ಬೆಳಕಿನ ಹಬ್ಬ ದೀಪಾವಳಿ ಎಂದರೆ ಅದೇನೋ ಸಡಗರ ಅದೆಷ್ಟೋ ಸಂಭ್ರಮ ಮಲೆನಾಡಿನಲ್ಲಂತೂ ಹಬ್ಬದ ಸಡಗರ ಸಂಭ್ರಮ ಹೇಳತೀರದು.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಐಗಿನಬೈಲು ಗ್ರಾಮದಲ್ಲಿ ಗಾಮೇಶ್ವರ ದೈವವು ವಿಶಿಷ್ಟವಾದಂತಹ ಶಕ್ತಿಯನ್ನು ಹೊಂದಿದ್ದು ಪ್ರತಿ ವರ್ಷವೂ ನೋನಿ ಹಬ್ಬದಂದು ಈ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ನೂರಾರು ವರ್ಷಗಳ ಇತಿಹಾಸವಿರುವ ಈ ಗಾಮೇಶ್ವರ ದೈವ ವೃಕ್ಷಕ್ಕೆ ಗ್ರಾಮದ ಪ್ರತಿ ಕುಟುಂಬದ ಪುರುಷರು ಉಪವಾಸ ವ್ರತದೊಂದಿಗೆ ಆಗಮಿಸಿ ದೈವಕ್ಕೆ ನಮಿಸಿ ಸಾವಿರಾರು ಹಣ್ಣುಕಾಯಿ ಸಮಪಿ೯ಸುವಂತಹ ಪ್ರತೀತಿಯಿದೆ.
ಐಗಿನಬೈಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಣಸಿಗುವ ಈ ದೈವ ವೃಕ್ಷಕ್ಕೆ ನೂರಾರು ಭಕ್ತಾದಿಗಳು ಆಗಮಿಸಿ ಬಲಿಪಾಡ್ಯಮಿಯ ದಿನ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.ನಂತರ ಪ್ರಸಾದವನ್ನು ಪಡೆದು ತಮ್ಮ ಮನೆಗಳಿಗೆ ತೆರಳಿ ಪೂಜೆಯ ಉಳಿದ ಕಾರ್ಯದಲ್ಲಿ ಈ ಗ್ರಾಮದ ಜನರು ತೊಡಗುತ್ತಾರೆ.
ವರದಿ:ಪವನ್ ಕುಮಾರ್ ಕಠಾರೆ