Headlines

ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಬೇಟಿ ರದ್ದು : ಅದೇ ದಿನ ಮುಖ್ಯಮಂತ್ರಿ ಬೊಮ್ಮಾಯಿ ಆಗಮನ

ಜಿಲ್ಲೆಯ ಜನತೆ ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ರದ್ದಾಗಿದೆ. ಶಿವಮೊಗ್ಗ ಸಮೀಪದ ಹೊಳಲೂರು ಗ್ರಾಪಂನಲ್ಲಿ ಪಂಚಾಯತ್‌ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 24 ರಂದು ಆಗಮಿಸಬೇಕಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಕೂಡ ಸಿದ್ಧತೆ ಪರಿಶೀಲನೆ ನಡೆಸಿದ್ದರು. ಆದರೆ ಪ್ರಧಾನಿ ಅವರು ಅಂದು ಭೇಟಿ ಕೊಡುವ ಕಾರ್ಯಕ್ರಮ ರದ್ದಾಗಿದೆ. ಪಂಚಾಯತ್‌ ರಾಜ್‌ ದಿನವಾದ ಹಿನ್ನೆಲೆಯಲ್ಲಿ ಆ ದಿನ ಪ್ರಧಾನಿಯವರು ಪಂಚಾಯತ್‌ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲು…

Read More

ಪ್ರವೇಶ ಪತ್ರ ಹರಿದು ಹಾಕಿ ಪರೀಕ್ಷೆ ಬಹಿಷ್ಕರಿಸಿದ ಕಾನೂನು ವಿದ್ಯಾರ್ಥಿಗಳು :

ಶಿವಮೊಗ್ಗ : ಕಾನೂನು ವಿದ್ಯಾರ್ಥಿಗಳು ಇಂದು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕಾನೂನು ವಿದ್ಯಾರ್ಥಿಗಳ ಪರೀಕ್ಷೆ ನಡೆಸುವುದರ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇಂದು 20 ವಿದ್ಯಾರ್ಥಿಗಳು ಪರೀಕ್ಷೆ ವಿರೋಧಿಸಿ ಪ್ರತಿಭಟಿಸಿದರು. ಎಟಿಎನ್ ಸಿಸಿ ಕಾಲೇಜಿನ ಕಾನೂನು ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಪರೀಕ್ಷೆಗೆ ಅವಕಾಶವಿದೆ. ಆದರೆ ಈ ಆನ್ ಲೈನ್ ನ್ನ ವಿಶ್ವವಿದ್ಯಾಲಯ ರದ್ದುಪಡಿಸಿ ಆಫ್ ಲೈನ್ ನಲ್ಲಿ ಮಾತ್ರ 5 ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ. ಪಿಯುಸಿ ನಂತರದ ಕಾನೂನು…

Read More

ಶಿಕಾರಿಪುರದಲ್ಲಿ ವಿಶ್ವಕರ್ಮ ಸಮುದಾಯ ಭವನ ಉಧ್ಘಾಟಿಸಿದ ಬಿ ಎಸ್ ಯಡಿಯೂರಪ್ಪ

ಶಿಕಾರಿಪುರದ : ನಗರದ ವಿನಾಯಕ ನಗರದಲ್ಲಿ ವಿಶ್ವಕರ್ಮ ಸಮುದಾಯ ಭವನವನ್ನು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ. ವೈ ರಾಘವೇಂದ್ರ ಅವರು ಲೋಕಾರ್ಪಣೆಗೊಳಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ 50 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗಿರುವ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಗಿದೆ. ಈ ಪುಣ್ಯ ಸಮಯ ನವರಾತ್ರಿ ಸಮಯದಲ್ಲಿ ನಮ್ಮ ಕೆಟ್ಟ ಗುಣವನ್ನು ದೂರಮಾಡಿ ಸಮಾಜಕ್ಕೆ ಪೂರಕವಾದ ಕೆಲಸವನ್ನು ಮಾಡೋಣ. ಹಿಂದು ಧರ್ಮಕ್ಕೆ ಅಪಾರ ಕೊಡುಗೆಯನ್ನು ವಿಶ್ವಕರ್ಮ…

Read More

Accident | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ  ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿರುವ ಘಟನೆ ಕೋಣಂದೂರು ಸಮೀಪದ ಹುಂಚದ ಕಟ್ಟೆ ಗ್ರಾಮದ ತಿರುವಿನಲ್ಲಿ ನಡೆದಿದೆ. ಮಾರುತಿ ಬ್ರೀಜಾ ಕಾರಿನಲ್ಲಿ ಮೂವರು ಪ್ರಯಾಣಿಸುತಿದ್ದರನ್ನು ಎನ್ನಲಾಗುತಿದೆ, ಹುಂಚದಕಟ್ಟೆ -ಕೋಣಂದೂರು ಮಾರ್ಗ ಮಧ್ಯದ ತಿರುವಿನಲ್ಲಿ ಶನಿವಾರ ರಾತ್ರಿ 12.30 ಸುಮಾರಿಗೆ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ ಎಂದು ತಿಳಿದುಬಂದಿದೆ. ತುಂಬಾ ಅಪಾಯಕಾರಿಯಾದ ಈ ತಿರುವಿನಲ್ಲಿ ಕಾರು ಚಾಲಕ ನಿಯಂತ್ರಣ ಕಳೆದುಕೊಂಡ ಹಿನ್ನಲೆಯಲ್ಲಿ ಕಾರು ಮೂರು…

Read More

ಪಕ್ಷ ಅವಕಾಶ ನೀಡಿದರೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವೆ : ಶಾಸಕ ಹರತಾಳು ಹಾಲಪ್ಪ

 ನಾನು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇರಿಸಿಲ್ಲ. ಆದರೆ ಸಚಿವ ಸ್ಥಾನವನ್ನು ಪಕ್ಷ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು. ಇಲ್ಲಿನ ತಹಶೀಲ್ದಾರ್ ಕಚೇರಿ ಸಮುಚ್ಛಯವನ್ನು ಮಂಗಳವಾರ ಪರಿಶೀಲನೆ ನಡೆಸಿ ಪತ್ರಕರ್ತರ ಜೊತೆ ನಡೆಸಿ ಮಾತನಾಡಿದ ಅವರು, ಅಂತಿಮವಾಗಿ ನಾನು ಪಕ್ಷದ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದರು. ಜಿಲ್ಲೆಯಲ್ಲಿ ಆರಗ ಜ್ಞಾನೇಂದ್ರ ಮತ್ತು ಕೆ.ಎಸ್.ಈಶ್ವರಪ್ಪರಂತಹ ಇಬ್ಬರು ದಕ್ಷ ಸಚಿವರು ಇದ್ದರು. ಆದರೆ ರಾಜಕೀಯ ಮೇಲಾಟ ಮತ್ತು ವಿರೋಧಿಗಳ ಷಡ್ಯಂತ್ರದಿಂದ ಈಶ್ವರಪ್ಪ ಅವರು…

Read More

ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 500 ಕ್ಕೂ ಅಧಿಕ ಕೆಪಿಎಸ್ ಶಾಲೆ ತೆರೆಯಲು ಚಿಂತನೆ – ಮಧು ಬಂಗಾರಪ್ಪ

ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 500 ಕ್ಕೂ ಅಧಿಕ ಕೆಪಿಎಸ್ ಶಾಲೆ ತೆರೆಯಲು ಚಿಂತನೆ – ಮಧು ಬಂಗಾರಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ನಡ ಪಠ್ಯದೊಂದಿಗೆ ಇಂಗ್ಲಿಷ್ ಬೋಧನೆಯನ್ನು ಮಾಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಗೆ ಪ್ರಗತಿಗೆ ಕಾರಣವಾಗುವುದೆಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.     ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ “ಕರ್ನಾಟಕ ಪಬ್ಲಿಕ್ ಸ್ಕೂಲ್’’ನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಎಲ್.ಕೆ.ಜಿ. ಯು.ಕೆ.ಜಿ.ಯಿಂದ…

Read More

ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ – ಓರ್ವ ಆಸ್ಪತ್ರೆಗೆ ದಾಖಲು|Accident

ಕುಂಸಿ ಸಮೀಪದ ತುಪ್ಪೂರು ಬಳಿ ಬಸ್ಸು ಹಾಗೂ ಕಾರಿನ ನಡುವೆ ಭೀಕರ ಅಪಘಾತ ನಡೆದಿದ್ದು ಅಪಘಾತದಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕುಂಸಿ ಸಮೀಪದ ತುಪ್ಪೂರು ತಿರುವಿನಲ್ಲಿ ಶಿವಮೊಗ್ಗದಿಂದ ಸಾಗರದ ಕಡೆಗೆ ಬರುತಿದ್ದ ಪ್ರಕಾಶ್ ಟ್ರಾವೆಲ್ಸ್ (KA 51 AB 0913) ಹಾಗೂ ಸಾಗರದಿಂದ ಶಿವಮೊಗ್ಗದ ಕಡೆಗೆ ತೆರಳುತಿದ್ದ ಮಾರುತಿ ಸ್ವಿಫ್ಟ್ (KA 18 Z 0329) ಕಾರಿನ ನಡುವೆ ಅಪಘಾತ ನಡೆದಿದ್ದು ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ವ್ಯಕ್ತಿಗೆ ತಲೆಗೆ ತೀವ್ರತರವಾದ ಪೆಟ್ಟಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ…

Read More

ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ |Muthalik

ರಿಪ್ಪನ್‌ಪೇಟೆಗೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ  ರಿಪ್ಪನ್‌ಪೇಟೆ : ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಪಟ್ಟಣಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.  ಖಾಸಗಿ ಕಾರ್ಯಕ್ರಮ ನಿಮಿತ್ತ ಕೊಪ್ಪಕ್ಕೆ ತೆರಳುತಿದ್ದ ಪ್ರಮೋದ್ ಮುತಾಲಿಕ್ ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಮನೆಗೆ ಭೇಟಿ ನೀಡಿ ನೆರೆದಿದ್ದ ಹಿಂದೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಪ್ರಮೋದ್ ಮುತಾಲಿಕ್ ವಾಹನ ಚಾಲಕ ಹಾಗೂ ಅಪ್ತನಾಗಿರುವ ಶಬರೀಶ್ ರವರು ಪಟ್ಟಣದ ಅಶೋಕ್ ಗೌಡ ಹಾಲುಗುಡ್ದೇ ರವರ ಪುತ್ರನಾಗಿದ್ದು ಈ…

Read More

ಕಾರು ಅಪಘಾತ – ಚಾಲಕ ಸ್ಥಳದಲ್ಲಿಯೇ ಸಾವು

ಕಾರು ಅಪಘಾತ – ಚಾಲಕ ಸ್ಥಳದಲ್ಲಿಯೇ ಸಾವು ಶಿವಮೊಗ್ಗ : ಕುಂಸಿ ಗ್ರಾಮದ ಕೆರೆ ಕೋಡಿ ಬಳಿ ಕಾರು ಪಲ್ಟಿಯಾಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ನಿವಾಸಿ ಚಂದನ್ ಮೃತ ದುರ್ದೈವಿ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಕುಂಸಿ ಕೆರೆ ಕೋಡಿ ಬಳಿ ಕಾರು ಪಲ್ಟಿಯಾಗಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಮಡಿಕೇರಿ ಮೂಲದ ನಂದನ್(22), ಕೋಲಾರ ಮೂಲದ ಕೋದಂಡ(18), ಮಂಡ್ಯ ಮೂಲದ ಯೋಗೇಶ್ (24) ಹಾಗೂ…

Read More

ಸಚಿವ ಈಶ್ವರಪ್ಪ ರಾಜೀನಾಮೆ ನೀಡುವಂತೆ ಒತ್ತಾಯಿಸಿ ರಿಪ್ಪನ್ ಪೇಟೆ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ :

ರಿಪ್ಪನ್ ಪೇಟೆ : ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಸಚಿವರಾದ ಕೆ.ಎಸ್. ಈಶ್ವರಪ್ಪನವರ ಹೆಸರು ಲಂಚಾರೋಪದಲ್ಲಿ ಪ್ರಸ್ತಾಪವಾಗಿದ್ದು, ಉಲ್ಲೇಖಿಸಿದ ವ್ಯಕ್ತಿಯು ಉಡುಪಿಯ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಘಟನೆಗೆ ಸಚಿವರು ಕಾರಣವೆಂದು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಸಚಿವರು ನೈತಿಕ ಹೊಣೆಹೊತ್ತು ಕೂಡಲೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ರಿಪ್ಪನ್ ಪೇಟೆ ಆಮ್ ಆದ್ಮಿ ಪಕ್ಷದ ವತಿಯಿಂದ ನಾಡ ಕಛೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಆಮ್ ಅದ್ಮಿ ಪಕ್ಷದ ತಾಲೂಕ್ ಉಪಾಧ್ಯಕ್ಷರಾದ ಹಸನಬ್ಬ…

Read More
Exit mobile version