ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡುವ ದಂಧೆ – ವಸಂತ್ ಗಿಳಿಯಾರ್.
ಧರ್ಮಸ್ಥಳದ ಮೇಲೆ ವ್ಯವಸ್ಥಿತ ದಾಳಿ – ಆರಗ ಜ್ಯಾನೇಂದ್ರ.
ತೀರ್ಥಹಳ್ಳಿ :- ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಸಾವನ್ನು ಅಸ್ತ್ರವಾಗಿ ಹಿಡಿದು ಒಂದಿಷ್ಟು ಮಂದಿ ದುಡ್ಡು ಮಾಡುವ ದಂಧೆ ಮಾಡುತ್ತಿದ್ದಾರೆ. ಅವರಿಗೆ ಧರ್ಮಸ್ಥಳದ ಮಂಜುನಾಥ ದೇವರು ಶಿಕ್ಷೆ ಕೊಡದೆ ಇದ್ದರೂ, ಅಣ್ಣಪ್ಪ ಶಿಕ್ಷೆ ಕೊಟ್ಟೇ ಕೊಡುತ್ತಾನೆ ಎಂದು ವಸಂತ್ ಗಿಳಿಯಾರ್ ಹೇಳಿದರು.
ಇಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿ ಶಬರಿಮಲೆ, ತಿರುಪತಿ ದೇವಸ್ಥಾನದ ಮೇಲೆ ಆರೋಪಮಾಡಿ. ಈಗ ಧರ್ಮಸ್ಥಳದ ಮೇಲೆ ಏಡಪಂಥೀಯರು ಆರೋಪ ಮಾಡುತ್ತಿದ್ದಾರೆ. ಇದು ಎಲ್ಲಾ ಪಕ್ಷದ ಒಳಗಿರುವ ಒಂದಿಷ್ಟು ಮಂದಿ ನಕ್ಸಲ್ ಧೋಹಾಗೆ ಹೊಂದಿರುವವರು ಮಾಡುತ್ತಿದ್ದಾರೆ ಎಂದರು.
1974 ಭೂಸುಧಾರಣೆ ಕಾಯ್ದೆ ಬಂದ ಸಂದರ್ಭದಲ್ಲಿ ಸುಮಾರು 4072 ಎಕರೆ ಜಾಗ ಧರ್ಮಸ್ಥಳದ ಶ್ರೀ ಮಂಜುನಾಥನ ಹೆಸರಿನಲ್ಲಿತ್ತು. ಅಲ್ಲಿ ಸುಮಾರು 40 ಕುಟುಂಬಗಳು ದೇವರ ಹೆಸರಿನಲ್ಲಿದ್ದ ಜಾಗಕ್ಕೆ ಅರ್ಜಿಯನ್ನು ಸಲ್ಲಿಸಲು ಮುಂದಾಗಿರುವುದಿಲ್ಲ ಇಂತಹ ಸಮಯದಲ್ಲಿ ಸ್ವತಃ ವೀರೇಂದ್ರ ಹೆಗ್ಗಡೆಯವರು ಅವರನ್ನು ಮನವೊಲಿಸಿ ಅರ್ಜಿಯನ್ನು ಹಾಕಿಸಿ 3800 ಎಕರೆ ಬಡಜನರಿಗೆ ಬಿಟ್ಟುಕೊಟ್ಟಿದ್ದಾರೆ. ಅಂತವರ ವಿರುದ್ಧ ಅಪಪ್ರಚಾರ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ರಿಪ್ಪಿನ ಪೇಟೆಯಲ್ಲಿ ವಾಸವಿದ್ದ ಸುಜಾತ ಭಟ್ ರವರಿಗೆ ಮಕ್ಕಳಿರಲಿಲ್ಲ, ನಂತರ ಮಂಗಳೂರಿನ ಬಾಳಿಗ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಜಾತ ಭಟ್ ಬಾಳಿಗರವರನ್ನು ಒಳ ಹಾಕಿಕೊಳ್ಳುತ್ತಾರೆ. ನಂತರ ಬಾಳಿಗರವರು ನಿಗೂಢವಾಗಿ ಸಾವನ್ನಪ್ಪುತ್ತಾರೆ. ನಂತರ ಬೆಂಗಳೂರಿನ ರಂಗಪ್ಪನವರನ್ನು ಒಳಹಾಕಿಕೊಂಡ ಸುಜಾತರವರು ರಂಗಪ್ಪರವರ ಮಗಳು ವಸಂತಿಯವರನ್ನು ತನ್ನ ಮಗಳು ಅನನ್ಯ ಭಟ್ ಎಂದು ಹೇಳಿ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ ಎಂದರು.
ಮಾಜಿ ಗೃಹ ಸಚಿವ ಆರಗ ಜ್ಯಾನೇಂದ್ರ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಘಜನಿ ಮಹಮ್ಮದ್, ಘೋರಿ ಮಹಮ್ಮದ್ ರವರು ನಮ್ಮ ದೇಶದ ದೇವಸ್ಥಾನಗಳ ಮೇಲೆ ದಾಳಿ ಮಾಡಿ ನಾಶ ಮಾಡಿದ್ದರು. ಹೀಗೆ ಏಡಪಂಥೀಯ ಒಂದಿಷ್ಟು ಘಜನಿ ರೂಪದವರು ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ಯಾವುದೇ ಸರ್ಕಾರ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಹೆಗಡೆಯವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಮಾಡಿದ್ದಾರೆ. ಮದ್ಯವರ್ತಿ ಶಿಬಿರಗಳನ್ನು ಮಾಡಿ ಸಾವಿರಾರು ಕುಟುಂಬಗಳಿಗೆ ಬೆಳಕಾಗಿದ್ದಾರೆ. ಅಂತವರ ಮುಖಕ್ಕೆ ಮಸಿ ಬಳಿಯಲು ಹೊರಟ್ಟಿದ್ದಾರೆ.ಅದು ಸಾಧ್ಯವಿಲ್ಲ. ಏಡಪಂಥೀಯರಿಗೆ ಕ್ರೈಸ್ತ, ಮುಸ್ಲಿಂ ಧರ್ಮದ ಬಗ್ಗೆ ಮಾತನಾಡಿ ಬಂಡಿಸುವ ಧೈರ್ಯವಿಲ್ಲ. ಹಿಂದೂ ಧರ್ಮದವರು ದುರ್ಬಲರು ಎಂದು ಭಾವಿಸಿದ್ದಾರೆ. ಹಿಂದೂ ಧರ್ಮಕ್ಕೆ ಧಕ್ಕೆಯಾದರೆ ಹಿಂದೂ ಜನರು ಸೆಡ್ಡುಹೊಡೆದು ನಿಲ್ಲುತ್ತಾರೆ ಎಂದರು.
ಮಲೆನಾಡು ಪ್ರಾಧಿಕಾರದ ಅಧ್ಯಕ್ಷರಾದ R.M ಮಂಜುನಾಥಗೌಡ ಮಾತನಾಡಿ ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ. ಹಿಂದೂ ಧರ್ಮದ ವಿಚಾರದಲ್ಲಿ ದಕ್ಕೆ ಬಂದರೆ ಹೋರಾಡಲು ಸಿದ್ದನಿದ್ದೇನೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದರು.
ಬೃಹತ್ ಪ್ರತಿಭಟನೆಯಲ್ಲಿ ತಾಲ್ಲೂಕು ಬಿಜೆಪಿಯ ಅಧ್ಯಕ್ಷರಾದ ನವೀನ್ ಹೆದ್ದೂರು, ಸೊಪ್ಪುಗುಡ್ಡೆ ರಾಘವೇಂದ್ರ, ಗೀತಾ ರಮೇಶ್ ಮುಂತಾದವರಿದ್ದರು.