
ಗೊಡೌನ್ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳ್ಳತನ
ಗೊಡೌನ್ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳ್ಳತನ ಶಿವಮೊಗ್ಗ: ನಗರದ ಆರ್.ಎಂ.ಎಲ್. ನಗರ ಪ್ರದೇಶದಲ್ಲಿ ಕಳ್ಳರು ಬೀಗ ಒಡೆದು ಗೋದಾಮಿನಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ನಡೆದಿದೆ. ಉದ್ಯಮಿಯೊಬ್ಬರಿಗೆ ಸೇರಿದ ಈ ಗೋದಾಮಿನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 20 ಚೀಲ ಅಡಿಕೆ ನಾಪತ್ತೆಯಾಗಿವೆ. ದೂರುದಾರರು ತಮ್ಮ ಮಳಿಗೆಯಲ್ಲಿ ಇರಿಸಲು ಸ್ಥಳಾವಕಾಶವಿಲ್ಲದೆ, ಕಳೆದ ಸೆಪ್ಟೆಂಬರ್ 21ರಂದು ಅನುಪಿನಕಟ್ಟೆ ಸಮೀಪದ ಶೀಟಿನ ಗೋದಾಮಿನಲ್ಲಿ ಅಡಿಕೆಯನ್ನು ಇಟ್ಟಿದ್ದರು. ಮಾರಾಟಕ್ಕೆ ಸಿದ್ಧಪಡಿಸಿದ್ದ ಈ ಅಡಿಕೆಯನ್ನು ನೋಡಿಕೊಳ್ಳಲು ಪರಿಚಯಸ್ಥರೊಬ್ಬರಿಗೆ…


