ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿ ನಿಸರ್ಗ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಅಡಿ ಮೂವರು ಆರೋಪಿಗಳನ್ನ ಪೊಲೀಸರು ಬಂದಿಸಿದ್ದು 615 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಮಂಗಳವಾರ ಶಿವಮೊಗ್ಗ ಡಿವೈಎಸ್.ಪಿ ನೇತೃತ್ವದಲ್ಲಿ, ತುಂಗಾನಗರದ ಪಿಎಸ್ ಐ ಮತ್ತು ಸಿಬ್ಬಂಧಿಗಳ ತಂಡವು ನಿಸರ್ಗ ಲೇ ಔಟ್ ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತರಾದ 1) ಮದಾರಿ ಪಾಳ್ಯದ ಮೊಹಮ್ಮದ್ ಫೀರ್ @ ಶಾಹೀದ್,(21), 2) ಯೂಸೂಫ್ ಖಾನ್, 20 ವರ್ಷ, ಮತ್ತು 3) ಮದಾರಿ ಪಾಳ್ಯದ ನಿವಾಸಿ ಮೊಹಮ್ಮದ್ ಆಸೀಫ್ @ ಮೊಹಮ್ಮದ್ ರಫೀಕ್ @ ಅಂಡಾ, 21 ರನ್ನ ಬಂಧಿಸಲಾಗಿದೆ.
ಆರೋಪಿತರಿಂದ 20,000 ರೂ. ಮೌಲ್ಯದ 615 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಂಡು ಮಾದಕ ವಸ್ತು ಮಾರಾಟ ನಿಷೇಧದ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.