ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ನಗರದ ಮೀನಾಕ್ಷಿ ಭವನ್ ನಲ್ಲಿ ದೋಸೆ ಸವಿದ ಬಳಿಕ ಕರ್ನಾಟಕ ರತ್ನ ಡಾ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ನಗರದಲ್ಲಿರುವ ಶಿವಪ್ಪ ನಾಯಕ ಮಾಲ್‌ಗೆ ಭೇಟಿ ನೀಡಿದ ಅವರು ಚಿತ್ರವನ್ನು ವೀಕ್ಷಿಸಿದರು. ಅವರಿಗೆ ಪುತ್ರ, ಸಂಸದ ಬಿ.ವೈ. ರಾಘವೇಂದ್ರ, ಅವರ ಪತ್ನಿ ತೇಜಸ್ವಿನಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ, ಡಿಸಿಸಿ ಅಧ್ಯಕ್ಷ ಎಂ ಬಿ ಚನ್ನವೀರಪ್ಪ ಮತ್ತಿತರರು ಸಾಥ್ ನೀಡಿದರು.
ಸೆಲ್ಫಿಗೆ ಮುಗಿಬಿದ್ದ ಯುವಕರು -ಯುವತಿಯರು
ಯಡಿಯೂರಪ್ಪ ಅವರು ಮಾಲ್ ನಲ್ಲಿ ಸಿಕ್ಕ ಪುಟ್ಟ ಮಗುವಿನ ಕೈ ಹಿಡಿದು ಶೇಕ್ ಹ್ಯಾಂಡ್ ಮಾಡಿ ಖುಷಿಪಟ್ಟರು. ಹಲವಾರು ಮಂದಿ ಬಿಎಸ್‌ವೈ ಅವರ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಫೋಟೊ ತೆಗೆಸಿಕೊಳ್ಳಲು ಮುಂದಾದ ಪ್ರತಿಯೊಬ್ಬರಿಗೂ ಬಿಎಸ್‌ವೈ ಸ್ಪಂದಿಸಿದರು. ಭಾರತ್ ಮಲ್ಟಿಪ್ಲೆಕ್ಸ್‌ನಲ್ಲಿ ಅವರು ಚಿತ್ರ ವೀಕ್ಷಿಸಿದರು.