Breaking
12 Jan 2026, Mon

11 ಕೆವಿ ಲೈನ್‌ನ ನಿಯಮಾವಳಿ ಮರೆತು ಖಾಸಗಿ ವ್ಯಕ್ತಿಗಳ ಏಜೆಂಟನಾಗಿರುವ ಮೆಸ್ಕಾಂ ವಿದ್ಯುತ್ ಗುತ್ತಿಗೆದಾರ..!!! | ಇದು ರಿಪ್ಪನ್‌ಪೇಟೆ ರಸ್ತೆ ಅಗಲೀಕರಣ ಪುರಾಣ

11 ಕೆವಿ ಲೈನ್‌ನ ನಿಯಮಾವಳಿ ಮರೆತು ಖಾಸಗಿ ವ್ಯಕ್ತಿಗಳ ಏಜೆಂಟನಾಗಿರುವ ಮೆಸ್ಕಾಂ ವಿದ್ಯುತ್ ಗುತ್ತಿಗೆದಾರ..!!! | ಇದು ರಿಪ್ಪನ್‌ಪೇಟೆ ರಸ್ತೆ ಅಗಲೀಕರಣ ಪುರಾಣ 


ರಿಪ್ಪನ್‌ಪೇಟೆ;-11 ಕೆವಿ.ಹೆವಿಲೈನ್‌ನ ಮಾನದಂಡದ ಅರಿವಿಲ್ಲದ ಬೇಜವಬ್ದಾರಿ ಮೆಸ್ಕಾಂ ವಿದ್ಯುತ್ ಗುತ್ತಿಗೆದಾರ ತಮ್ಮ ಕೆಲಸವಾದರೇ ಸಾಕು ಯಾರು ಏನಾದರೂ ಆಗಲಿ ನಮಗೆ ಬರಬೇಕಾದ ಗುತ್ತಿಗೆ ಬಾಬ್ತು ಕೈಗೆ ಸಿಕ್ಕರೇ ಸಾಕು ಎನ್ನುವ ನಿಲುವಿನಲ್ಲಿ ಮೆಸ್ಕಾಂ ನಿಯಮವನ್ನು ಗಾಳಿಗೆ ತೂರಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ಲೈನ್ ಎಳೆದು ಪಟ್ಟಣದ ಜನರ ಜೀವಕ್ಕೆ ಕುತ್ತು ತಂದಿದ್ದಾರೆ.

ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಎರಡು ಸಂಪರ್ಕ ರಸ್ತೆಯ  ಒಂದು ಕಿ.ಮೀ. ರಸ್ತೆ ಆಗಲೀಕರಣಕ್ಕಾಗಿ ಜನಪ್ರತಿನಿಧಿಗಳ ವಿಶೇಷ ಆಸಕ್ತಿಯಿಂದ ಕಾಮಗಾರಿಗೆ ಶಂಕುಸ್ಥಾಪನೆ ನೀಡಲಾಗಿ ವರ್ಷ ಕಳೆದರೂ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ.


ರಸ್ತೆ ಅಗಲೀಕರಣದೊಂದಿಗೆ ಡಿವೈಡರ್ ಮತ್ತು ಒಳಚರಂಡಿ ಕಾಮಗಾರಿ ಸಹ ಮಾಡುವ ಮೂಲಕ ವಿದ್ಯುತ್ ಕಂಬಗಳನ್ನು ಸಹ ಸ್ಥಳಾಂತರ ಮಾಡುತಿದ್ದು , ವಿದ್ಯುತ್ ನಿಗಮ ಪ್ರಾಧಿಕಾರದ ನಿಯಾಮಳಿಗಳ ಪ್ರಕಾರ 11 ಕೆ.ವಿ. ವಿದ್ಯುತ್ ಲೈನ್ ವಾಸದ ಮನೆ ,ತಗಡು ಶೀಟ್ ಕಟ್ಟಗಳ ಮೇಲೆ ಹಾಗೂ ಕಟ್ಟಡಗಳ ಸಮೀಪ ಕೈಗೆಟುಕುವಂತೆ ಇರಬಾರದು ಆ ಲೈನ್‌ಗೂ ಮನೆಗೂ ಇಷ್ಟು ಆಂತರವಿರಬೇಕು ಎಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಗುತ್ತಿಗೆದಾರರಿಗೆ ಮತ್ತು ಮೆಸ್ಕಾಂ ಇಲಾಖೆಯವರಿಗೆ ಮಾತ್ರ ಯಾವುದೇ ಮಾನದಂಡದ ನಿಯಮ ಗೊತ್ತಿಲ್ಲದವರಂತೆ ಜಾಣ ಕುರುಡರಂತಾಗಿ ವರ್ತಿಸುತ್ತಾ ಯಾರು ಏನಾದರೂ ಅಗಲಿ ನಮ್ಮ ಕೆಲಸ ಅದರೆ ಸಾಕು ಎಂಬಂತೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತಿದ್ದಾರೆ. ಇಂದಲ್ಲಾ ನಾಳೆ ಈ ರೀತಿಯಲ್ಲಿ ಆಳವಡಿಸಲಾದ ಲೈನ್ ಅಕಸ್ಮಿಕವಾಗಿ ತುಂಡಾಗಿ ಮನೆಯ ಮೇಲೆ,ತಗಡು ಶೀಟ್ ಗಳ ಕಟ್ಟಡಗಳ ಮೇಲೆ ಬಿದ್ದು ಏನಾದರೂ ಅನಾಹುತ ಸಮಭವಿಸಿದರೆ  ಅದಕ್ಕೆ ಹೊಣೆಗಾರರು ಯಾರು ಎಂಬ ಜಿಜ್ಞಾಸೆ ಸಾರ್ವಜನಿಕರಲ್ಲಿ ಸುದ್ದಿಗೆ ಗ್ರಾಸವಾಗಿದೆ.

ಖಾಸಗಿ ಪ್ರಭಾವಿ ವ್ಯಕ್ತಿಗಳ ಏಜೆಂಟರಾಗಿರುವ ವಿದ್ಯುತ್ ಗುತ್ತಿಗೆದಾರ..!! :

ಈ ಹಿಂದೆ ಸಾಗರ ರಸ್ತೆಯ ಖಾಸಗಿ ವ್ಯಕ್ತಿ ಕಟ್ಟಡವನ್ನು ಕೆಡವದೇ ವಿದ್ಯುತ್ ಗುತ್ತಿಗೆದಾರನೊಂದಿಗೆ ಆಂತರಿಕ ಒಪ್ಪಂದ ಮಾಡಿಕೊಂಡು ಹೆವಿ (ಬೃಹತ್) ಗಾತ್ರದ ಎತ್ತರದ ನಾಲ್ಕು ವಿದ್ಯುತ್ ಕಂಬಗಳನ್ನು ತಂದು ರಸ್ತೆಯಂಚಿನಲ್ಲಿ ತಂದಿಟ್ಟು ಸಾಗರ ರಸ್ತೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗುವ ಮೂಲಕ ವಾಹನ ಸಂಚಾರಕ್ಕೂ ಕಂಟಕವಾಗಿತ್ತು ನಂತರ ಸಾರ್ವಜನಿಕರ ತೀವ್ರ ಆಕ್ರೋಶದಿಂದಾಗಿ ತಕ್ಷಣ ಆ ಬೃಹತ್ ಕಂಬಗಳನ್ನು ಆ ಸ್ಥಳದಿಂದ ಸ್ಥಳಾಂತರ ಮಾಡಿದ್ದರೆನ್ನಲಾಗುತ್ತಿದೆ.


ಇನ್ನೂ ಮುಂದುವರೆದು ತೀರ್ಥಹಳ್ಳಿ ರಸ್ತೆಯಲ್ಲಿರುವ ಚಾಣಾಕ್ಯ ಬಾರ್ ಕಟ್ಟಡವನ್ನು ಮಾಲೀಕರು ಈಗಾಗಲೇ ತೆರವುಗೊಳಿಸಿದ್ದಾರೆ ಆದರೆ ವಿದ್ಯುತ್ ಕಂಬ ಅಳವಡಿಸಲು ಇನ್ನೂ ಹೆಚ್ಚುವರಿಯಾಗಿ 5 ಅಡಿ ತೆರವುಗೊಳಿಸಬೇಕಾಗಿದೆ ಈ ಹಿನ್ನಲೆಯಲ್ಲಿ ಗ್ರಾಪಂ ಪಿಡಿಓ ಮಧುಸೂಧನ್ ಬಾರ್ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಆದರೆ ಇಲ್ಲಿಯೂ ಏಜೆಂಟನಾಗಿರುವ ವಿದ್ಯುತ್ ಗುತ್ತಿಗೆದಾರ ಬಾರ್ ಮಾಲೀಕರ ಬಳಿ ಆಂತರಿಕ ಒಪ್ಪಂದ ಮಾಡಿಕೊಂಡು ಕಟ್ಟಡಕ್ಕೆ L ಕ್ಯಾಪ್ ಹಾಕಿ ಲೈನ್ ಹಾಕುತ್ತೇನೆ ಎಂದು ಮಾತಾಡಿಕೊಂಡಿದ್ದಾರೆ ಎನ್ನಲಾಗುತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಬಾರ್ ಎಂಬ ಸ್ವರ್ಗದಲ್ಲಿ ಮೈಮರೆತ ಮದ್ಯಪ್ರಿಯರು ಲೈನ್ ಗೆ ಅಪ್ಪಿ ಮುದ್ದಾಡಿದರೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆಗಳ ಮಧ್ಯ ಮನೆ ಸಂಪರ್ಕದ ಲೈನ್ ಗಳನ್ನು ಬೇಕಾಬಿಟ್ಟಿಯಾಗಿ ಎಳೆದಿದ್ದು ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುತ್ತೇವೆ ಎನ್ನುವ ಜನಪ್ರತಿನಿಧಿಗಳ ಆಶೋತ್ತರಕ್ಕೆ ಕೊಡಲಿ ಪೆಟ್ಟು ಇಟ್ಟಂತಾಗಿದೆ. 

ಒಟ್ಟಾರೆಯಾಗಿ ಪ್ರಭಾವಿಗಳ ವ್ಯಾಪಾರ ವಹಿವಾಟಿಗಾಗಿ ಇಡೀ ಊರಿನ ಜನರನ್ನು ಧಿಕ್ಕರಿಸಿ ವಿದ್ಯುತ್ 11 ಕೆ.ವಿ.ಲೈನ್ ಸಂಪರ್ಕದ ಕಂಬವನ್ನು ಸ್ಥಳಾಂತರ ಮಾಡಲು  ಹೊರಟಿರುವ ಮೆಸ್ಕಾಂ ಇಲಾಖೆಯ ಅಧಿಕಾರಿಗಳ ಮುಂದೆ ಏನು ಮಾಡುತ್ತಾರೆಂಬ ಬಗ್ಗೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. 

ಇನ್ನಾದರೂ ಮೆಸ್ಕಾಂ ಇಲಾಖೆ ಜಾಗೃತಗೊಂಡು ಇಲಾಖೆಯ ನಿಯಮಾನುಸಾರ 11 ಕೆ.ವಿ.ಲೈನ್ ಸ್ಥಳಾಂತರ ಮಾಡುವ ಮುನ್ನ ಯೋಚಿಸಿ ಮುಂಜಾಗ್ರಾತ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಾಗಿದೆ.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *