w
Headlines
Home » ರಿಪ್ಪನ್ ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 17ಕ್ಕೆ

ರಿಪ್ಪನ್ ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಜುಲೈ 17ಕ್ಕೆ

ರಿಪ್ಪನ್‌ಪೇಟೆ: ಪಟ್ಟಣದ ರೋಟರಿ ಕ್ಲಬ್‌ನ ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 17ರ ಭಾನುವಾರ ವಿಶ್ವಮಾನವ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ನೂತನ ಕಾರ್ಯದರ್ಶಿ ಸವಿತಾ ರಾಧಾಕೃಷ್ಣ ತಿಳಿಸಿದರು.


ಪಟ್ಟಣದ ರೋಟರಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಅವರು ನಮ್ಮ ಸಂಸ್ಥೆಯ ಸದಸ್ಯರು ಪ್ರಪ್ರಥಮವಾಗಿ ಮಹಿಳಾ ಅಧ್ಯಕ್ಷರು ಮತ್ತು ಕಾರ್ಯದರ್ಶಿಯನ್ನು ಆಯ್ಕೆ ಮಾಡಿದ್ದಾರೆ, ಇದರ ಉದ್ದೇಶ ಮಹಿಳಾ ಸಬಲೀಕರಣವಾಗಿದ್ದು ಸೇವೆಯಲ್ಲಿ ಮಹಿಳೆಯರ ಹೆಚ್ಚು ಪಾಲ್ಗೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ. ಸಂಸ್ಥೆಯು ಇಮ್ಯಾಜಿನ್ ರೋಟರಿ ಎಂಬ ಕಲ್ಪನೆಯನ್ನು ಕೊಟ್ಟಿದ್ದು ಸಮಾನ ಶಿಕ್ಷಣ, ಅಂಗಾಂಗ ದಾನ, ಸ್ತ್ರೀ ಸಬಲೀಕರಣ ಹಾಗೂ ಜಲಯಾತ್ರೆಯನ್ನು ಹಮ್ಮಿಕೊಂಡಿದ್ದು ಈ ಎಲ್ಲಾ ಕಾರ್ಯಕ್ರಮಗಳಿಂದ ಸ್ವಾಸ್ಥ ಸಮಾಜ ನಿರ್ಮಿಸಲು ಶ್ರಮಿಸುತ್ತಿದೆ, ಒಟ್ಟಾರೆಯಾಗಿ ಫಲಾನುಭವಿಗಳಿಗೆ ಯೋಜನೆಗಳು ತಲುಪಿ ಆ ಮೂಲಕ ಸಮ ಸಮಾಜ ನಿರ್ಮಾಣದ ಕಲ್ಪನೆ ಹೊಂದಲಾಗಿದೆ ಎಂದರು.

ಪದಗ್ರಹಣ ಸಮಾರಂಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಹೆಚ್.ಎಲ್.ರವಿ ಪದವಿ ಪ್ರಧಾನ ಅಧಿಕಾರಿಗಳಾಗಿ ಆಗಮಿಸುತ್ತಿದ್ದು ಅಸಿಸ್ಟಂಟ್ ಗವರ್ನರ್ ಡಾ|| ಗುಡದಪ್ಪ ಕಸಬಿ ಹಾಗೂ ಕಿರಣ್ ಜೆ.ಪಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು. 

ಇದೇ ಸಮಾರಂಭದಲ್ಲಿ ಎಸ್. ಎಸ್. ಎಲ್. ಸಿ. ದ್ವಿತೀಯ ಪಿಯುಸಿ ಹಾಗೂ ಅಂತಿಮ  ಪದವಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾಯಕ್ರಮ ಏರ್ಪಡಿಸಲಾಗಿದೆ ಎಂದರು. 

ಪತ್ರಿಕಾ ಗೋಷ್ಠಿಯಲ್ಲಿ ನೂತನ ಅಧ್ಯಕ್ಷೆ ಪ್ರಮೀಳಾ ಲಕ್ಷ್ಮಣಗೌಡ, ಎಂ.ಬಿ.ಲಕ್ಷಣ ಗೌಡ,ವರ್ತೆಶ್ ಹೆಚ್.ಎಂ, ಎಂ.ಬಿ.ಮಂಜುನಾಥ, ರಾಧಾಕೃಷ್ಣ.ಜೆ , ಗಣೇಶ ಕಾಮತ್ , ಡಾಕಪ್ಪ, ರಾಧಾಕೃಷ್ಣ ಎಚ್. ಎ.ಇನ್ನಿತರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.