POSTMANNEWS

ನೈಜ ಸುದ್ದಿ ನೇರ ಬಿತ್ತರ..

ಪ್ರೀತಿ–ಕ್ಷಮೆಯಿಂದಲೇ ನೆಮ್ಮದಿ ಜೀವನ ಸಾಧ್ಯ: ಧರ್ಮಗುರು ರೋಮನ್ ಪಿಂಟೋ ಸಂದೇಶ

Religious leader Roman Pinto delivers a powerful message on love, forgiveness, and peaceful living during the Good Shepherd Church annual festival in Ripponpete, Karnataka.

ಪ್ರೀತಿ–ಕ್ಷಮೆಯಿಂದಲೇ ನೆಮ್ಮದಿ ಜೀವನ ಸಾಧ್ಯ: ಧರ್ಮಗುರು ರೋಮನ್ ಪಿಂಟೋ ಸಂದೇಶ

ರಿಪ್ಪನ್‌ಪೇಟೆ : ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ಗೌರವಿಸಬೇಕು; ಪ್ರೀತಿ ಮತ್ತು ಕ್ಷಮೆಯಿಂದಲೇ ಜಗತ್ತನ್ನೇ ಗೆಲ್ಲಬಹುದು ಎಂಬ ಪ್ರಭು ಏಸು ಸ್ವಾಮಿಯವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದು ಸೈಂಟ್ ಫ್ರಾನ್ಸಿಸ್ ಚರ್ಚ್ ಕಬಳೆಯ ಧರ್ಮಗುರು ರೋಮನ್ ಪಿಂಟೋ ಹೇಳಿದರು.

ಪಟ್ಟಣದ ಗುಡ್ ಶೆಪರ್ಡ್ ಚರ್ಚ್ ವಾರ್ಷಿಕ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಶುಭ ಸಂದೇಶ ನೀಡಿ ಸಮಾಜ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಆಧುನಿಕ ತಂತ್ರಜ್ಞಾನಗಳ ನಡುವೆಯೇ ಮನುಷ್ಯನು ನೆಮ್ಮದಿ ಜೀವನ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾನೆ. ಜಾತಿ–ಮತ–ಪಂಥಗಳ ಭೇದವನ್ನು ಮರೆತು, ಪರಸ್ಪರ ಪ್ರೀತಿ, ಕ್ಷಮೆ, ಸಹಕಾರ ಮನೋಭಾವದಿಂದ ಬದುಕಿದರೆ ಮಾತ್ರ ಎಲ್ಲರಿಗೂ ನೆಮ್ಮದಿ ಜೀವನ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಗುಡ್ ಶೆಪರ್ಡ್ ಚರ್ಚ್ ಧರ್ಮಗುರು ಬಿನೋಯ್ ಮ್ಯಾಥ್ಯೂಸ್ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಗುಡ್ ಶೆಪರ್ಡ್ ಚರ್ಚ್‌ನಿಂದ ವಿನಾಯಕ ವೃತ್ತದವರೆಗೆ ಏಸು ಕ್ರಿಸ್ತರ ಪ್ರತಿಮೆಯನ್ನು ಭಕ್ತಿಗಾನಗಳೊಂದಿಗೆ ಮೆರವಣಿಗೆಯ ಮೂಲಕ ತರಲಾಯಿತು. ಈ ಮೆರವಣಿಗೆಯಲ್ಲಿ ರಿಪ್ಪನ್‌ಪೇಟೆ ಸೇರಿದಂತೆ ಸಾಗರ, ಶಿವಮೊಗ್ಗ, ಹೊಸನಗರ ಭಾಗಗಳಿಂದ ಆಗಮಿಸಿದ ನೂರಾರು ಭಕ್ತರು ಪಾಲ್ಗೊಂಡರು.


ರಿಪ್ಪನ್‌ಪೇಟೆ ಗುಡ್ ಶೆಪರ್ಡ್ ಫೋರೋನ ದೇವಾಲಯದ ಧರ್ಮಗುರು ಬಿನೋಯ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಮೆರವಣಿಗೆ ಸಾಂಗವಾಗಿ ನಡೆಯಿತು.

ಕಾರ್ಯಕ್ರಮವನ್ನು ಸಬಾಸ್ಟಿನ್ ಮ್ಯಾಥ್ಯೂಸ್ ನಿರೂಪಿಸಿದರು.

About The Author

Exit mobile version