Thirthahalli | ಸಾಲ ಬಾಧೆ ತಾಳಲಾರದೆ ಹೊಟೇಲ್ ಮಾಲೀಕ ಆತ್ಮಹತ್ಯೆ

 ಹೋಟೆಲ್ ಮಾಲೀಕ ನೇಣಿಗೆ ಶರಣು ! ತೀರ್ಥಹಳ್ಳಿ: ಸಾಲದ ಸಂಕಷ್ಟಕ್ಕೆ ಒಳಗಾಗಿ ಹೋಟೆಲ್ ಮಾಲೀಕರೊಬ್ಬರು  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಜ್ಜವಳ್ಳಿಯಲ್ಲಿ ನೆಡೆದಿದೆ. ತಾಲೂಕಿನ ಬೆಜ್ಜವಳ್ಳಿಯ ಅನ್ನಪೂರ್ಣ ಹೋಟೆಲ್ ಮಾಲೀಕರಾದ ಉಮೇಶ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ಉಮೇಶ್ ಸಾಲದ ಸುಳಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.  ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಳೆಗಳು ಜೀವನದ ಸುರಕ್ಷಾ ಕಂಕಣ – ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ|hombuja

ಹೊಂಬುಜ ಜೈನ ಮಠದಲ್ಲಿ ನವರಾತ್ರಿಯ ವಿಶೇಷ ಅಲಂಕಾರ ಬಳೆಗಳು ಜೀವನದ ಸುರಕ್ಷಾ ಕಂಕಣ- ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ರಿಪ್ಪನ್ ಪೇಟೆ :ಸುರಕ್ಷಾ ಕವಚದಂತೆ ಧರಿಸುವ ಬಳೆಗಳು ಭಾರತೀಯ ಸಂಸ್ಕೃತಿಯಲ್ಲಿ ಸ್ತಿçÃಯರಿಗೆ ಕೇವಲ ಅಲಂಕಾರ ವಸ್ತುವಾಗಿರದೇ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುವಂತೆ ಮಾಡುತ್ತದೆ ಎಂದು ಹೊಂಬುಜದ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶುಭಾಶೀರ್ವಚನದಲ್ಲಿ ಹೇಳಿದರು. ನವರಾತ್ರಿಯ ಏಳನೇಯ ದಿನವಾದ ಶನಿವಾರದಂದು ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರಾಸ್ಥಳವಾದ  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ…

Read More

ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ :

ರಿಪ್ಪನ್‌ಪೇಟೆ: ಪಟ್ಟಣದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ದ 55ನೇ ವರ್ಷದ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾಗಿ ವೈ.ಜೆ.ಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪದಾದಿಕಾರಿಗಳ ವಿವರ : ನಾಗರಾಜ ಪವಾರ್, ರಾಜೇಶ್ ಎಲ್.ಕೆ, ಸಂದೀಪ್‌ಶೆಟ್ಟಿ, ರವಿಚಂದ್ರ, ಹೆಚ್.ಆರ್.ಆಶೋಕ್, (ಉಪಾಧ್ಯಕ್ಷ), ತೀರ್ಥಶ್ ಅಡಿಕಟ್ಟು (ಕಾರ್ಯಾಧ್ಯಕ್ಷರು), ಶ್ರೀಧರ್, ಲಕ್ಷ್ಮಣ ಬಳ್ಳಾರಿ (ಸಹ ಕಾರ್ಯದರ್ಶಿ), ಶ್ರೀನಿವಾಸ ಆಚಾರ್ ಗ್ಯಾರೇಜ್, ಮಂಜುನಾಥ ಅಚಾರ್, ರಾಘವೇಂದ್ರ…

Read More

ಲಂಚ ಪಡೆಯುತ್ತಿದ್ದ ವೇಳೆ ಗ್ರಾಪಂ ಅಧ್ಯಕ್ಷೆ ಮೇಲೆ ಎಸಿಬಿ ದಾಳಿ

ಶಿವಮೊಗ್ಗ : ಕಾಮಗಾರಿಯ ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯತ್‌ ಅಧ್ಯಕ್ಷೆಯೊಬ್ಬರ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಪಂ ಅಧ್ಯಕ್ಷೆ ವೇಣಿ ಕಣ್ಣನ್ (47) ಎಸಿಬಿ ಬಲೆಗೆ ಬಿದ್ದವರು. ಮುದ್ದಿನಕೊಪ್ಪ ಗ್ರಾಮದ ನಿವಾಸಿಯೊಬ್ಬರು ಗುತ್ತಿಗೆದಾರರೊಬ್ಬರ ಪರವಾಗಿ ಕಟ್ಟಡ ಕಾಮಗಾರಿಯೊಂದನ್ನು ಪೂರ್ಣಗೊಳಿಸಿದ್ದರು. 2020ರ ಜನವರಿಯಲ್ಲೇ ಕಾಮಗಾರಿ ಮುಕ್ತಾಯವಾಗಿತ್ತು. ಬಿಲ್ ಮೊತ್ತವನ್ನು ಮಂಜೂರು ಮಾಡಿಕೊಡಲು 50 ಸಾವಿರ ರೂ. ಕೊಡುವಂತೆ ಗ್ರಾಪಂ ಅಧ್ಯಕ್ಷೆ ವೇಣಿ ಕಣ್ಣನ್ ಬೇಡಿಕೆ…

Read More

ಲಯನ್ ಸಫಾರಿ ಬಳಿ ಭೀಕರ ಅಪಘಾತ – ಮೂವರು ಸಾವು..!! Accident

ಲಯನ್ ಸಫಾರಿ ಬಳಿ ಭೀಕರ ಅಪಘಾತ – ಮೂವರು ಸಾವು..!! ಶಿವಮೊಗ್ಗ : ಇಲ್ಲಿನ ಲಯನ್‌ ಸಫಾರಿ ಬಳಿ ಭೀಕರ ಅಪಘಾತವಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮುದ್ದಿನ ಕೊಪ್ಪದ ಬಳಿಯಲ್ಲಿ ಇನ್ನೋವಾ ಕಾರು ಹಾಗೂ ಸ್ವಿಫ್ಟ್‌ ಕಾರು ನಡುವೆ ಡಿಕ್ಕಿಯಾಗಿದೆ. ಶಿವಮೊಗ್ಗದಿಂದ ಸಾಗರ ಕಡೆಗೆ ಹೋಗುತ್ತಿದ್ದ ಇನ್ಹೋವಾ ಕಾರು ಹಾಗೂ ಆಯನೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್‌ ಕಾರಿನ ನಡುವೆ ಡಿಕ್ಕಿಯಾಗಿದೆ.  ಘಟನೆಯಲ್ಲಿ ಚಿತ್ರದುರ್ಗ ಮೂಲದ ಮೂವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದ್ದು, ಪೊಲೀಸರು…

Read More

ಶಿಮೂಲ್ ಚುನಾವಣೆ ಫಲಿತಾಂಶ ಪ್ರಕಟ

ಶಿಮೂಲ್ ಚುನಾವಣೆ ಫಲಿತಾಂಶ ಪ್ರಕಟ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.ಇಂದು ಬೆಳಗ್ಗೆ ಮತದಾನ ನಡೆದಿತ್ತು. ಸಂಜೆ ವೇಳೆಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಶಿವಮೊಗ್ಗ ತಹಶೀಲ್ದಾರ್‌ ಬಿ.ಎನ್.ಗಿರೀಶ್‌ ಅವರು ರಿಟರ್ನಿಂಗ್‌ ಆಫೀಸರ್‌ ಆಗಿದ್ದರು.12 ಸ್ಥಾನಕ್ಕೆ ಪೈಕಿ 31 ಜನ ಸ್ಪರ್ಧಿಸಿದ್ದರು. ಇದರಲ್ಲಿ ಇಬ್ಬರ ಅವಿರೋಧ ಆಯ್ಕೆಯಾಗಿತ್ತು. ಶಿವಮೊಗ್ಗ ವಿಭಾಗ : ಶಿವಮೊಗ್ಗ ವಿಭಾಗದಿಂದ ಆರ್.ಎಂ.ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿಯಿಂದ ಸ್ಪರ್ಧಿಸಿದ್ದ ಶಿಮುಲ್ ಮಾಜಿ ಅಧ್ಯಕ್ಷ ಡಿ.ಆನಂದ್…

Read More

ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ₹5.41 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಶ

ಮನೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ₹5.41 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ವಶ Shikaripura Police crack a house burglary case and arrest an accused. Gold ornaments, silver articles and cash worth ₹5.41 lakh recovered during the operation. ಶಿಕಾರಿಪುರ, ಜೂನ್ 11: ಶಿಕಾರಿಪುರ ಪಟ್ಟಣದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮನೆಯೊಂದರ ಬೀರುವಿನ ಬೀಗ ಮುರಿದು…

Read More

ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಡೀರ್ ರಾಜೀನಾಮೆ|Resign

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ಅಧ್ಯಕ್ಷೆ ಸ್ಥಾನಕ್ಕೆ ದಿಡೀರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯರಿಂದ ಅಧ್ಯಕ್ಷರಾಗಿ ಆಯ್ಕೆಯಾದ ಲೀಲಾವತಿ ದೊಡ್ಡಯ್ಯ ಕಳೆದ 20 ತಿಂಗಳ ಕಾಲ ಬಾಳೂರು ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಗೆ ಬಂದ ಮಾಹಿತಿ ಪ್ರಕಾರ ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ತಮ್ಮ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಸ್ವ ಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಲೀಲಾವತಿ ದೊಡ್ಡಯ್ಯ ಸಾಗರದ…

Read More

ಗಾಂಜಾ ಮಾರಾಟಕ್ಕೆ ಯತ್ನ – ಬೈಕ್ ಸಹಿತ ಮೂವರು ಯುವಕರ ಬಂಧನ|Arrested

ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.   ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿ ನಿಸರ್ಗ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಅಡಿ ಮೂವರು ಆರೋಪಿಗಳನ್ನ ಪೊಲೀಸರು ಬಂದಿಸಿದ್ದು 615 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಮಂಗಳವಾರ ಶಿವಮೊಗ್ಗ ಡಿವೈಎಸ್.ಪಿ ನೇತೃತ್ವದಲ್ಲಿ, ತುಂಗಾನಗರದ ಪಿಎಸ್ ಐ ಮತ್ತು ಸಿಬ್ಬಂಧಿಗಳ ತಂಡವು ನಿಸರ್ಗ ಲೇ ಔಟ್ ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತರಾದ 1) ಮದಾರಿ ಪಾಳ್ಯದ…

Read More

Election | ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಭಾರಿ ಮುನ್ನಡೆ

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಭಾರಿ ಮುನ್ನಡೆಯನ್ನು ಸಾಧಿಸಿದ್ದಾರೆ. 11.10 ನಿಮಿಷದ ಫಲಿತಾಂಶದ ಪ್ರಕಾರ 35001 ಮತ ಗಳಿಸಿದ್ದಾರೆ . ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ 25994 ಮತ ಗಳಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ 9007 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಆಮ್ ಆದ್ಮಿಯ ದಿವಾಕರ್ 412 ಮತ ಗಳಿಸಿದ್ದಾರೆ.

Read More
Exit mobile version