರನ್ನ ಹೇಳಿರುವಪ್ ಹಲ್ಲೆಕೋರರು ಉಳಿದ ಇಬ್ಬರು ಯುವಕರನ್ನೂ ಮುಗಿಸುವುದಾಗಿ ಹೇಳಿದ್ದಾರೆ ಎಂದು ಕಾಂತರಾಜು ತಿಳಿಸಿದ್ದಾರೆ. ಕಾಂತರಾಜುವಿನ ಬಲಗೈ ಏಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೊಳಗಾದ ಕಾಂತರಾಜು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತ ಮತ್ತು ಭಜರಂಗದಳ ಸಹ ಸಂಚಾಲಕರಾಗಿದ್ದಾರೆ ಎಂದು ತಿಳಿದುಬಂದಿದ್ದು ಹಿಂದೂ ಕಾರ್ಯಕರ್ತ ಹರ್ಷನ ಸಾವಿನ ಸಂದರ್ಭದಲ್ಲಿ ಈತ ಪ್ರತಿಭಟನೆ ನೆಡೆಸಿದ್ದ ಹಾಗಾಗಿ ಈತನ ಮೇಲೆ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.