ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಯಲದಲ್ಲಿ ಮೂಲಭೂತ ಸೌಕರ್ಯದ ಕೊರತೆಯನ್ನ ವಿರೋಧಿಸಿ ಹಾಗೂ ಮೊನ್ನೆ ವಿದ್ಯಾರ್ಥಿನಿಯರಿಗೆ ಫುಡ್ ಪಾಯಸನ್ ಆಗಿರುವುದಕ್ಕೆ ಇಲ್ಲಿನ ಅವ್ಯವಸ್ಥೆಯೇ ಕಾರಣವೆಂದು ಆಗ್ರಹಿಸಿ ನೂರಾರು ವಿದ್ಯಾರ್ಥಿನಿಯರು ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಪ್ರತಿಭಟಜನೆ ನಡೆಸಿದರು.
ಶೌಚಾಲಯ ಸ್ವಚ್ಚವಿಲ್ಲದೇ ಇರುವುದು, ಒಂದು ಕೊಠಡಿಯಲ್ಲಿ 11 ಜನ ವಿದ್ಯಾರ್ಥಿನಿಯರಿಗೆ ಉಳಿದುಕೊಳ್ಳಲು ಅವಕಾಶ ನೀಡಿರುವುದು. ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲದಿರುವುದು ಈ ದಿಡೀರ್‌ಪ್ರತಿಭಟನೆಗೆ ಕಾರಣವೆಂದು ಹೇಳಲಾಗುತ್ತಿದೆ.
ಪ್ರತಿಭಟನೆಯಲ್ಲಿ ಸಹ್ಯಾದ್ರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಅವ್ಯವಸ್ಥೆಯನ್ನ ಸರಿಪಡಿಸುವಂತೆ ಪ್ರಾಂಶುಪಾಲರಿಗೆ ಮನವಿ ನೀಡಲಾಗಿದೆ. ಅಲ್ಲದೆ ಅನಾವಶ್ಯಕ ಮೆಸ್ ಬಿಲ್ ಏರಿಸಲಾಗಿದೆ. 12 ಜನ ವಿದ್ಯಾರ್ಥಿನಿಯರು ಪುಡ್ ಪಾಯಿಸನ್ ನಿಂದಾಗಿ ಖಾಸಗಿ ಆಸ್ಪತ್ರೆಯ ಬಿಲ್ ಭರಿಸಲಾಗಿದ್ದು ಅವರ ಹಣವನ್ನ ಕಾಲೇಜು ಸಮಿತಿಯೇ ಭರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.