ಹೊಸನಗರದಲ್ಲಿ 15 -16ನೇ ಶತಮಾನದ ಪ್ರಾಚ್ಯಾವಶೇಷಗಳು ಪತ್ತೆ :

ಹೊಸನಗರ: ಇತ್ತೀಚಿಗೆ ಇತಿಹಾಸ ಸಂಶೋಧಕರಾದ ನವೀನ್ ಜಿ ಆಚಾರ್ಯ ವರಕೋಡು ಅವರು ಗಂಗನಕೊಪ್ಪ ಗ್ರಾಮದಲ್ಲಿ ಕ್ಷೇತ್ರ ಕಾರ್ಯ ನಡೆಸಿದಾಗ ಪ್ರಾಇತಿಹಾಸ ಹಾಗೂ 15-16ನೇ ಶತಮಾನಕ್ಕೆ ಸೇರಿದ ಪ್ರಾಚ್ಯಾವಶೇಷಗಳು ಪತ್ತೆಯಾಗಿದೆ.

ಗಂಗನಕೊಪ್ಪ ಗ್ರಾಮದ ಹೊರವಲಯದಲ್ಲಿ ಹರಿಯುವ ಕಲ್ಲುಹಳ್ಳ ಹೊಳೆಯ ಬಲದಂಡೆಯ ಮೇಲೆ ಸುಪ್ರಕಾಶ ಎಂಬುವವರು ತಮ್ಮ ತೋಟದಲ್ಲಿ ಸಸಿಗಳನ್ನು ನೆಡಿಸಲು ಗುಣಿಗಳನ್ನು ತೆಗೆಯುವ ಸಂಧರ್ಭದಲ್ಲಿ ಪ್ರಾಗೈತಿಹಾಸ ಹಾಗೂ 15-16ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ಅವಶೇಷಗಳು ಲಭ್ಯವಾಗಿದೆ.

ಅವುಗಳಲ್ಲಿ ಮುಖ್ಯವಾದವುಗಳೆಂದರೆ ಇತಿಹಾಸ ಕಾಲದ ನವಶಿಲಾಯುಗಕ್ಕೆ ಸಂಬಂಧಿಸಿದ ರಿಂಗ್‌ಸ್ಟೋನ್, ಪ್ರಾಗೈತಿಹಾಸ ಕಾಲಕ್ಕೆ ಸಂಬಂಧಿಸಿದಂತೆ ಇದೊಂದೇ ಅವಶೇಷ ಈ ನೆಲೆಯಲ್ಲಿ ಲಭ್ಯವಾಗಿದೆ. ಪ್ರಾಗೈತಿಹಾಸ ಮಾನವನು ಕಲ್ಲುಹಳ್ಳ ಭೂ ಪರಿಸರದಲ್ಲಿ ನೆಲೆಸಿದ್ದರ ಕುರಿತು ಅನೇಕ ಅವಶೇಷಗಳನ್ನು ಈ ಹಿಂದೆ ಡಾ.ಪ್ರವೀಣ್‌ದೊಡ್ಡಗೌಡ್ರು ಮತ್ತು ನವೀನ್ ಜಿ ಆಚಾರ್ಯ ವರಕೋಡು ಇವರು ಪತ್ತೆ ಮಾಡಿ ವರದಿ ಮಾಡಿದ್ದಾರೆ.

ಅವುಗಳ ಆಧಾರದ ಮೇಲೆ ಈ ನೆಲೆಯವರೆಗು ಪ್ರಾಗೈತಿಹಾಸಿಕ ಮಾನವನು ತನ್ನ ಚಟುವಟಿಕೆಗಳನ್ನು ವಿಸ್ತರಿಸಿರುವ ಸಾಧ್ಯತೆಇದೆ ಎಂದು ಹೇಳಬಹುದು. ಹಾಗಾಗಿಯೇ ರಿಂಗ್‌ಸ್ಟೋನ್ ಈ ನೆಲೆಯಲ್ಲಿ ದೊರೆತಿದೆ. ಪ್ರಾಗೈತಿಹಾಸಿಕ ಅವಶೇಷಗಳಲ್ಲದೆ ಈ ನೆಲೆಯಲ್ಲಿ 16ನೇ ಶತಮಾನಕ್ಕೆ ಸಂಬಂಧಿಸಿದ ನಾಯಕರ ಕಾಲಾವಧಿಯ ಕಬ್ಬಿಣದ ಪಿರಂಗಿಗುಂಡು, ಕಬ್ಬಿಣದ ಸಲಾಕೆ, ಗ್ರಾನೈಟ್ ಶಿಲೆಯಿಂದ ಮಾಡಿದ ಪಿರಂಗಿಗುಂಡುಗಳು ಹಾಗೂ ಔಷೋದೋಪಚಾರ ಹಾಗೂ ಇತರ ಕಾರ್ಯಗಳಿಗೆ ಬಳಸುತ್ತಿದ್ದ ಅರೆಯುವ ಕಲ್ಲುಗಳು, ರುಬ್ಬುವ ಕಲ್ಲುಗಳು ಹಾಗೂ 15-16ನೇ ಶತಮಾನದಲ್ಲಿ ಮನೆಗಳ ನಿರ್ಮಾಣದಲ್ಲಿ ಬಳಸುತ್ತಿದ್ದ ಕೀ ಸ್ಟೋನ್(ಚಿಲಕ)ಗಳು ಹಾಗೂ ಕೆಂಪುವರ್ಣದ ದಪ್ಪನಾದ ಮಡಿಕೆಚೂರು ಲಭ್ಯವಾಗಿದೆ. ಇದಲ್ಲದೆ ಗ್ರಾನೈಟ್ ಶಿಲೆಯಿಂದ ಮಾಡಿದ ಗಣೇಶನ ಭಗ್ನಗೊಂಡ ಶಿಲ್ಪವನ್ನು ಈ ನೆಲೆಯಲ್ಲಿ ಕಾಣಬಹುದು. ಇವುಗಳ ಆಧಾರದ ಮೇಲೆ ಗಂಗನಕೊಪ್ಪ ನೆಲೆಯಲ್ಲಿ ಪ್ರಾಗೈತಿಹಾಸ ಕಾಲದಿಂದ ಐತಿಹಾಸಿಕ ಕಾಲದವರೆಗೆ ಮಾನವನು ನೆಲೆನಿಂತಿದ್ದರ ಕುರಿತು ದೃಢಿಕರಿಸಬಹುದು.

ಕ್ರಿ.ಶ. 1499- ಕ್ರಿ.ಶ. 1763 ರ ವರೆಗೆ ಕೆಳದಿ ನಾಯಕರು ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಆಳಿದ ರಾಜವಂಶ ಶಿವಮೊಗ್ಗ ಜಿಲ್ಲೆಯ ಕೆಳದಿ, ಬಿದನೂರು, ಇಕ್ಕೇರಿ, ರಾಜಧಾನಿಯನ್ನಾಗಿ ಮಾಡಿಕೊಂಡು ಚೌಡಪ್ಪನಾಯಕರಿಂದ ಹಿಡಿದು ರಾಣಿ ವೀರಮ್ಮಾಜಿ ವರೆಗೆ ಈ ರಾಜವಂಶ ಆಳಲ್ಪಟ್ಟಿದೆ. ಇವರು ಆರಂಭದಲ್ಲಿ ವಿಜಯನಗರ ಸಾಮಂತರಾಗಿ ಆಳಿದರು. 1565 ವಿಜಯನಗರ ಪತನ ನಂತರ ಸ್ವತಂತ್ರರಾದರು ನಂತರ ಶಿವಮೊಗ್ಗ, ಕರಾವಳಿ ಜಿಲ್ಲೆ, ಮಧ್ಯಭಾಗದ ಜಿಲ್ಲೆಗಳ ಮಲೆನಾಡು ಭಾಗಗಳಲ್ಲಿ ಆಳ್ವಿಕೆಯನ್ನು ನಡೆಸಿದರು. ಹೀಗೆ ಗಂಗನಕೊಪ್ಪ ಗ್ರಾಮದಲ್ಲಿ ಇವರ ಕಾಲಕ್ಕೆ ಸೇರಿದ ನೆಲೆ ದೊರೆತಿದ್ದು, ಅಲ್ಲಿ ದೊರೆತಿರುವಂತಹ ಅವಶೇಷಗಳು ಸಾಕ್ಷಿಯಾಗಿದೆ ಎಂದು ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರವೀಣ್ ದೊಡ್ಡಗೌಡ್ರು ತಿಳಿಸಿರುತ್ತಾರೆ.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ👇👇👇*





ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಡವೆ ಬೇಟೆ ಮಾಡಿ ಮಾಂಸ ಕತ್ತರಿಸುತ್ತಿದ್ದಾಗಲೇ ದಾಳಿ! ಮೂವರ ಬಂಧನ | 70 ಕೆ.ಜಿ. ಮಾಂಸ , ಬಂದೂಕು ಜಪ್ತಿ

ಕಡವೆ ಬೇಟೆ ಮಾಡಿ ಮಾಂಸ ಕತ್ತರಿಸುತ್ತಿದ್ದಾಗಲೇ ದಾಳಿ! ಮೂವರ ಬಂಧನ | 70 ಕೆ.ಜಿ. ಮಾಂಸ , ಬಂದೂಕು ಜಪ್ತಿ…

5 hours ago

ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…

22 hours ago

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ

ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್‌ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ Thirthahalli police…

24 hours ago

ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ

ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ House fire reported at Keelambi…

1 day ago

ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ

ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ Two traffic police personnel in Shivamogga…

1 day ago

ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು

ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು Retired Vice Chancellor Prof. M.K. Naik, 63,…

1 day ago